ದೆಹಲಿ: ನಾಪತ್ತೆಯಾಗಿದ್ದ ಇಬ್ಬರು ಮಕ್ಕಳ ಶವ ಮರದ ಪೆಟ್ಟಿಗೆಯಲ್ಲಿ ಪತ್ತೆ, ತನಿಖೆ
ಆಘಾತಕಾರಿ ಘಟನೆಯೊಂದರಲ್ಲಿ, ದೆಹಲಿಯ ಜಾಮಿಯಾ ನಗರದ ಕಾರ್ಖಾನೆಯೊಂದರಲ್ಲಿ ಮರದ ಪೆಟ್ಟಿಗೆಯಲ್ಲಿ ಏಳು ಮತ್ತು ಎಂಟು ವರ್ಷದೊಳಗಿನ ಇಬ್ಬರು ಮಕ್ಕಳ ಶವಗಳು ಪತ್ತೆಯಾಗಿವೆ. ಇವರು ಜೂನ್ 5 ರಿಂದ ನಾಪತ್ತೆಯಾಗಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸ್ ತನಿಖೆ ನಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
Published: 07th June 2023 01:08 AM | Last Updated: 07th June 2023 01:13 AM | A+A A-

ಮಕ್ಕಳ ಮೃತದೇಹದೊಂದಿಗೆ ಪೊಲೀಸರ ಚಿತ್ರ
ದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ, ದೆಹಲಿಯ ಜಾಮಿಯಾ ನಗರದ ಕಾರ್ಖಾನೆಯೊಂದರಲ್ಲಿ ಮರದ ಪೆಟ್ಟಿಗೆಯಲ್ಲಿ ಏಳು ಮತ್ತು ಎಂಟು ವರ್ಷದೊಳಗಿನ ಇಬ್ಬರು ಮಕ್ಕಳ ಶವಗಳು ಪತ್ತೆಯಾಗಿವೆ. ಇವರು ಜೂನ್ 5 ರಿಂದ ನಾಪತ್ತೆಯಾಗಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸ್ ತನಿಖೆ ನಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಕಾರ್ಖಾನೆಯಲ್ಲಿ ಇಬ್ಬರು ಮಕ್ಕಳ ಶವ ಪತ್ತೆಯಾದ ಬಗ್ಗೆ ಜಾಮಿಯಾನಗರ ಪಿಎಸ್ ಗೆ ಕರೆ ಬಂದಿತ್ತು. ನಂತರ ಅಲ್ಲಿಗೆ ತೆರಳಿದಾಗ ಮರದ ಪೆಟ್ಟಿಗೆಯಲ್ಲಿ ಶವಗಳು ಕಂಡುಬಂದಿತು. ಈ ಮನೆಯಲ್ಲಿ ಮಕ್ಕಳು ತಮ್ಮ ಪೋಷಕರೊಂದಿಗೆ ವಾಸಿಸುತ್ತಿದ್ದರು ಮತ್ತು ಅವರ ತಂದೆ ಬಲ್ಬೀರ್ ಅಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
#UPDATE | Delhi: Police recover two children's bodies (ages 7&8) from a wooden box in a factory in Jamia Nagar. The bodies were missing since June 5. Further investigation is underway. pic.twitter.com/J79VyQUmPg
— ANI (@ANI) June 6, 2023
ಮೃತ ಮಕ್ಕಳು ಅಂದು ಮಧ್ಯಾಹ್ನ 3 ಗಂಟೆಗೆ ತಮ್ಮ ಪೋಷಕರೊಂದಿಗೆ ಊಟ ಮಾಡಿದ್ದು, 3-30 ರ ಸುಮಾರಿನಲ್ಲಿ ನಾಪತ್ತೆಯಾಗಿದ್ದಾರೆ ಎಂಬುದು ಸ್ಥಳೀಯರ ವಿಚಾರಣೆಯಿಂದ ತಿಳಿದುಬಂದಿದೆ. ನಂತರ ಪೋಷಕರು ತಮ್ಮ ಮಕ್ಕಳ ಹುಡುಕಾಟ ನಡೆಸಿದಾಗ ಮರದ ಪೆಟ್ಟಿಗೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ದೇಹಗಳ ಮೇಲೆ ಯಾವುದೇ ಗಾಯವಿಲ್ಲ ಎಂದು ಅಪರಾಧ ತಂಡ ದೃಢಪಡಿಸಿದೆ. ಇದು ಆಕಸ್ಮಿಕವಾಗಿ ಉಸಿರುಕಟ್ಟಿ ಸಾವನ್ನಪ್ಪಿರು ಪ್ರಕರಣ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.