ಡಬ್ಲ್ಯುಪಿಎಲ್: ಗುಜರಾತ್ ಜೈಂಟ್ಸ್ ತಂಡಕ್ಕೆ ಮಾರ್ಗದರ್ಶಕರಾಗಿ ಮಿಥಾಲಿ ರಾಜ್ ಆಯ್ಕೆ ಮಾಡಿದ ಅದಾನಿ

ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಗೆ ಗುಜರಾತ್ ಜೈಂಟ್ಸ್ ತಂಡಕ್ಕೆ ಮಾರ್ಗದರ್ಶಕರು ಹಾಗೂ ಸಲಹೆಗಾರರನ್ನಾಗಿ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರನ್ನು ನೇಮಕ ಮಾಡಲಾಗಿದೆ.
ಮಿಥಾಲಿ ರಾಜ್
ಮಿಥಾಲಿ ರಾಜ್

ಅಹ್ಮದಾಬಾದ್:  ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಗೆ ಗುಜರಾತ್ ಜೈಂಟ್ಸ್ ತಂಡಕ್ಕೆ ಮಾರ್ಗದರ್ಶಕರು ಹಾಗೂ ಸಲಹೆಗಾರರನ್ನಾಗಿ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರನ್ನು ನೇಮಕ ಮಾಡಲಾಗಿದೆ.

ಮಾರ್ಚ್-ಏಪ್ರಿಲ್ ನಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಗೆ ಚಾಲನೆ ಸಿಗಲಿದೆ. ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮಿಥಾಲಿ ರಾಜ್ ಅತಿ ಹೆಚ್ಚು ರನ್ ಗಳಿಸಿದ ಕ್ರಿಕೆಟ್ ಆಟಗಾರ್ತಿಯಾಗಿದ್ದು, 23 ವರ್ಷಗಳ ಬಳಿಕ ಕಳೆದ ವರ್ಷ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ಮಿಥಾಲಿ ರಾಜ್ ನಿವೃತ್ತಿ ಘೋಷಿಸಿದ್ದರು.

ಗುಜರಾತ್ ತಂಡಕ್ಕೆ ಮಾರ್ಗದರ್ಶನ ನೀಡುವ ಮೂಲಕ 40 ವರ್ಷದ ಕ್ರಿಕೆಟರ್ ಮಹಿಳಾ ಕ್ರಿಕೆಟ್ ನ್ನೂ ಉತ್ತೇಜಿಸಲಿದ್ದು, ಈ ಕ್ರೀಡೆಯ ಅಭಿವೃದ್ಧಿಗೆ ಗುಜರಾತ್ ನಲ್ಲಿ ಪ್ರಚಾರ ನಡೆಸಲಿದ್ದಾರೆ.

ಇತ್ತೀಚೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅಹ್ಮದಾಬಾದ್ ಫ್ರಾಂಚೈಸಿ 5 ತಂಡಗಳ ಪೈಕಿ ಅತಿ ದುಬಾರಿಯ ತಂಡ ಎಂಬ ಹೆಗ್ಗಳಿಕೆಗ ಪಾತ್ರವಾಗಿತ್ತು. ಇದಕ್ಕಾಗಿ ಅದಾನಿ ಸ್ಪೋರ್ಟ್ಸ್ ಲೈನ್ 1,289 ಕೋಟಿ ಖರ್ಚಾಗಿದೆ.

ಬಿಸಿಸಿಐ ನ ಈ ಹೊಸ ಯೋಜನೆ ಮಹಿಳಾ ಕ್ರಿಕೆಟ್ ಬೆಳೆಯಲು ಸ್ಥಿರವಾದ ವಾತಾವರಣ ಸಿಗಲಿದೆ ಹಾಗೂ ಯುವ ಆಟಗಾರರಿಗೆ ಕ್ರಿಕೆಟ್ ನ್ನು ವೃತ್ತಿಯನ್ನಾಗಿ ಸ್ವೀಕರಿಸಲು ಉತ್ತೇಜನ ಸಿಗಲಿದೆ ಎಂದು ಮಿಥಾಲಿ ರಾಜ್ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com