ಪ್ರಧಾನಿ ಮೋದಿ ಕುರಿತ ಬಿಬಿಸಿ ಡಾಕ್ಯುಮೆಂಟರಿ: ಭಾರತ ಕೆಂಡ, ಇಷ್ಟಕ್ಕೂ ಅದರಲ್ಲೇನಿದೆ?

ಜಗತ್ತೀನಾದ್ಯಂತ ಪ್ರಧಾನಿ ಮೋದಿ ಕುರಿತ ಬಿಬಿಸಿ ಸಂಸ್ಥೆಯ ಸಾಕ್ಷ್ಯಚಿತ್ರದ ವ್ಯಾಪಕ ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ ಇತ್ತ ಕೇಂದ್ರ ಸರ್ಕಾರ ಬಿಬಿಸಿ ಡಾಕ್ಯುಮೆಂಟರಿ ಕುರಿತ ಟ್ವೀಟ್ ಗಳಿಗೆ ನಿರ್ಬಂಧ ಹೇರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಗತ್ತೀನಾದ್ಯಂತ ಪ್ರಧಾನಿ ಮೋದಿ ಕುರಿತ ಬಿಬಿಸಿ ಸಂಸ್ಥೆಯ ಸಾಕ್ಷ್ಯಚಿತ್ರದ ವ್ಯಾಪಕ ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ ಇತ್ತ ಕೇಂದ್ರ ಸರ್ಕಾರ ಬಿಬಿಸಿ ಡಾಕ್ಯುಮೆಂಟರಿ ಕುರಿತ ಟ್ವೀಟ್ ಗಳಿಗೆ ನಿರ್ಬಂಧ ಹೇರಿದೆ.

ಗುಜರಾತ್ ಗಲಭೆ ವಿಚಾರವಾಗಿ ಪ್ರಧಾನಿ ಮೋದಿ ಕುರಿತ ವಿಮರ್ಶಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ ಕುರಿತ ಟ್ವೀಟ್‌ಗಳನ್ನು ಕೇಂದ್ರ ಸರ್ಕಾರ ಶನಿವಾರ ನಿರ್ಬಂಧಿಸಿದ್ದು, 2002ರ ಗುಜರಾತ್ ಗಲಭೆ ಮತ್ತು ಪ್ರಧಾನಿ ನರೇಂದ್ರ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ಲಿಂಕ್‌ಗಳನ್ನು ತೆಗೆದುಹಾಕುವಂತೆ ಟ್ವಿಟರ್ ಮತ್ತು ಯೂಟ್ಯೂಬ್‌ಗೆ ಆದೇಶಿಸಿದೆ.

ಇಷ್ಟಕ್ಕೂ ಏನಿದು ವಿವಾದ? ಬಿಬಿಸಿ ಆ ವಿವಾದಿತ ಸಾಕ್ಷ್ಯಚಿತ್ರ ಯಾವುದು?
2002ರ ಗುಜರಾತ್ ಗಲಭೆ ವಿಚಾರವಾಗಿ ಬ್ರಿಟನ್ ಮೂಲದ ಸುದ್ದಿಸಂಸ್ಥೆ ಬಿಬಿಸಿ "ಇಂಡಿಯಾ: ದಿ ಮೋದಿ ಕ್ವಷ್ಚನ್" ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರ ತಯಾರಿಸಿದೆ. ಗುಜರಾತ್ ಗಲಭೆಯಲ್ಲಿ ಅಂದಿನ ಸಿಎಂ ಆಗಿದ್ದ ನರೇಂದ್ರ ಮೋದಿ ಅವರು ಕೈಗೊಂಡ ನಿರ್ಧಾರಗಳನ್ನು ಸಾಕ್ಷ್ಯಚಿತ್ರದಲ್ಲಿ ಟೀಕಿಸಲಾಗಿದ್ದು, ಡಾಕ್ಯುಮೆಂಟರಿಯನ್ನ 2 ಭಾಗಗಳಲ್ಲಿ ನಿರ್ಮಾಣ ಮಾಡಲಾಗಿದೆ. ಅಂದರೆ ಸಿರೀಸ್ ರೀತಿ ಬಿಡುಗಡೆ ಮಾಡಲಾಗಿದೆ. 

