ಕೇಂದ್ರ ಸರ್ಕಾರ 'ಗೋಡ್ಸೆ' ಸಿನಿಮಾ ಬ್ಯಾನ್ ಮಾಡಬೇಕು: ಅಸಾದುದ್ದೀನ್ ಓವೈಸಿ

ಪ್ರಧಾನಿ ನರೇಂದ್ರ ಮೋದಿ ಕುರಿತ ಬಿಬಿಸಿಯ ಸಾಕ್ಷ್ಯಚಿತ್ರವನ್ನು ನಿರ್ಬಂಧಿಸಿದಂತೆ ಮುಂಬರುವ ಮಹಾತ್ಮಗಾಂಧಿ ಅವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಕುರಿತಾದ ಸಿನಿಮಾವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬ್ಯಾನ್ ಮಾಡಬೇಕು ಎಂದು ಎಐಎಂಇಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಒತ್ತಾಯಿಸಿದ್ದಾರೆ.
ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕುರಿತ ಬಿಬಿಸಿಯ ಸಾಕ್ಷ್ಯಚಿತ್ರವನ್ನು ನಿರ್ಬಂಧಿಸಿದಂತೆ ಮುಂಬರುವ ಮಹಾತ್ಮಗಾಂಧಿ ಅವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಕುರಿತಾದ ಸಿನಿಮಾವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬ್ಯಾನ್ ಮಾಡಬೇಕು ಎಂದು ಎಐಎಂಇಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಒತ್ತಾಯಿಸಿದ್ದಾರೆ.

ಗೋಡ್ಸೆ ಸಿನಿಮಾ ಯಾವುದೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದಂತೆ ಕೇಂದ್ರ ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. 

2002ರಲ್ಲಿ ನಡೆದಿದ್ದ ಗುಜರಾತ್ ಹತ್ಯೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಕುರಿತಾದ ಬಿಬಿಸಿಯ ಸಾಕ್ಷ್ಯಚಿತ್ರವನ್ನು ಯೂ- ಟೂಬ್ ಮತ್ತು ಟ್ವಿಟರ್ ನಲ್ಲಿ ಮೋದಿ ಸರ್ಕಾರ ನಿರ್ಬಂಧಿಸುತ್ತದೆ. ಗುಜರಾತ್ ಹಿಂಸಾಚಾರ ನಡೆದಾಗ ನೀವು ಪ್ರಧಾನಿಯಾಗಿರಲಿಲ್ಲವೇ ಎಂದು ಮೋದಿ ಅವರನ್ನು ಕೇಳಲು ಬಯಸುತ್ತೇನೆ ಎಂದಿರುವ ಓವೈಸಿ, ನಾಥೂರಾಮ್ ಗೋಡ್ಸೆ ಸಿನಿಮಾ ಕುರಿತು ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರ ಅಭಿಪ್ರಾಯ ಬಯಸುವುದಾಗಿ ತಿಳಿಸಿದ್ದಾರೆ. 

ಗೋಡ್ಸೆ ಗಾಂಧಿಯನ್ನು ಕೊಂದ ಹಂತಕ. ಹಾಗಾದರೆ ಸ್ವಾತಂತ್ರ ಭಾರತದಲ್ಲಿ ಅತಿದೊಡ್ಡ ಉಗ್ರ ಯಾರು? ಎಂದು ಪ್ರಶ್ನಿಸಿರುವ ಓವೈಸಿ, ಈಗ ಗೋಡ್ಸೆ ಕುರಿತು ಸಿನಿಮಾ ಮಾಡಲಾಗುತ್ತಿದೆ. ಈ ಸಿನಿಮಾವನ್ನು ಪ್ರಧಾನಿ ಮೋದಿ ಬ್ಯಾನ್ ಮಾಡುತ್ತಾರೆಯೇ ಅಥವಾ ಅದನ್ನು ವೀಕ್ಷಿಸುವಂತೆ ಜನರಿಗೆ ಹೇಳುತ್ತಾರೆಯೇ? ಎಂದು ಕೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com