
ಹಳಿ ತಪ್ಪಿದ ಸರಕು ಸಾಗಾಣಿಕಾ ರೈಲು
ಭುವನೇಶ್ವರ: 275 ಮಂದಿಯ ಸಾವಿಗೆ ಕಾರಣವಾದ ಬಾಲಾಸೋರ್ ರೈಲು ದುರಂತ ಹಸಿರಾಗಿರುವಂತೆಯೇ ಇತ್ತ ಒಡಿಶಾದಲ್ಲಿ ಮತ್ತೊಂದು ರೈಲು ಹಳಿ ತಪ್ಪಿರುವ ಕುರಿತು ವರದಿಯಾಗಿದೆ.
ಒಡಿಶಾದ ಬಾರ್ಗಡ್ ಜಿಲ್ಲೆಯಲ್ಲಿ ಸರಕು ಸಾಗಾಣಿಕಾ ರೈಲು ಹಳಿ ತಪ್ಪಿದ್ದು, ರೈಲಿನ ಐದು ಬೋಗಿಗಳು ಹಳಿ ತಪ್ಪಿವೆ ಎಂದು ತಿಳಿದುಬಂದಿದೆ. ಈ ವರೆಗೂ ಯಾವುದೇ ಸಾವು-ನೋವು ವರದಿಯಾಗಿಲ್ಲವಾದರೂ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ರೈಲ್ವೇ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ.
5 wagons of goods train derailed in Bargarh, #Odisha#OdishaTrainAccident pic.twitter.com/Y4GoyoAmZ2
— Utkarsh Mishra (उत्कर्ष मिश्रा) (@UtkarshMishra_9) June 5, 2023
ಸುಣ್ಣದಕಲ್ಲು ಹೊತ್ತೊಯ್ಯುತ್ತಿದ್ದ ಸರಕು ರೈಲು ಇತ್ತೀಚೆಗೆ ಅಪಘಾತಕ್ಕೀಡಾದ ಸ್ಥಳದಿಂದ ಸುಮಾರು 500 ಕಿಮೀ ದೂರದಲ್ಲಿರುವ ಬರ್ಗಢ್ ಪ್ರದೇಶದಲ್ಲಿ ಹಳಿ ತಪ್ಪಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ; ಒಡಿಶಾ: ಅಪಘಾತದ 51 ಗಂಟೆಗಳ ನಂತರ ಬಾಲಸೋರ್ ನಲ್ಲಿ ರೈಲು ಸಂಚಾರ ಆರಂಭ; ಕೈ ಮುಗಿದ ಸಚಿವ ಅಶ್ವಿನ್ ವೈಷ್ಣವ್
3 ದಿನಗಳ ಹಿಂದಷ್ಟೇ ಇದೇ ಒಡಿಶಾದ ಬಾಲಾಸೋರ್ ನಲ್ಲಿ ಮೂರು ರೈಲುಗಳ ಅಪಘಾತವಾಗಿ 275 ಮಂದಿ ಸಾವಿಗೀಡಾಗಿ ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಮೊದಲು ರೈಲೊಂದು ಹಳಿ ತಪ್ಪಿ, ಬಳಿಕ ಅದಕ್ಕೆ ಗೂಡ್ಸ್ ರೈಲು ಮತ್ತು ಪ್ಯಾಸೆಂಜರ್ ರೈಲು ಢಿಕ್ಕಿಯಾಗಿ ಇತಿಹಾಸದ ಭೀಕರ ರೈಲು ದುರಂತ ಸಂಭವಿಸಿತ್ತು.