1980 ರ ದಶಕದ ದೂರದರ್ಶನದ ಖ್ಯಾತ ಸುದ್ದಿ ವಾಚಕಿ ಗೀತಾಂಜಲಿ ಅಯ್ಯರ್ ನಿಧನ

1980ರ ದಶಕದ ದೂರದರ್ಶನದ ಖ್ಯಾತ ಸುದ್ದಿ ವಾಚಕಿ ಗೀತಾಂಜಲಿ ಅಯ್ಯರ್ ನಿಧನರಾಗಿದ್ದಾರೆ. 1971ರಲ್ಲಿ ದೂರದರ್ಶನ ಸೇರಿದ್ದ ಅವರು, 30 ವರ್ಷಗಳ ಕಾಲ ನಿರೂಪಕಿಯಾಗಿ ರಾಷ್ಟ್ರೀಯ ಸುದ್ದಿ ವಾಚನದ ಮೂಲಕ ಜನರಿಗೆ ಚಿರಪರಿಚಿತರಾಗಿದ್ದರು.
ಸುದ್ದಿ ವಾಚಕಿ ಗೀತಾಂಜಲಿ ಅಯ್ಯರ್
ಸುದ್ದಿ ವಾಚಕಿ ಗೀತಾಂಜಲಿ ಅಯ್ಯರ್

ನವದೆಹಲಿ: 1980ರ ದಶಕದ ದೂರದರ್ಶನದ ಖ್ಯಾತ ಸುದ್ದಿ ವಾಚಕಿ ಗೀತಾಂಜಲಿ ಅಯ್ಯರ್ ನಿಧನರಾಗಿದ್ದಾರೆ. 1971ರಲ್ಲಿ ದೂರದರ್ಶನ ಸೇರಿದ್ದ ಅವರು, 30 ವರ್ಷಗಳ ಕಾಲ ನಿರೂಪಕಿಯಾಗಿ ರಾಷ್ಟ್ರೀಯ ಸುದ್ದಿ ವಾಚನದ ಮೂಲಕ ಜನರಿಗೆ ಚಿರಪರಿಚಿತರಾಗಿದ್ದರು.

ಗೀತಾಂಜಲಿ ಅಯ್ಯರ್ ಅವರು ತಮ್ಮ ವಾಕ್ಚಾತುರ್ಯ, ಪ್ರಸ್ತುತಿ, ಸಮಚಿತ್ತ ಮತ್ತು ಮೋಡಿಯಿಂದ ರಾಷ್ಟ್ರವನ್ನು ಆಕರ್ಷಿಸಿದರು. ಟಿವಿ ಎಂದರೆ ದೂರದರ್ಶನ ಅಂತಿದ್ದ ಕಾಲದಲ್ಲಿ ವಾರ್ತಾ ವಾಚಕರ ಸಮಿತಿಯೊಂದಿತ್ತು. ಅದರಲ್ಲಿ ಗೀತಾಂಜಲಿ ಅಂಬೇಗಾಂವ್ಕರ್ (ಪತ್ರಕರ್ತ ಸ್ವಾಮಿನಾಥನ್ ಅಯ್ಯರ್ ಅವರನ್ನು ಮದುವೆಯಾದ ನಂತರ ತಮ್ಮ ಗಂಡನ ಉಪನಾಮವನ್ನು ಪಡೆದರು) ಆಗಾಧ ಜನಪ್ರಿಯತೆ ಮೂಲಕ ಪ್ರತ್ಯೇಕವಾಗಿ ನಿಂತರು. 

ದಶಕಗಳ ವೃತ್ತಿಜೀವನದಲ್ಲಿ ನಾಲ್ಕು ಬಾರಿ ಅತ್ಯುತ್ತಮ ಆ್ಯಂಕರ್​​ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.1989 ರಲ್ಲಿ ‘ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ’ಗೂ ಭಾಜನರಾಗಿದ್ದರು. ಅವರು ಭಾರತದ ಪ್ರಮುಖ ದಾನಿಗಳನ್ನೊಳಗೊಂಡ ‘ವರ್ಲ್ಡ್ ವೈಡ್ ಫಂಡ್’ನ ಮುಖ್ಯಸ್ಥರೂ ಆಗಿದ್ದರು.

ದೂರದರ್ಶನದಲ್ಲಿ ಸುದ್ದಿ ನಿರೂಪಕಿಯಾಗಿ ಯಶಸ್ವಿ ವೃತ್ತಿಜೀವನದ ನಂತರ ಗೀತಾಂಜಲಿ ಅವರು, ಕಾರ್ಪೊರೇಟ್ ಸಂವಹನ, ಸರ್ಕಾರಿ ಸಂಪರ್ಕ ಮತ್ತು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ಬವಹಿಸಿದ್ದರು. ಅವರು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿಯಲ್ಲಿ (ಸಿಐಐ) ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಲ್ಲದೆ, ‘ಖಂಡಾ್’ ಎಂಬ ಧಾರಾವಾಹಿಯಲ್ಲಿ ಸಹ ನಟಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com