ಹಳಿತಪ್ಪಿ ಏಳು ಬಾರಿ ರೈಲು ಅಪಘಾತ ಸಂಭವಿಸಿವೆ ಎಂಬ ಸಿಎಜಿ ವರದಿ ನೀಡಿದ್ದರೂ ಏಕೆ ನಿರ್ಲಕ್ಷ್ಯ ಮಾಡಿದಿರಿ? ಪ್ರಧಾನಿಗೆ ಖರ್ಗೆ ಪತ್ರ

ಒಡಿಶಾ ರೈಲ್ವೆ ದುರಂತದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಮವಾರ ಪತ್ರ ಬರೆದಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರ ಎಲ್ಲಾ ಪೊಳ್ಳು ಸುರಕ್ಷತಾ ಹೇಳಿಕೆಗಳು ಈಗ ಬಹಿರಂಗಗೊಂಡಿವೆ. ರೈಲುಗಳ ಅಪಘಾತಕ್ಕೆ ನಿಜವಾದ ಕಾರಣಗಳೇನು ಎಂದು ಸರ್ಕಾರವು ನಿಜವಾದ ಕಾರಣವನ್ನು ಬೆಳಕಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ. 
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಒಡಿಶಾ ರೈಲ್ವೆ ದುರಂತದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಮವಾರ ಪತ್ರ ಬರೆದಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರ ಎಲ್ಲಾ ಪೊಳ್ಳು ಸುರಕ್ಷತಾ ಹೇಳಿಕೆಗಳು ಈಗ ಬಹಿರಂಗಗೊಂಡಿವೆ. ರೈಲುಗಳ ಅಪಘಾತಕ್ಕೆ ನಿಜವಾದ ಕಾರಣಗಳೇನು ಎಂದು ಸರ್ಕಾರವು ನಿಜವಾದ ಕಾರಣವನ್ನು ಬೆಳಕಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ. 

ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಖರ್ಗೆ ಅವರು ಘಟನೆಯನ್ನು ಸಿಬಿಐ ತನಿಖೆಗೆ ವಹಿಸಿದ್ದಕ್ಕೆ ರೈಲ್ವೆ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾನೂನು ಜಾರಿ ಸಂಸ್ಥೆಯಾದ ಸಿಬಿಐ ಅಪರಾಧಗಳನ್ನು ತನಿಖೆ ಮಾಡಲು ಇರುವುದೇ ಹೊರತು ರೈಲ್ವೆ ಅಪಘಾತಗಳಿಗಲ್ಲ ಎಂದಿದ್ದಾರೆ. 

"ರೈಲ್ವೆ ಇಲಾಖೆಯ ಉಸ್ತುವಾರಿ ವಹಿಸಿಕೊಂಡವರು, ನಿಮ್ಮ ಸಂಪುಟ ಸಹೋದ್ಯೋಗಿಗಳು ಮತ್ತು ರೈಲ್ವೆ ಸಚಿವ ವೈಷ್ಣವ್ ಅವರು ಅಪಘಾತಕ್ಕೆ ನಿಜವಾದ ಸಮಸ್ಯೆಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂದರು. 

