ಪುದುಚೇರಿ: ಅಪಘಾತದಲ್ಲಿ ತಾತನ ಮೂಳೆ ಮುರಿತ; ರಸ್ತೆ ಗುಂಡಿಯನ್ನು ಮುಚ್ಚಿದ 8ನೇ ತರಗತಿ ಬಾಲಕ
ತನ್ನ ಪ್ರದೇಶದಲ್ಲಿನ ರಸ್ತೆಯ ಕರುಣಾಜನಕ ಸ್ಥಿತಿಯಲ್ಲಿ ಚಲಿಸಿದ ತನ್ನ ತಾತ ಮೋಟಾರ್ ಸೈಕಲ್‌ನಿಂದ ಬಿದ್ದು ಗಾಯಗೊಂಡಿದ್ದಕ್ಕೆ ಪುದುಚೇರಿಯಲ್ಲಿ 8ನೇ ತರಗತಿಯ ವಿದ್ಯಾರ್ಥಿಯು ಅಪಘಾತಕ್ಕೆ ಕಾರಣವಾಗಿದ್ದ ರಸ್ತೆ ಗುಂಡಿಯನ್ನು ಮುಚ್ಚಲು ಮುಂದಾದ ಘಟನೆ ನಡೆದಿದೆ.
Published: 23rd January 2023 11:34 AM | Last Updated: 23rd January 2023 03:13 PM | A+A A-

ಪ್ರಾತಿನಿಧಿಕ ಚಿತ್ರ
ಪುದುಚೆರಿ: ತನ್ನ ಪ್ರದೇಶದಲ್ಲಿನ ರಸ್ತೆಯ ಕರುಣಾಜನಕ ಸ್ಥಿತಿಯಲ್ಲಿ ಚಲಿಸಿದ ತನ್ನ ತಾತ ಮೋಟಾರ್ ಸೈಕಲ್‌ನಿಂದ ಬಿದ್ದು ಗಾಯಗೊಂಡಿದ್ದಕ್ಕೆ ಪುದುಚೇರಿಯಲ್ಲಿ 8ನೇ ತರಗತಿಯ ವಿದ್ಯಾರ್ಥಿಯು ಅಪಘಾತಕ್ಕೆ ಕಾರಣವಾಗಿದ್ದ ರಸ್ತೆ ಗುಂಡಿಯನ್ನು ಮುಚ್ಚಲು ಮುಂದಾದ ಘಟನೆ ನಡೆದಿದೆ.
ರೈತರಾಗಿರುವ ತನ್ನ ತಾತ, ಕೆಲವು ದಿನಗಳ ಹಿಂದೆ ಮೋಟಾರ್ ಸೈಕಲ್‌ನಿಂದ ಬಿದ್ದು ಗುಂಡಿಗೆ ಬಿದ್ದು ಮೂಳೆ ಮುರಿತದಿಂದಾಗಿ ಆಸ್ಪತ್ರೆಗೆ ಸೇರಿದ್ದರು. ಇದರಿಂದ ನೋವಿಗೀಡಾದ 13 ವರ್ಷದ ಮಾಸಿಲಮಣಿ ತನ್ನ ಗ್ರಾಮದ ವಿವಿಧೆಡೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮರಳು, ಜಲ್ಲಿ ಮತ್ತು ಇತರ ವಸ್ತುಗಳನ್ನು ಸಂಗ್ರಹಿಸಿದ್ದಾನೆ. ಅವುಗಳನ್ನು ಸಿಮೆಂಟ್‌ನೊಂದಿಗೆ ಬೆರೆಸಿ ಪಕ್ಕದ ವಿಲಿಯನೂರ್‌ನ ಸೇಂಧನಾಥಂನಲ್ಲಿ ರಸ್ತೆಯ ಹೊಂಡ ಮತ್ತು ಇತರ ಹಾನಿಗೊಳಗಾದ ಭಾಗಗಳನ್ನು ತುಂಬಿದ್ದಾನೆ.
ಬಾಲಕನ ಕೆಲಸವನ್ನು ಮೆಚ್ಚಿ ನೀಡುತ್ತಿದ್ದ ಪುಸ್ತಕದ ಅಭಿನಂದನಾ ಪ್ರತಿಯನ್ನು ಸ್ವೀಕರಿಸಿ ಮಾತನಾಡಿದ ಬಾಲಕ, ನನ್ನ ತಾತನಂತೆ ಬೇರೆ ಯಾರೊಬ್ಬರೂ ಅಪಘಾತಕ್ಕೀಡಾಗಬಾರದು ಮತ್ತು ಗಾಯಗೊಳ್ಳಬಾರದು ಎಂಬುದು ನನ್ನ ಆಶಯ ಎಂದು ತಿಳಿಸಿದ್ದಾನೆ.
ಬಾಲಕನನ್ನು ನೆರೆಹೊರೆಯವರು ಅಭಿನಂದಿಸಿ ಶಾಲು ಹೊದಿಸಿ ಗೌರವಿಸಿದರು.
ಪುದುಚೇರಿ-ಪತುಕಣ್ಣು ಮಾರ್ಗವು ಕಳೆದ ಏಳು ವರ್ಷಗಳಿಂದ ಹದಗೆಟ್ಟಿದೆ ಮತ್ತು ರಸ್ತೆಯನ್ನು ಸರಿಪಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ನಿವಾಸಿಯೊಬ್ಬರು ಬಾಲಕನನ್ನು ಭೇಟಿಯಾದ ನಂತರ ಹೇಳಿದರು.