ರಾಹುಲ್ ಗಾಂಧಿ 'ರಾಜಕೀಯ ಇಮೇಜ್' ಬದಲಾಯಿಸುವಲ್ಲಿ ಭಾರತ್ ಜೋಡೋ ಯಾತ್ರೆ ನೆರವು

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯ ರಾಜಕೀಯ ಇಮೇಜ್ ಬದಲಾಯಿಸುವಲ್ಲಿ ಭಾರತ್ ಜೋಡೋ ಯಾತ್ರೆ ನೆರವಾಗಿದೆ. ಐದು ತಿಂಗಳು ನಡೆಸಿದ  ಭಾರತ್ ಜೋಡೋ ಯಾತ್ರೆ, ಅತ್ಯಂತ ಪ್ರಸಿದ್ಧ ರಾಜಕೀಯ ವಂಶದ ಕುಡಿಯ  ಪ್ಲೇಬಾಯ್ ಇಮೇಜ್ ಕಳಚಲು ಸಹಾಯ ಮಾಡಿದೆ.
ರಾಹುಲ್  ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯ ರಾಜಕೀಯ ಇಮೇಜ್ ಬದಲಾಯಿಸುವಲ್ಲಿ ಭಾರತ್ ಜೋಡೋ ಯಾತ್ರೆ ನೆರವಾಗಿದೆ. ಐದು ತಿಂಗಳು ನಡೆಸಿದ ಭಾರತ್ ಜೋಡೋ ಯಾತ್ರೆ, ಅತ್ಯಂತ ಪ್ರಸಿದ್ಧ ರಾಜಕೀಯ ವಂಶದ ಕುಡಿಯ ಪ್ಲೇಬಾಯ್ ಇಮೇಜ್ ಕಳಚಲು ಸಹಾಯ ಮಾಡಿದೆ. ಆದರೆ, ಅವರ ರಾಜಕೀಯ ಅದೃಷ್ಟ ಪುನರುಜ್ಜೀವನಗೊಳಿಸುವ ಹಾದಿ ಕಠಿಣ ಪ್ರಯಾಣವಾಗಿದೆ.

ದೇಶದ ಬಹುಸಂಖ್ಯಾತ ಹಿಂದೂಗಳಿಗೆ ರಾಷ್ಟ್ರೀಯವಾದ ವಿಚಾರಗಳ ಮೂಲಕ ಅಧಿಕಾರ ನಡೆಸುತ್ತಿರುವ ಬಿಜೆಪಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಚುನಾವಣಾ ಕಾರ್ಯತಂತ್ರ, ಸವಾಲು ಎದುರಿಸಲು ರಾಹುಲ್ ಗಾಂಧಿ ವರ್ಷಗಳಿಂದ ಹೆಣಗಾಡುತ್ತಿದ್ದರು.

75 ವರ್ಷಗಳ ಹಿಂದೆ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯನ್ನು ಕೊನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಂಗ್ರೆಸ್ ಈಗ ಆಂತರಿಕ ಕಲಹ ಹಾಗೂ ಪಕ್ಷಾಂತರಿಗಳಿಂದ ನಲುಗಿದೆ. ಇಂತಹ ಸಂದರ್ಭದಲ್ಲಿ ರಾಹುಲ್ ಗಾಂಧಿ ಕೈಗೊಂಡ ಯಾತ್ರೆ ಪಕ್ಷಕ್ಕೆ ಹೊಸ ಚೈತನ್ಯ, ಹುಮ್ಮಸ್ಸನ್ನು ತರುವ ಜೊತೆಗೆ ರಾಹುಲ್ ಗಾಂಧಿ ಇಮೇಜ್ ಬದಲಾಯಿಸಿದೆ.

ಸಾರ್ವಜನಿಕ ಜೀವನದಲ್ಲಿ ಇದುವರೆಗೆ ತಪ್ಪಿಸಿಕೊಂಡಿದ್ದ ಅಧಿಕಾರದ ಗಾಳಿಯನ್ನು ಭಾರತ್ ಜೋಡೋ ಯಾತ್ರೆ ನೀಡಿದೆ. ರಾಹುಲ್ ಅಸಮರ್ಥ ವ್ಯಕ್ತಿ ಎಂಬ ಬಿಜೆಪಿಯ ಪ್ರಚಾರವನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಪಾರ್ಸಾ ವೆಂಕಟೇಶ್ವರ ರಾವ್ ಅಭಿಪ್ರಾಯ ಪಟ್ಟಿದ್ದಾರೆ.

ಕಳೆದ ಸೆಪ್ಟೆಂಬರ್ ನಲ್ಲಿ ಅವರ ಸುಧೀರ್ಘ ಯಾತ್ರೆ ಭಾರತದ ದಕ್ಷಿಣ ತುದಿಯಲ್ಲಿ ಪ್ರಾರಂಭವಾದಾಗಿನಿಂದ ರಾಹುಲ್ ಗಾಂಧಿ ಯಾತ್ರೆಯನ್ನು ಅಪಾರ ಸಂಖ್ಯೆಯಲ್ಲಿ ವೀಕ್ಷಿಸಿದ್ದಾರೆ.  ದೇಶದಲ್ಲಿನ ಪ್ರಮುಖ ಮಾಧ್ಯಮಗಳಿಗೆ ಸೆಡ್ಡು ಹೊಡೆದು ಅವರ ಸಾರ್ವಜನಿಕರನ್ನು ನೇರವಾಗಿ ತಲುಪುವ ಪ್ರಯತ್ನ ನಡೆಸಿದ್ದಾರೆ. ಯಾತ್ರೆಯಲ್ಲಿ ಅವರ ವಿಭಿನ್ನ ದೃಶ್ಯಾವಳಿಗಳು ಜನರನ್ನು ವಿಶೇಷವಾಗಿ ಮಕ್ಕಳನ್ನು ಆಕರ್ಷಿಸುವಂತಿತ್ತು.

3,500 ಕಿ.ಮೀ ದೂರದ ಪ್ರಯಾಣ ಸೋಮವಾರ ಕಾಶ್ಮೀರದಲ್ಲಿ ಅಂತ್ಯವಾಗಲಿದೆ. ಆದರೆ, ರಾಹುಲ್ ಗಾಂಧಿ ಅವರ ಇವೆಲ್ಲ ಕಸರತ್ತು ಮತಗಳಾಗಿ ವಿಭಜನೆಯಾಗಲಿದೆಯೇ ಎಂಬುದನ್ನು ತಿಳಿಯಲು ಮುಂಬರುವ ಲೋಕಸಭಾ ಚುನಾವಣೆವರೆಗೂ ಕಾಯಬೇಕಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com