ರಾಹುಲ್ ಗಾಂಧಿಗೆ ವಿದೇಶದಲ್ಲಿ ಭಾರತವನ್ನು ಟೀಕಿಸುವ ಅಭ್ಯಾಸ; ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ: ಎಸ್ ಜೈಶಂಕರ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ವಿದೇಶದಲ್ಲಿ ಭಾರತವನ್ನು ಟೀಕಿಸುವ ಅಭ್ಯಾಸವಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಗುರುವಾರ ಟೀಕಿಸಿದ್ದು, ದೇಶದ ಆಂತರಿಕ ವಿಷಯಗಳನ್ನು ಹೊರ ಜಗತ್ತಿಗೆ ಕೊಂಡೊಯ್ಯುವುದು ದೇಶದ ಹಿತಾಸಕ್ತಿಗೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.
ಎಸ್ ಜೈಶಂಕರ್
ಎಸ್ ಜೈಶಂಕರ್

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ವಿದೇಶದಲ್ಲಿ ಭಾರತವನ್ನು ಟೀಕಿಸುವ ಅಭ್ಯಾಸವಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಗುರುವಾರ ಟೀಕಿಸಿದ್ದು, ದೇಶದ ಆಂತರಿಕ ವಿಷಯಗಳನ್ನು ಹೊರ ಜಗತ್ತಿಗೆ ಕೊಂಡೊಯ್ಯುವುದು ದೇಶದ ಹಿತಾಸಕ್ತಿಗೆ ಒಳ್ಳೆಯದಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿಯವರ ಇತ್ತೀಚಿನ ಹೇಳಿಕೆಗಳನ್ನು ಉಲ್ಲೇಖಿಸಿದ ಸಚಿವರು, 'ಜಗತ್ತು ನಮ್ಮನ್ನು ಗಮನಿಸುತ್ತಿದೆ' ಎಂದು ಹೇಳಿದರು.

'ರಾಹುಲ್ ಗಾಂಧಿ ಅವರು ದೇಶದಿಂದ ಹೊರಗೆ ಹೋದಾಗಲೆಲ್ಲ ದೇಶವನ್ನು ಟೀಕಿಸುವುದು ಮತ್ತು ನಮ್ಮ ರಾಜಕೀಯದ ಬಗ್ಗೆ ಕಾಮೆಂಟ್ ಮಾಡುವುದು ಅಭ್ಯಾಸವಾಗಿಬಿಟ್ಟಿದೆ. ಜಗತ್ತು ನಮ್ಮನ್ನು ನೋಡುತ್ತಿದೆ. ಚುನಾವಣೆಗಳು ನಡೆಯುತ್ತಲೇ ಇರುತ್ತವೆ, ಕೆಲವೊಮ್ಮೆ ಒಂದು ಪಕ್ಷ ಗೆದ್ದರೆ ಮತ್ತೆ ಕೆಲವು ಬಾರಿ ಇನ್ನೊಂದು ಪಕ್ಷ ಗೆಲ್ಲುತ್ತದೆ. ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲದಿದ್ದರೆ ಇಂತಹ ಬದಲಾವಣೆ ಬರುತ್ತಿರಲಿಲ್ಲ. ಎಲ್ಲಾ ಚುನಾವಣೆಯ ಫಲಿತಾಂಶಗಳು ಒಂದೇ ಆಗಿರುತ್ತಿತ್ತು. 2024 ರ ಫಲಿತಾಂಶ ತೋ ವಹೀ ಹೋಗಾ, ಹಮೇಂ ಪತಾ ಹೈ...' ಎಂದು ಜೈಶಂಕರ್ ಹೇಳಿದರು.

ಮೋದಿ ಸರ್ಕಾರ ಒಂಬತ್ತು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೈಶಂಕರ್, ಭಾರತದಲ್ಲಿ ಹೊರಗಿನ ಬೆಂಬಲ ಕೆಲಸ ಮಾಡುತ್ತದೆ ಎಂದು ರಾಹುಲ್ ಗಾಂಧಿ ನಿರೀಕ್ಷಿಸಿದ್ದಾರೆ ಮತ್ತು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧದ ನಿರೂಪಣೆ ಭಾರತದಲ್ಲಿ ಕೆಲಸ ಮಾಡದಿದ್ದರೆ, ಅದನ್ನು ವಿದೇಶಕ್ಕೆ ಕೊಂಡೊಯ್ಯಲಾಗುತ್ತದೆ ಎಂದು ಹೇಳಿದರು.

'ನೀವು ನೋಡಿದರೆ, ಈ ಎಲ್ಲಾ ಆರೋಪಗಳನ್ನು (ಸರ್ಕಾರದ ವಿರುದ್ಧ) ಈಗಾಗಲೇ ಭಾರತದಲ್ಲಿ ಮಾಡಲಾಗಿದೆ. ಈ ನಿರೂಪಣೆಯು ಭಾರತದಲ್ಲಿ ಕಾರ್ಯನಿರ್ವಹಿಸದಿದ್ದರೆ ಅಥವಾ ದೇಶದಲ್ಲಿ ಅದಕ್ಕೆ ಗಮನ ನೀಡದಿದ್ದರೆ, ಅದನ್ನು ದೇಶದಿಂದ ಹೊರಗೆ ತೆಗೆದುಕೊಂಡು ಹೋಗಲಾಗುತ್ತದೆ. ಹೊರಗಿನ ಬೆಂಬಲ ಭಾರತದಲ್ಲಿ ಕೆಲಸ ಮಾಡುತ್ತದೆ ಎಂದು ಅವರು ನಿರೀಕ್ಷಿಸುತ್ತಾರೆ' ಎಂದರು.

'ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವಿದೆ. ನಮಗೂ, ನಿಮಗೂ ಏನಾದರೂ ಇರುತ್ತದೆ. ನಿಮಗೂ ಸ್ವಲ್ಪ ರಾಜಕೀಯ ಇರುತ್ತದೆ. ಆದರೆ, ನಮಗೂ ಸ್ವಲ್ಪ ರಾಜಕೀಯ ಇರುತ್ತದೆ. ಅವರು ದೇಶದೊಳಗೆ ಏನು ಮಾಡಿದರೂ ನನ್ನ ಅಭ್ಯಂತರವಿಲ್ಲ. ಆದರೆ, ರಾಷ್ಟ್ರ ರಾಜಕಾರಣವನ್ನು ದೇಶದ ಹೊರಗೆ ತೆಗೆದುಕೊಂಡು ಹೋಗುವುದು ರಾಷ್ಟ್ರದ ಹಿತಾಸಕ್ತಿಯಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಇದು ಅವರ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ ಎಂದು ನಾನು ಭಾವಿಸುವುದಿಲ್ಲ' ಎಂದು ಅವರು ಹೇಳಿದರು.

ಸದ್ಯ ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು ಹಲವಾರು ವಿಷಯಗಳಲ್ಲಿ ಸರ್ಕಾರವನ್ನು ಟೀಕಿಸಿದ್ದಾರೆ.

ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಹಿಂಬದಿ ಇರುವ ಕನ್ನಡಿಯನ್ನು ನೋಡುವ ಮೂಲಕ ಭಾರತೀಯ ಕಾರನ್ನು ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಅದು ಒಂದರ ನಂತರ ಮತ್ತೊಂದು ಅಪಘಾತಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com