ಒಡಿಶಾ: ತ್ರಿವಳಿ ರೈಲು ದುರಂತ ಸಂಭವಿಸಿದ ಸ್ಥಳಕ್ಕೆ ಸಿಬಿಐ ತಂಡ ಭೇಟಿ, ತನಿಖೆ ಆರಂಭ
10 ಸದಸ್ಯರನ್ನೊಳಗೊಂಡ ಸಿಬಿಐ ತಂಡ ಸೋಮವಾರ ಬಾಲಸೋರ್ ರೈಲು ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದು, ತ್ರಿವಳಿ ರೈಲು ಅಪಘಾತದ ತನಿಖೆಯನ್ನು ಪ್ರಾರಂಭಿಸಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Published: 05th June 2023 11:51 PM | Last Updated: 05th June 2023 11:53 PM | A+A A-

ರೈಲು ಅಪಘಾತದ ಸ್ಥಳ
ಬಾಲಾಸೋರ್: 10 ಸದಸ್ಯರನ್ನೊಳಗೊಂಡ ಸಿಬಿಐ ತಂಡ ಸೋಮವಾರ ಬಾಲಸೋರ್ ರೈಲು ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದು, ತ್ರಿವಳಿ ರೈಲು ಅಪಘಾತದ ತನಿಖೆಯನ್ನು ಪ್ರಾರಂಭಿಸಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಬಿಐ ತನಿಖೆ ಪ್ರಾರಂಭವಾಗಿದೆ ಆದರೆ ವಿವರಗಳು ತಕ್ಷಣವೇ ತಿಳಿದು ಬಂದಿಲ್ಲ ಎಂದು ಇಕೋಆರ್‌ನ ಖುರ್ದಾ ರಸ್ತೆ ವಿಭಾಗದ ಡಿಆರ್‌ಎಂ ರಿಂತೇಶ್ ರೇ ಅವರ ಮಾಹಿತಿಯ ಪ್ರಕಾರ ಅಪಘಾತದ ಕುರಿತು ಸಿಬಿಐ ತನಿಖೆಗೆ ರೈಲ್ವೆ ಮಂಡಳಿ ಭಾನುವಾರ ಶಿಫಾರಸು ಮಾಡಿತ್ತು.
ಇದನ್ನೂ ಓದಿ: ಒಡಿಶಾ ರೈಲು ದುರಂತ: ನಿರ್ಲಕ್ಷ್ಯವೇ ಸಾವಿಗೆ ಕಾರಣ, ರೈಲ್ವೆ ಪೊಲೀಸರಿಂದ ಪ್ರಕರಣ ದಾಖಲು
ಇದಕ್ಕೂ ಮುನ್ನ ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದ ರೈಲ್ವೆ ಸುರಕ್ಷತಾ ಆಯುಕ್ತ ಶೈಲೇಶ್ ಕುಮಾರ್ ಪಾಠಕ್ ಬಹನಾಗಾ ಬಜಾರ್ ರೈಲು ನಿಲ್ದಾಣದ ನಿಯಂತ್ರಣ ಕೊಠಡಿ, ಸಿಗ್ನಲ್ ರೂಂ ಮತ್ತು ಸಿಗ್ನಲ್ ಪಾಯಿಂಟ್‌ಗೆ ತೆರಳಿ ಪರಿಶೀಲನೆ ನಡೆಸಿದರು.
ಇದಲ್ಲದೆ, ಬಾಲಸೋರ್‌ನ ಸರ್ಕಾರಿ ರೈಲ್ವೆ ಪೊಲೀಸರು ಜೂನ್ 3 ರಂದು ಭಾರತೀಯ ದಂಡ ಸಂಹಿತೆ ಮತ್ತು ರೈಲ್ವೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಪಘಾತದ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.