
ಶ್ಲೋಕಾ ಮತ್ತು ಆಕಾಶ್ ಅಂಬಾನಿ
ಮುಂಬಯಿ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ-ನೀತಾ ಅಂಬಾನಿ ಹಿರಿಯ ಮಗ ಅಕಾಶ್ ಅಂಬಾನಿ ಪತ್ನಿ ಶ್ಲೋಕಾ ಮೆಹ್ತಾ ಎರಡನೇ ಮಗುವಿಗೆ ಜನ್ಮನೀಡಿದ್ದಾರೆ.
ಈ ದಂಪತಿಗೆ ಮೇ 31, ಬುಧವಾರದಂದು ಹೆಣ್ಣು ಮಗು ಜನಿಸಿದೆ. ಅಕಾಶ್ ದಂಪತಿಗೆ ಈಗಾಗಲೇ ಒಂದು ಗಂಡು ಮಗುವಿದ್ದು, ಅದಕ್ಕೆ ಪೃಥ್ವಿ ಅಂಬಾನಿ ಎಂದು ಹೆಸರಿಟ್ಟಿದ್ದಾರೆ. ಇದೀಗ ಭಾರತದ ಶ್ರೀಮಂತ ಕುಟುಂಬವಾದ ಅಂಬಾನಿ ಪ್ಯಾಮಿಲಿಗೆ ಮತ್ತೊಂದು ಹೆಣ್ಣು ಮಗು ಜನಿಸಿದ್ದು, ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.
ಆಕಾಶ್ ಅಂಬಾನಿ ಮತ್ತು ಶ್ಲೋಕಾ ಅಂಬಾನಿ 2019 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಶ್ಲೋಕಾ 2021 ರಲ್ಲಿ ತನ್ನ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಇದೀಗ ಆಕಾಶ್ ಮತ್ತು ಶ್ಲೋಕಾ ಮತ್ತೊಮ್ಮೆ ಪೋಷಕರಾಗಿದ್ದಾರೆ.