ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ: ಜೆಎನ್ ವಿವಿ ಕ್ಯಾಂಪಸ್ ನಲ್ಲಿ ಉದ್ವಿಗ್ನತೆ
ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ ನಿರ್ಮಿಸಿರುವ ವಿವಾದಾತ್ಮಕ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಜೆಎನ್ ಯು ವಿದ್ಯಾರ್ಥಿಗಳ ಒಕ್ಕೂಟ ಉದ್ದೇಶಿಸಿತ್ತು. ಆದರೆ, ಯೂನಿಯನ್ ಕಚೇರಿಯಲ್ಲಿ ವಿದ್ಯುತ್ ಹಾಗೂ ಇಂಟರ್ ನೆಂಟ್ ಸಂಪರ್ಕವನ್ನು ವಿವಿ ಆಡಳಿತ ಕಡಿತಗೊಳಿಸಿದ್ದರಿಂದ ಸಾಕ್ಷ್ಯಚಿತ್ರ ಪ್ರದರ್ಶಿಸಲು ಸಾಧ್ಯವಾಗಲಿಲ್ಲ ಎಂದು ಒಕ್ಕೂಟ ಆರೋಪಿಸಿದೆ.
Published: 25th January 2023 12:23 AM | Last Updated: 25th January 2023 05:16 PM | A+A A-

ಜೆಎನ್ ಯುನಲ್ಲಿ ವಿದ್ಯಾರ್ಥಿಗಳ ಚಿತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ ನಿರ್ಮಿಸಿರುವ ವಿವಾದಾತ್ಮಕ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಜೆಎನ್ ಯು ವಿದ್ಯಾರ್ಥಿಗಳ ಒಕ್ಕೂಟ ಉದ್ದೇಶಿಸಿತ್ತು. ಆದರೆ, ಯೂನಿಯನ್ ಕಚೇರಿಯಲ್ಲಿ ವಿದ್ಯುತ್ ಹಾಗೂ ಇಂಟರ್ ನೆಂಟ್ ಸಂಪರ್ಕವನ್ನು ವಿವಿ ಆಡಳಿತ ಕಡಿತಗೊಳಿಸಿದ್ದರಿಂದ ಸಾಕ್ಷ್ಯಚಿತ್ರ ಪ್ರದರ್ಶಿಸಲು ಸಾಧ್ಯವಾಗಲಿಲ್ಲ ಎಂದು ಒಕ್ಕೂಟ ಆರೋಪಿಸಿದೆ.
ಆದಾಗ್ಯೂ ವಿದ್ಯಾರ್ಥಿಗಳು ಆನ್ ಲೈನ್ ಆ್ಯಪ್ ಮೂಲಕ ತಮ್ಮ ಮೊಬೈಲ್ ಫೋನ್ ಗಳಲ್ಲಿ ಸಾಕ್ಷ್ಯಚಿತ್ರ ಡೌನ್ ಲೋಡ್ ಮಾಡಿಕೊಂಡು ವೀಕ್ಷಿಸಿದ್ದಾರೆ, ಅಲ್ಲದೇ ಅದನ್ನು ಶೇರ್ ಮಾಡಿರುವುದಾಗಿ ಅಖಿಲ ಭಾರತ ವಿದ್ಯಾರ್ಥಿಗಳ ಅಸೋಸಿಯೇಷನ್ ರಾಷ್ಟ್ರೀಯ ಅಧ್ಯಕ್ಷ ಎನ್ ಸಾಯಿ ಬಾಲಾಜಿ ಹೇಳಿದ್ದಾರೆ.
ಸಾಕ್ಷ್ಯಚಿತ್ರ ಪ್ರದರ್ಶಿಸುತ್ತಿದ್ದಾಗ ವಿವಿ ಕ್ಯಾಂಪಸ್ ನಲ್ಲಿ ಕಲ್ಲು ತೂರಾಟದ ವರದಿಯಾಗಿದೆ. ಆಡಳಿತದಿಂದ ಮುಖ್ಯದ್ವಾರವನ್ನು ಮುಚ್ಚಲಾಗಿತ್ತು. ಜೆಎನ್ ಯು ವಿದ್ಯಾರ್ಥಿ ಯೂನಿಯನ್ ಪದಾಧಿಕಾರಿಗಳ ಮೇಲೆ ಕಲ್ಲು, ಇಟ್ಟಿಗೆ ತೂರಾಟ ನಡೆಸಲಾಗಿದೆ. ಸಾಕ್ಷ್ಯಚಿತ್ರ ವೀಕ್ಷಿಸುತ್ತಿದ್ದ ಜೆಎನ್ ಎಸ್ ಯು ಸದಸ್ಯರು ಮತ್ತು ವಿದ್ಯಾರ್ಥಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಜೆಎನ್ ಯುಎಸ್ ಯು ಅಧ್ಯಕ್ಷ ಐಶೆ ಘೋಷ್ ಹೇಳಿದ್ದಾರೆ.
