ಮಣಿಪುರ ಬಿಕ್ಕಟ್ಟಿನ ಹಿಂದೆ ಚೀನಾ ಕೈವಾಡ!: ಮಾಜಿ ಸೇನಾ ಮುಖ್ಯಸ್ಥರ ಸುಳಿವು 

ಮಣಿಪುರ ಹಿಂಸಾಚಾರದ ಹಿಂದೆ ವಿದೇಶದ ಕೈವಾಡ ಇರುವುದನ್ನು ತಳ್ಳಿಹಾಕುವಂತಿಲ್ಲ ಎಂದು ಸೇನಾ ಸಿಬ್ಬಂದಿಗಳ ಮಾಜಿ ಮುಖ್ಯಸ್ಥ ಜನರಲ್ ಎಂಎಂ ನರಾವಣೆ ಅಭಿಪ್ರಾಯಪಟ್ಟಿದ್ದಾರೆ.
ಮನೋಜ್ ಮುಕುಂದ್​ ನರಾವಣೆ
ಮನೋಜ್ ಮುಕುಂದ್​ ನರಾವಣೆ
Updated on

ನವದೆಹಲಿ: ಮಣಿಪುರ ಹಿಂಸಾಚಾರದ ಹಿಂದೆ ವಿದೇಶದ ಕೈವಾಡ ಇರುವುದನ್ನು ತಳ್ಳಿಹಾಕುವಂತಿಲ್ಲ ಎಂದು ಸೇನಾ ಸಿಬ್ಬಂದಿಗಳ ಮಾಜಿ ಮುಖ್ಯಸ್ಥ ಜನರಲ್ ಎಂಎಂ ನರಾವಣೆ ಅಭಿಪ್ರಾಯಪಟ್ಟಿದ್ದಾರೆ.

ಮಣಿಪುರದಲ್ಲಿನ ಹಲವು ಬಂಡುಕೋರರ ಗುಂಪುಗಳಿಗೆ ಚೀನಾ ಸಹಾಯದ ಪಾತ್ರವನ್ನು ನರಾವಣೆ ಒತ್ತಿ ಹೇಳಿದ್ದಾರೆ.

ಭಾರತ ಅಂತರಾಷ್ಟ್ರೀಯ ಕೇಂದ್ರದಲ್ಲಿ 'ರಾಷ್ಟ್ರೀಯ ಭದ್ರತಾ ದೃಷ್ಟಿಕೋನಗಳು' ಎಂಬ ವಿಷಯವಾಗಿ ಮಾತನಾಡುತ್ತಾ, ಚೀನಾವನ್ನು ಪರೋಕ್ಷವಾಗಿ ಉಲ್ಲೇಖಿಸಿರುವ ನರಾವಣೆ, ಆಂತರಿಕ ಭದ್ರತ ಬಹಳ ಮುಖ್ಯವಾದದ್ದಾಗಿದ್ದು, ನೆರೆಯ ರಾಷ್ಟ್ರವಷ್ಟೇ ಅಲ್ಲದೇ,  ಗಡಿ ರಾಜ್ಯದಲ್ಲಿ ಅಸ್ಥಿರತೆ ಇದ್ದರೆ, ಅದು ನಮ್ಮ ಇಡೀ ರಾಷ್ಟ್ರೀಯ ಭದ್ರತೆಗೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

ಅಸ್ಥಿರತೆ ಇರುವ ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com