ಪಾಕ್ ಗಡಿಯಲ್ಲಿ 5 ಕೆಜಿ ಹೆರಾಯಿನ್ ಸಾಗಿಸುತ್ತಿದ್ದ ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆಗಳು! ಇಬ್ಬರ ಬಂಧನ
ಭಾರತ- ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಬಳಿ ಭದ್ರತಾ ಪಡೆಗಳು ಭಾನುವಾರ ಆರು ರೆಕ್ಕೆಗಳ ಡ್ರೋನ್ ಹೊಡೆದುರುಳಿಸಿದ್ದು, 5 ಕೆಜಿ ಹೆರಾಯಿನ್ ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ
ಪರಾರಿಯಾಗಲು ಯತ್ನಿಸಿದ ಇಬ್ಬರನ್ನೂ ಬಂಧಿಸಲಾಗಿದೆ.
Published: 22nd January 2023 08:36 PM | Last Updated: 22nd January 2023 08:39 PM | A+A A-

ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆಗಳು
ಅಮೃತಸರ: ಭಾರತ- ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಬಳಿ ಭದ್ರತಾ ಪಡೆಗಳು ಭಾನುವಾರ ಆರು ರೆಕ್ಕೆಗಳ ಡ್ರೋನ್ ಹೊಡೆದುರುಳಿಸಿದ್ದು, 5 ಕೆಜಿ ಹೆರಾಯಿನ್ ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ
ಪರಾರಿಯಾಗಲು ಯತ್ನಿಸಿದ ಇಬ್ಬರನ್ನೂ ಬಂಧಿಸಲಾಗಿದೆ.
ಪಂಜಾಬ್ ಪೊಲೀಸರ ಪ್ರಕಾರ, ಮುಂಜಾನೆ 4 ಗಂಟೆ ಸುಮಾರಿನಲ್ಲಿ ಡ್ರೋನ್ ಶಬ್ದ ಕೇಳಿಸಿಕೊಂಡ ಗಡಿ ಭದ್ರತಾ ಪಡೆ ಮತ್ತು ಅಮೃತಸರ ಪೊಲೀಸರು ಕಕ್ಕರ್ ಗ್ರಾಮದ ಲೋಪೋಕ್ ಪ್ರದೇಶದಲ್ಲಿ ಅದನ್ನು ಹೊಡೆದುರುಳಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಮಹತ್ವದ ಘಟನೆಯೊಂದರಲ್ಲಿ ಅಮೃತಸರ ಪೊಲೀಸರು, ಬಿಎಸ್ ಎಫ್ ಯೋಧರು ಜಂಟಿ ಕಾರ್ಯಾಚರಣೆ ನಡೆಸಿ, ಡ್ರೋನ್ ಹೊಡೆದುರುಳಿಸಿದ್ದು, 5 ಕೆಜಿ ಹೆರಾಯಿನ್ ವಶಕ್ಕೆ ಪಡೆದಿದ್ದಾರೆ ಎಂದು ಪಂಜಾಬ್ ಡಿಜಿಪಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಎಕೆ-47 ನಿಂದ ಒಟ್ಟು 12 ಸುತ್ತು ಗುಂಡು ಹಾರಿಸಿ ಇಬ್ಬರನ್ನು ಬಂಧಿಸಲಾಗಿದೆ. ಪತ್ತೆಯಾದ ಡ್ರೋನ್ ಬಿಡಿಭಾಗಗಳನ್ನು ಅಮೆರಿಕ ಮತ್ತು ಚೀನಾದಲ್ಲಿ ತಯಾರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದಕ್ಕೂ ಮುನ್ನಾ ಜನವರಿ 19 ರಂದು ರಾಜಸ್ಥಾನದ ಶ್ರೀ ಗಂಗಾನಗರದ ಭಾರತ-ಪಾಕ್ ಗಡಿಯಲ್ಲಿ ಡ್ರೋನ್ ಪತ್ತೆ ಹಚ್ಚಿದ ನಂತರ ಇಬ್ಬರನ್ನು ಬಂಧಿಸಲಾಗಿತ್ತು. ಈ ವೇಳೆ ಬಿಎಸ್ ಎಫ್ ಯೋಧರು ಸುಮಾರು 6.150 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದರು. ಆದರೆ, ಇತರ 3 ವ್ಯಕ್ತಿಗಳು ಪರಾರಿಯಾಗಿದ್ದರು.