ವಿವಾದಿತ ಸಾಕ್ಷ್ಯಚಿತ್ರದಲ್ಲಿ ಏನಿದೆ?
ಈ ಡಾಕ್ಯುಮೆಂಟರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತದ ಮುಸ್ಲಿಂ ಅಲ್ಪಸಂಖ್ಯಾತರ ಕುರಿತು ಇರುವ ಧೋರಣೆಯನ್ನ ಬಿಂಬಿಸಲಾಗಿದೆಯಂತೆ. 2002ರಲ್ಲಿ ಗುಜರಾತ್ನಲ್ಲಿ ಸಂಭವಿಸಿದ ಗೋಧ್ರೋತ್ತರ ಗಲಭೆ ಕುರಿತ ಮಾಹಿತಿ ಇದೆಯಂತೆ. ಎಲ್ಲಕ್ಕಿಂತಾ ಹೆಚ್ಚಾಗಿ ಈ ಗಲಭೆಯಲ್ಲಿ ಮೋದಿ ಅವರ ಪಾತ್ರದ ಉಲ್ಲೇಖ ಇದ್ಯಂತೆ. ಈ ಗಲಭೆ ನಡೆದಾಗ ಮೋದಿ ಅವರು ಗುಜರಾತ್ನ ಮುಖ್ಯಮಂತ್ರಿ ಆಗಿದ್ದರು. ಇನ್ನು ಗಲಭೆ ನಂತರ ನಡೆದ ತನಿಖೆಗಳ ಬಗ್ಗೆ ಕೂಡಾ ಡಾಕ್ಯುಮೆಂಟರಿಯಲ್ಲಿ ಉಲ್ಲೇಖ ಇದ್ಯಂತೆ.. ಇದಲ್ಲದೆ ಮೋದಿ ಅವರು ಪ್ರಧಾನಿ ಆದ ಮೇಲೆ ಕೈಗೊಂಡ ಆರ್ಟಿಕಲ್ 370 ರದ್ದತಿ ನಿರ್ಧಾರದ ಬಗ್ಗೆಯೂ ಪ್ರಸ್ತಾಪ ಇದೆ ಅಂತಾ ಖುದ್ದಾಗಿ ಬಿಬಿಸಿ ಸಂಸ್ಥೆಯೇ ಹೇಳಿದೆ.

ಭಾರತದಲ್ಲಿ ಲಭ್ಯವಿಲ್ಲ
ಆದರೆ ಈ ವಿವಾದಿತ ಡಾಕ್ಯುಮೆಂಟರಿ ಸಿರೀಸ್ ಅನ್ನು ಭಾರತದಲ್ಲಿ ನೋಡಲು ಸಾಧ್ಯವಿಲ್ಲ.. ಬಿಬಿಸಿ ಭಾರತೀಯರಿಗೆ ಡಾಕ್ಯುಮೆಂಟರಿ ನೋಡೋಕೆ ಅವಕಾಶವನ್ನೇ ಕೊಟ್ಟಿಲ್ಲ.. 

ಬ್ರಿಟನ್‌ನಲ್ಲೇ ವಿರೋಧ!
ಪ್ರಧಾನಿ ಮೋದಿ ಬಗ್ಗೆ ಬಿಬಿಸಿ ಮಾಡಿರೋ ಈ ಡಾಕ್ಯುಮೆಂಟರಿ, ಬ್ರಿಟನ್ ದೇಶದಲ್ಲೇ ಆಕ್ರೋಶದ ಅಲೆ ಎಬ್ಬಿಸಿದೆ. ಪ್ರಜಾಪ್ರಭುತ್ವ ಇರುವ ಭಾರತ ದೇಶದಲ್ಲಿ ಪ್ರಜೆಗಳಿಂದಲೇ ಆಯ್ಕೆಯಾದ ಒಬ್ಬ ವ್ಯಕ್ತಿ ಬಗ್ಗೆ ಅವಹೇಳನ ಮಾಡೋದು ಸರಿಯಲ್ಲ ಅಂತಾ ಬ್ರಿಟನ್ನ ಸಂಸದ ಲಾರ್ಡ್ ರೆಮಿ ರೇಂಜರ್ ಸಿಟ್ಟಾಗಿದ್ದಾರೆ. ಬಿಬಿಸಿ ಪಕ್ಷಪಾತಿ ವರದಿಗಾರಿಕೆ ಮಾಡ್ತಿದೆ.. ಅಂತಾ ಚಾಟಿ ಬೀಸಿದ್ದಾರೆ. ಭಾರತದ ಪೊಲೀಸ್ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆಗೆ ಅಪಮಾನ ಮಾಡ್ತಿದ್ದೀರಿ, ಕೋಟ್ಯಂತರ ಭಾರತೀಯರಿಗೆ ಬೇಸರ ಮೂಡಿಸಿದ್ದೀರಿ ಎಂದು ಲಾರ್ಡ್ ರೆಮಿ ಹೇಳಿದ್ದಾರೆ. ಗಲಭೆ, ಜೀವ ಹಾನಿಯನ್ನು ಖಂಡಿಸಲೇ ಬೇಕು, ಜೊತೆಗೆ ಬಿಬಿಸಿ ಮಾಡಿರುವ ಪಕ್ಷಪಾತಿ ವರದಿಗಾರಿಕೆಯನ್ನೂ ಖಂಡಿಸಬೇಕು ಅಂತಾ ರೆಮಿ ಟ್ವೀಟ್ ಮಾಡಿದ್ದಾರೆ.

ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಭಾರತ ವಿರೋಧ
ಇನ್ನು ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಭಾರತ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಾಕ್ಷ್ಯಚಿತ್ರವನ್ನು "ಪ್ರಚಾರದ ತುಣುಕು"... ಇದು ವಸ್ತುನಿಷ್ಠತೆಯ ಕೊರತೆ ಮತ್ತು ವಸಾಹತುಶಾಹಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಕಿಡಿಕಾರಿದೆ. ಇದು ಸುಪ್ರೀಂ ಕೋರ್ಟ್‌ನ ಅಧಿಕಾರ ಮತ್ತು ವಿಶ್ವಾಸಾರ್ಹತೆಯ ಮೇಲೆ ದುಷ್ಪರಿಣಾಮಗಳನ್ನು ಬಿತ್ತರಿಸಲು, ಭಾರತದಲ್ಲಿನ ಸಮುದಾಯಗಳ ನಡುವೆ ವಿಭಜನೆಯನ್ನು ಬಿತ್ತಲು ಮತ್ತು ಕ್ರಮಗಳ ಮೇಲೆ ಆಧಾರರಹಿತ ಆರೋಪಗಳನ್ನು ಮಾಡುವ ಪ್ರಯತ್ನವಾಗಿದೆ ಎಂದೂ ಹೇಳಿದೆ.

ಮೋದಿ ಬೆನ್ನಿಗೆ ನಿಂತ ಬ್ರಿಟನ್ ಪ್ರಧಾನಿ ರಿಷಿ ಸುನಕ್
ಇತ್ತ ಬಿಬಿಸಿಯ ವಿವಾದಿತ ಸಾಕ್ಷ್ಯಚಿತ್ರ ಜಗತ್ತಿನಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬೆನ್ನಿಗೆ ನಿಂತಿದ್ದಾರೆ. ಈ ಕುರಿತು ಬ್ರಿಟನ್ ಸಂಸತ್ ನಲ್ಲೇ ಕಿಡಿಕಾರಿದ ಅವರು, 'ಗುಜರಾತ್ ಗಲಭೆ ಬಗ್ಗೆ ಬ್ರಿಟನ್ ಸರ್ಕಾರದ ನಿಲುವು ಸ್ಪಷ್ಟವಾಗಿದೆ ಮತ್ತು ದೀರ್ಘಕಾಲೀಕವಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ.. ಖಂಡಿತವಾಗಿಯೂ, ನಾವು ಎಲ್ಲಿಯೂ ಕಿರುಕುಳವನ್ನು ಸಹಿಸುವುದಿಲ್ಲ. ಆದರೆ ಪ್ರಧಾನಿ ಮೋದಿ ಅವರ ಪಾತ್ರವನ್ನು ನಾನು ಒಪ್ಪುತ್ತೇನೆ ಎಂದು ನನಗೆ ಅನಿಸುತ್ತಿಲ್ಲ ಎಂದು ಹೇಳಿದ್ದಾರೆ.

ಫೆಬ್ರವರಿ 2002 ರಲ್ಲಿ ಗಲಭೆ ಭುಗಿಲೆದ್ದಾಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ಮೋದಿ ಅವರು ತಪ್ಪು ಎಸಗಿದ್ದರು ಎಂಬುದಕ್ಕೆ ಸುಪ್ರೀಂ ಕೋರ್ಟ್ ನೇಮಿಸಿದ ತನಿಖೆಯಲ್ಲಿ ಯಾವುದೇ ಪುರಾವೆಗಳು ಕಂಡುಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com