ಇದನ್ನೂ ಓದಿ: ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಗುಂಪಿನಿಂದ ಪ್ರಧಾನಿ ಮೋದಿ ಕುರಿತ BBCಯ ವಿವಾದಿತ ಸಾಕ್ಷ್ಯಚಿತ್ರ ಪ್ರದರ್ಶನ!
ಘಟನೆಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಈ ಘಟನೆ ನಂತರ ಎಬಿವಿಪಿ ಮತ್ತು ಭಾರತೀಯ ಜನತಾ ಪಾರ್ಟಿ ವಿರುದ್ಧ ಘೋಷಣೆ ಕೂಗಿ ಎಡಪಂಥೀಯ ವಿದ್ಯಾರ್ಥಿಗಳು ವಿವಿ ಕ್ಯಾಂಪಸ್ ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆದಾಗ್ಯೂ, ಇಲ್ಲಿಯವರೆಗೂ ಇಂತಹ ಘಟನೆ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ಡಿಸಿಪಿ ತಿಳಿಸಿದ್ದಾರೆ.
Delhi | Do these people hurling allegations have any evidence that we pelted stones? We did not pelt stones at all, say a JNU student from ABVP outfit Gaurav Kumar pic.twitter.com/DU4lnndzVM
— ANI (@ANI) January 24, 2023
ಮಂಗಳವಾರ ರಾತ್ರಿ 8-50ರ ಸುಮಾರಿನಲ್ಲಿ ವಿವಿ ಆಡಳಿತ ಜೆಎನ್ ಯುಎಸ್ ಯು ಕಚೇರಿಯಲ್ಲಿ ವಿದ್ಯುತ್ ಕಡಿತ ಮಾಡಿತು. ಇದರಿಂದ ಸಾಕ್ಷ್ಯಚಿತ್ರ ಪ್ರದರ್ಶನ ವಿಳಂಬವಾಯಿತು ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ. ಅಲ್ಲದೇ ವೈ ಫೈ ವ್ಯವಸ್ಥೆ ಕೂಡಾ ಸ್ಥಗಿತ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಅರ್ಧ ಗಂಟೆ ನಂತರ ಸಾಕ್ಷ್ಯಚಿತ್ರದ ಕ್ಯೂಆರ್ ಕೋಡ್ ಶೇರ್ ಮಾಡಲು ವಿದ್ಯಾರ್ಥಿ ಸಂಘಟನೆ ನಿರ್ಧರಿಸಿದ್ದು, ತಮ್ಮ ಮೊಬೈಲ್ ಫೋನ್ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ವೀಕ್ಷಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಕುರಿತ ಬಿಬಿಸಿ ಡಾಕ್ಯುಮೆಂಟರಿ: ಭಾರತ ಕೆಂಡ, ಇಷ್ಟಕ್ಕೂ ಅದರಲ್ಲೇನಿದೆ?
ಒಂದು ವೇಳೆ ಸಾಕ್ಷ್ಯಚಿತ್ರ ಪ್ರದರ್ಶನದಿಂದ ಎಬಿವಿಪಿಗೆ ತೊಂದರೆಯಾದಲ್ಲಿ ಅವರು ಸಮಾನಂತರ ಪ್ರದರ್ಶನ ಆಯೋಜಿಸಲಿ ಅಥವಾ ಇದರ ಬಗ್ಗೆ ಚರ್ಚೆ ನಡೆಸಲಿ ಎಂದು ಜೆಎನ್ ಯುಎಸ್ ಯು ಅಧ್ಯಕ್ಷ ಐಶೆ ಘೋಷ್ ಹೇಳಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸುಮಾರು 50 ಪೊಲೀಸ್ ಸಿಬ್ಬಂದಿ ಮತ್ತು ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿಯನ್ನು ಕ್ಯಾಂಪಸ್‌ನಲ್ಲಿ ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Delhi | Police personnel arrive outside JNU campus after students claimed stones were pelted during the screening of banned BBC documentary on PM Modi. pic.twitter.com/TK4WdbDsgp
— ANI (@ANI) January 24, 2023