ಜನರನ್ನು ಹಾದಿ ತಪ್ಪಿಸುವ ಉದ್ದೇಶದಿಂದಲೇ 'INDIA' ಹೆಸರಿಟ್ಟುಕೊಂಡಿದ್ದಾರೆ: ವಿಪಕ್ಷಗಳ ಮೈತ್ರಿಕೂಟದ ವಿರುದ್ಧ ಬಿಜೆಪಿ ವಾಗ್ದಾಳಿ
ಜನರನ್ನು ಹಾದಿ ತಪ್ಪಿಸುವ ಉದ್ದೇಶದಿಂದಲೇ 'INDIA' ಹೆಸರಿಟ್ಟುಕೊಂಡಿದ್ದಾರೆ ಎಂದು ವಿಪಕ್ಷಗಳ ಮೈತ್ರಿಕೂಟದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
Published: 26th July 2023 03:08 PM | Last Updated: 26th July 2023 05:08 PM | A+A A-

ಬಿಜೆಪಿ ಸಭೆ (ಸಂಗ್ರಹ ಚಿತ್ರ)
ನವದೆಹಲಿ: ಜನರನ್ನು ಹಾದಿ ತಪ್ಪಿಸುವ ಉದ್ದೇಶದಿಂದಲೇ 'INDIA' ಹೆಸರಿಟ್ಟುಕೊಂಡಿದ್ದಾರೆ ಎಂದು ವಿಪಕ್ಷಗಳ ಮೈತ್ರಿಕೂಟದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ, 'ಅವರು ಕೇವಲ "ಜನರನ್ನು ದಾರಿ ತಪ್ಪಿಸುವ" ಹೆಸರಾಗಿ 'ಇಂಡಿಯಾ'ವನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು. ಬಿಜೆಪಿಯ ಸಾಪ್ತಾಹಿಕ ಸಂಸದೀಯ ಪಕ್ಷದ ಸಭೆಯಲ್ಲಿ ಮೋದಿ ಈ ಹೇಳಿಕೆ ನೀಡಿದ್ದಾರೆ. "ಭಾರತೀಯ ರಾಷ್ಟ್ರೀಯ ಕಾಂಗ್ರೆಸ್. ಈಸ್ಟ್ ಇಂಡಿಯಾ ಕಂಪನಿ. ಇಂಡಿಯನ್ ಮುಜಾಹಿದೀನ್. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ - ಇವು ಕೂಡ ಇಂಡಿಯಾವೇ... ಕೇವಲ ಇಂಡಿಯಾ ಎಂಬ ಹೆಸರನ್ನು ಬಳಸುವುದರಿಂದ ಏನೂ ಅರ್ಥವಾಗುವುದಿಲ್ಲ ಎಂದು ರವಿಶಂಕರ್ ಪ್ರಸಾದ್ ಸಭೆಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಲೂಟಿ ಮಾಡಿ ಓಡಿಹೋಗಿರುವ ನೀರವ್ ಮೋದಿ, ಲಲಿತ್ ಮೋದಿ ಹೆಸರಿನಲ್ಲಿಯೂ ನಿಮ್ಮ ಹೆಸರಿನ ಮೋದಿ ಇದೆಯಲ್ಲಾ?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ದ ವಿರೋದ ಪಕ್ಷಗಳ ಮೈತ್ರಿಕೂಟ “ಇಂಡಿಯಾ” ಅವಿಶ್ವಾಸ ಮಂಡನೆ ಮಾಡಿರುವುದು ಭಾರತದ ಮೇಲಿನ ದಾಳಿ ಎಂದು ಹಲವು ಕೇಂದ್ರ ಸಚಿವರು ವಿರೋಧ ಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸಚಿವರಾದ ಎಸ್. ಜೈಶಂಕರ್, ನಿರ್ಮಲಾ ಸೀತಾರಾಮನ್, ಕಿರಣ್ ರಿಜಿಜು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾಂಗ್ರೆಸ್ ಸೇರಿದಂತೆ ವಿರೋದ ಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
Irony that those who seek intervention from abroad now believe that I.N.D.I.A can serve as a cover.
— Dr. S. Jaishankar (@DrSJaishankar) July 25, 2023
Not to worry; the people will see through it.