"ರೈಲ್ವೆ ಸಚಿವರು ಈಗಾಗಲೇ ಅಪಘಾತಕ್ಕೆ ಮೂಲ ಕಾರಣವೇನೆಂದು ಗೊತ್ತಾಗಿದೆ ಎನ್ನುತ್ತಾರೆ, ಇನ್ನೊಂದೆಡೆ ಪ್ರಕರಣವನ್ನು ಸಿಬಿಐಗೆ ತನಿಖೆಗೆ ವಹಿಸಿದ್ದಾರೆ. ಸಿಬಿಐ ಅಪರಾಧಗಳನ್ನು ತನಿಖೆ ಮಾಡಲು ಇರುವ ಸಂಸ್ಥೆಯೇ ಹೊರತು ರೈಲ್ವೆ ಅಪಘಾತಗಳಿಗಲ್ಲ. ಸಿಬಿಐ ಅಥವಾ ಯಾವುದೇ ಇತರ ಕಾನೂನು ಜಾರಿ ಸಂಸ್ಥೆ ತಾಂತ್ರಿಕ, ಸಾಂಸ್ಥಿಕ ಮತ್ತು ರಾಜಕೀಯ ವೈಫಲ್ಯಗಳಿಗೆ ಹೊಣೆಗಾರಿಕೆಯನ್ನು ಸರಿಪಡಿಸಲು ಸಾಧ್ಯವಿಲ್ಲ. ಇದಲ್ಲದೆ, ರೈಲ್ವೆ ಸುರಕ್ಷತೆ, ಸಿಗ್ನಲಿಂಗ್ ಮತ್ತು ನಿರ್ವಹಣೆ ಅಭ್ಯಾಸಗಳಲ್ಲಿ ತಾಂತ್ರಿಕ ಪರಿಣತಿಯನ್ನು ಹೊಂದಿರುವುದಿಲ್ಲ ಎಂದು ಅವರು ಹೇಳಿದರು.

ರೈಲ್ವೆಯ ಸುರಕ್ಷತೆ ಬಗ್ಗೆ ಸಾಮಾನ್ಯ ನಾಗರಿಕರು ತೀವ್ರ ಕಳವಳ ಹೊಂದಿದ್ದಾರೆ. ಆದ್ದರಿಂದ, ಈ ಗಂಭೀರ ಅಪಘಾತಕ್ಕೆ ನಿಜವಾದ ಕಾರಣಗಳನ್ನು ಪತ್ತೆಹಚ್ಚಲು ಮತ್ತು ಬೆಳಕಿಗೆ ತರಲು ಸರ್ಕಾರವು ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಮೊನ್ನೆ ಶುಕ್ರವಾರ ಸಾಯಂಕಾಲ ಸುಮಾರು 2,500 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲನ್ನು ಒಳಗೊಂಡ ಅಪಘಾತದಲ್ಲಿ 275 ಜನರು ಮೃತಪಟ್ಟಿದ್ದು 1,100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

2017-18 ಮತ್ತು 2020-21ರ ನಡುವೆ 10 ರೈಲು ಅಪಘಾತಗಳಲ್ಲಿ ಏಳು ರೈಲು ಅಪಘಾತಗಳು ಹಳಿತಪ್ಪುವಿಕೆಯಿಂದ ಹೇಗೆ ಸಂಭವಿಸಿವೆ ಎಂಬುದನ್ನು ಸಿಎಜಿಯ ಇತ್ತೀಚಿನ ಆಡಿಟ್ ವರದಿಯು ವಿಶೇಷವಾಗಿ ಉಲ್ಲೇಖಿಸುತ್ತದೆ ಎಂದು ಖರ್ಗೆ ಹೇಳಿದರು.

ಆದರೆ ಸರ್ಕಾರ ಇದನ್ನು ನಿರ್ಲಕ್ಷಿಸಿದೆ. 2017 ಮತ್ತು 2021 ರ ನಡುವೆ, ಪೂರ್ವ ಕರಾವಳಿ ರೈಲ್ವೆಯಲ್ಲಿ ಸುರಕ್ಷತೆಗಾಗಿ ರೈಲು ಮತ್ತು ವೆಲ್ಡ್ (ಟ್ರ್ಯಾಕ್ ನಿರ್ವಹಣೆ) ಶೂನ್ಯ ಪರೀಕ್ಷೆಯನ್ನು ನಡೆಸಲಾಯಿತು. ಇಷ್ಟು ಅಪಘಾತಗಳಾಗಿ ಸಿಎಜಿ ವರದಿ ಹೇಳಿದ್ದರೂ ಏಕೆ ಅದನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com