ಜ್ಞಾನವಾಪಿಯಲ್ಲಿ ಜು.24ರಿಂದ ಸಮೀಕ್ಷೆ ಪ್ರಾರಂಭ: ಆಗಸ್ಟ್ 4ರಂದು ನ್ಯಾಯಾಲಯಕ್ಕೆ ASI ವರದಿ ಸಲ್ಲಿಕೆ!

ಜ್ಞಾನವಾಪಿ ಆವರಣದಲ್ಲಿ ಜುಲೈ 24ರ ಬೆಳಗ್ಗೆ 7 ಗಂಟೆಯಿಂದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ASI) ಸಮೀಕ್ಷೆ ನಡೆಸಲಿದೆ. ಎಎಸ್‌ಐ ತಂಡ ನಾಳೆ ಬೆಳಗ್ಗೆ 7 ಗಂಟೆಗೆ ಜ್ಞಾನವಾಪಿ ಕ್ಯಾಂಪಸ್‌ಗೆ ಆಗಮಿಸಿ ಸಮೀಕ್ಷೆ ಆರಂಭಿಸಲಿದೆ.
ಜ್ಞಾನವಾಪಿ ಮಸೀದಿ
ಜ್ಞಾನವಾಪಿ ಮಸೀದಿ
Updated on

ಲಖನೌ(ಉತ್ತರಪ್ರದೇಶ): ಜ್ಞಾನವಾಪಿ ಆವರಣದಲ್ಲಿ ಜುಲೈ 24ರ ಬೆಳಗ್ಗೆ 7 ಗಂಟೆಯಿಂದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ASI) ಸಮೀಕ್ಷೆ ನಡೆಸಲಿದೆ. ಎಎಸ್‌ಐ ತಂಡ ನಾಳೆ ಬೆಳಗ್ಗೆ 7 ಗಂಟೆಗೆ ಜ್ಞಾನವಾಪಿ ಕ್ಯಾಂಪಸ್‌ಗೆ ಆಗಮಿಸಿ ಸಮೀಕ್ಷೆ ಆರಂಭಿಸಲಿದೆ. 

ಇಡೀ ಜ್ಞಾನವಾಪಿ ಕ್ಯಾಂಪಸ್‌ನಲ್ಲಿ ಎಎಸ್‌ಐ ಸಮೀಕ್ಷೆಯನ್ನು ನಡೆಸುವಂತೆ ಹಿಂದೂ ಕಡೆಯಿಂದ ಬೇಡಿಕೆ ಇಡಲಾಗಿತ್ತು. ಆದರೆ ಮುಸ್ಲಿಂ ಕಡೆಯವರು ಮತ್ತು ಮಸೀದಿ ಸಮಿತಿಯು ನ್ಯಾಯಾಲಯದಲ್ಲಿ ಹಿಂದೂ ಪಕ್ಷದ ವಾದವನ್ನು ಬಲವಾಗಿ ವಿರೋಧಿಸಿತು.

ಉತ್ತರಪ್ರದೇಶದ ವಾರಣಾಸಿ ಜಿಲ್ಲಾ ನ್ಯಾಯಾಲಯದಿಂದ ಜ್ಞಾನವಾಪಿ ಕ್ಯಾಂಪಸ್‌ನ ಎಎಸ್‌ಐ ಸಮೀಕ್ಷೆಯ ಆದೇಶದ ನಂತರ, ಪ್ರಕ್ರಿಯೆಯು ಸೋಮವಾರದಿಂದ ಪ್ರಾರಂಭವಾಗಲಿದೆ. ಎಎಸ್‌ಐ ತಂಡವು ಬೆಳಿಗ್ಗೆ 7 ಗಂಟೆಗೆ ಜ್ಞಾನವಾಪಿ ಕ್ಯಾಂಪಸ್‌ಗೆ ತಲುಪಿ ತನ್ನ ಸಮೀಕ್ಷೆಯನ್ನು ಪ್ರಾರಂಭಿಸುತ್ತದೆ. ಮಾಹಿತಿಯ ಪ್ರಕಾರ, ASI ತನ್ನ ಸಮೀಕ್ಷೆಯ ವರದಿಯನ್ನು ಆಗಸ್ಟ್ 4 ರೊಳಗೆ ವಾರಣಾಸಿಯ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ತಂಡವು ಎಲ್ಲಾ ಸಲಕರಣೆಗಳೊಂದಿಗೆ ವಾರಣಾಸಿ ತಲುಪಿದೆ. ಎಎಸ್‌ಐ ತಂಡ ವಾರಣಾಸಿ ಕಮಿಷನರ್‌ ಜತೆ ತಡರಾತ್ರಿವರೆಗೂ ಸಭೆ ನಡೆಸಿತು.

ಪ್ರಕರಣ ಸಂಬಂಧ ಜಿಲ್ಲಾ ನ್ಯಾಯಾಧೀಶ ಡಾ.ಅಜಯ್ ಕೃಷ್ಣ ವಿಶ್ವೇಶ್ ನ್ಯಾಯಾ ಪೀಠ ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯ ವಾದವನ್ನು ಆಲಿಸಿದ ನಂತರ ಜುಲೈ 14 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಇದಾದ ಬಳಿಕ ಜ್ಞಾನವಾಪಿ ಮಸೀದಿಯ ವಜುಖಾನ ಹೊರತುಪಡಿಸಿ ಎಎಸ್‌ಐನಿಂದ ಸರ್ವೆ ನಡೆಸುವಂತೆ ಜಿಲ್ಲಾ ನ್ಯಾಯಾಧೀಶರಿಗೆ ನ್ಯಾಯಾಲಯ ಆದೇಶ ನೀಡಿತ್ತು.

ಜಿಪಿಆರ್ (ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್) ಸಮೀಕ್ಷೆ, ಉತ್ಖನನ, ಡೇಟಿಂಗ್ ವಿಧಾನ ಮತ್ತು ಪ್ರಸ್ತುತ ರಚನೆಯ ಇತರ ಆಧುನಿಕ ತಂತ್ರಗಳನ್ನು ಬಳಸಿಕೊಂಡು ಎಎಸ್‌ಐ ನಿರ್ದೇಶಕರು ವಿವರವಾದ ವೈಜ್ಞಾನಿಕ ತನಿಖೆ ನಡೆಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದ್ದರಿಂದ ಇದನ್ನು ಹಿಂದೂ ದೇವಾಲಯದ ಪೂರ್ವ ಅಸ್ತಿತ್ವದಲ್ಲಿರುವ ರಚನೆಯ ಮೇಲೆ ನಿರ್ಮಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com