ಮುಂದಿನ 36 ಗಂಟೆಗಳಲ್ಲಿ ಬೈಪಾರ್ಜಾಯ್ ಚಂಡಮಾರುತ ತೀವ್ರ: ಉತ್ತರ-ವಾಯುವ್ಯ ದಿಕ್ಕಿನತ್ತ ಚಲನೆ
ಮುಂದಿನ 36 ಗಂಟೆಗಳಲ್ಲಿ ಬೈಪಾರ್ಜಾಯ್ ಚಂಡಮಾರುತ ತೀವ್ರಗೊಳ್ಳಲ್ಲಿದ್ದು, ಮುಂಬೈ, ಗೋವಾ, ಕರ್ನಾಟಕದ ಕರಾವಳಿಯಲ್ಲಿ ತೀವ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಮಾನ ಇಲಾಖೆ ಹೇಳಿದೆ.
Published: 09th June 2023 08:52 AM | Last Updated: 09th June 2023 07:25 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಮುಂದಿನ 36 ಗಂಟೆಗಳಲ್ಲಿ ಬೈಪಾರ್ಜಾಯ್ ಚಂಡಮಾರುತ ತೀವ್ರಗೊಳ್ಳಲ್ಲಿದ್ದು, ಮುಂಬೈ, ಗೋವಾ, ಕರ್ನಾಟಕದ ಕರಾವಳಿಯಲ್ಲಿ ತೀವ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಮಾನ ಇಲಾಖೆ ಹೇಳಿದೆ.
ಮುಂದಿನ 36 ಗಂಟೆಗಳಲ್ಲಿ ಬಿಪಾರ್ಜಾಯ್ ಚಂಡಮಾರುತ ತೀವ್ರಗೊಳ್ಳಲಿದ್ದು, ಮುಂದಿನ ಎರಡು ದಿನಗಳಲ್ಲಿ ಉತ್ತರ-ವಾಯುವ್ಯ ದಿಕ್ಕಿನಲ್ಲಿ ಚಲಿಸಲಿದೆ. ಅತ್ಯಂತ ತೀವ್ರವಾದ ಚಂಡಮಾರುತವು ಜೂನ್ 8 ರಂದು ರಾತ್ರಿ 11:30 ಗಂಟೆಗೆ ಗೋವಾದ ಪಶ್ಚಿಮ-ನೈಋತ್ಯಕ್ಕೆ 840 ಕಿಲೋಮೀಟರ್ ಮತ್ತು ಮುಂಬೈನಿಂದ 870 ಕಿಮೀ ಪಶ್ಚಿಮ-ನೈಋತ್ಯದಲ್ಲಿ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ನೆಲೆಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಟ್ವೀಟ್‌ನಲ್ಲಿ ತಿಳಿಸಿದೆ.
ಇದನ್ನೂ ಓದಿ: ಮಳೆ ಪರಿಸ್ಥಿತಿ ಎದುರಿಸಲು ಸಜ್ಜಾದ ಬಿಬಿಎಂಪಿ; 11,000 ಚೀಲ ಕೋಲ್ಡ್ ಮಿಕ್ಸ್ ರೆಡಿ!
2023 ರ ಜೂನ್ 08 ರ 11.30ರ ವೇಳೆಗೆ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಅತ್ಯಂತ ತೀವ್ರವಾದ ಬಿಪರ್ಜೋಯ್ ಚಂಡಮಾರುತವು ಗೋವಾದ ಪಶ್ಚಿಮ-ನೈಋತ್ಯಕ್ಕೆ ಸುಮಾರು 840 ಕಿಮೀ, ಮುಂಬೈನಿಂದ 870 ಕಿಮೀ ಪಶ್ಚಿಮ-ನೈಋತ್ಯದಲ್ಲಿ ನೆಲೆಗೊಂಡಿದೆ. ಮುಂದಿನ 36 ಗಂಟೆಗಳಲ್ಲಿ ಮತ್ತಷ್ಟು ಕ್ರಮೇಣವಾಗಿ ತೀವ್ರಗೊಳ್ಳುತ್ತದೆ ಮತ್ತು 2 ದಿನಗಳಲ್ಲಿ ಉತ್ತರ-ವಾಯುವ್ಯಕ್ಕೆ ಅಪ್ಪಳಿಸಲಿದೆ ಎಂದು ಐಎಂಡಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಅರಬ್ಬಿ ಸಮುದ್ರದಲ್ಲಿ ಇಂತಹ ಚಂಡಮಾರುತ ಪೀಡಿತ ಪ್ರದೇಶಗಳಿಗೆ ತೆರಳದಂತೆ ಹವಾಮಾನ ಇಲಾಖೆ ಮೀನುಗಾರರಿಗೆ ಸೂಚಿಸಿದೆ. ಸಮುದ್ರದಲ್ಲಿ ಇದ್ದವರು ಕರಾವಳಿಗೆ ಮರಳಲು ಸೂಚಿಸಲಾಗಿದೆ ಎಂದು ಅದು ಮೊದಲೇ ಹೇಳಿತ್ತು.