ಇಂಡಿಯಾ ಮೈತ್ರಿಕೂಟವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈಸ್ಟ್ ಇಂಡಿಯಾ ಕಂಪನಿ ಅಥವಾ ಇಂಡಿಯನ್ ಮುಜಾಹಿದ್ದೀನ್ ನಡುವೆ ಸಮಾನಾಂತರ ವಿರೋಧ ಪಕ್ಷಗಳ ಮೇಲೆ ಮುಗಿ ಬಿದ್ದಿವೆ. ವಿರೋಧ ಪಕ್ಷಗಳು ಅವಿಶ್ವಾಸ ಗೊತ್ತುವಳಿಯಿಂದ ಹೆದರುವ ಅಗತ್ಯವಿಲ್ಲ. ದೇಶದ ಜನರು ಎಲ್ಲವನ್ನೂ ನೋಡುತ್ತಾರೆ ಎಂದು ಕೇಂದ್ರ ಸಚಿವ ಎಸ್ ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಅವಿಶ್ವಾಸ ನಿರ್ಣಯ ಮಂಡನೆ: ಸ್ಪೀಕರ್‌ಗೆ ಪ್ರಸ್ತಾವನೆ ಸಲ್ಲಿಸಿದ ಕಾಂಗ್ರೆಸ್; ಸ್ಪೀಕರ್ ಓಂಬಿರ್ಲಾ ಹೇಳಿದ್ದೇನು?
“ಭಾರತದಲ್ಲಿ ಚುನಾಯಿತ ಸರ್ಕಾರವನ್ನು ತೆಗೆಯಲು ಪಾಕಿಸ್ತಾನದ ಸಹಾಯ ಬೇಡಿಕೊಂಡವರು ಈಗ ಇಂಡಿಯಾ ಹೆಸರನ್ನು ಲಾಭ ಮಾಡಿಕೊಳ್ಳಲು ಬಯಸುತ್ತಾರೆ. ಹಿಂದಿ ಮಾತ್ರ ಬಳಸಿ ಉಪನ್ಯಾಸ ನೀಡಿದವರು, ಈಗ ಭಾರತವನ್ನು ಮರೆತು ಐಎನ್‌ಡಿಐಎ ಪರವಾಗಿ ಮಾತನಾಡುತ್ತಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೂರಿದ್ಧಾರೆ.
Those who begged Pakistan’s help to throw out an elected government in India now want to capitalise on the name I.N.D.I.A.
— Nirmala Sitharaman (@nsitharaman) July 25, 2023
Those who lectured on using only Hindi, now forget Bharat and don’t mind I.N.D.I.A.
Those who forgot India serving only a dynasty/family/caste today remember…
ವಿರೋಧ ಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ ಇಂಡಿಯಾ ಎಂದು ಹೆಸರನ್ನು ಬದಲಾಯಿಸುವುದರಿಂದ ಯುಪಿಎಯ ’ಹೌಡಿಂಗ್ ಪಾಸ್ಟ್’ ಅನ್ನು ಅಳಿಸಲಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
In a bid to get rid of its hounding past, the opposition alliance has changed its nomenclature. But merely changing the name to I.N.D.I.A. will not erase their past deeds from public memory.
— Amit Shah (@AmitShah) July 25, 2023
The people of our country are wise enough to see through this propaganda and will treat…
ಇದನ್ನೂ ಓದಿ: ಸುಪ್ರೀಂ ಕೋರ್ಟ್ ಹೇಳುವವರೆಗೂ ಮಣಿಪುರ ಕುರಿತು ಮೌನವಾಗಿದ್ದ ಪ್ರಧಾನಿ ಬಗ್ಗೆ INDIA ವಿಶ್ವಾಸವಿಡುವುದು ಹೇಗೆ?: ಕಪಿಲ್ ಸಿಬಲ್
लगता है तीर निशाने पर लगा है…तकलीफ़ बहुत हो रही है… https://t.co/dEChATu1Kw
— Arvind Kejriwal (@ArvindKejriwal) July 25, 2023
ಕೇಜ್ರಿವಾಲ್ ತಿರುಗೇಟು
ವಿರೋಧ ಪಕ್ಷಗಳ ಮೈತ್ರಿಕೂಟವನ್ನು ಟೀಕಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್‌ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ. ವಿರೋಧ ಪಕ್ಷಗಳು ಒಗ್ಗೂಡಿ ಕೇಂದ್ರ ಸರ್ಕಾರದ ವಿರುದ್ದ ಮುಗಿ ಬಿದ್ದಿರುವುದು ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರಿಗೆ ಸಹಿಸಲು ಆಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.