ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಒಡಿಶಾ: ಮದುವೆ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ಪತ್ನಿಯನ್ನು ಕೊಂದ ಕುಡುಕ ಗಂಡ!

ಮದುವೆ ಮೆರವಣಿಗೆಯಲ್ಲಿ ತನ್ನ ಅನುಮತಿಯಿಲ್ಲದೆ ನೃತ್ಯ ಮಾಡಿದ್ದಕ್ಕಾಗಿ ಪತಿಯೊಬ್ಬ ತನ್ನ ಹೆಂಡತಿಯನ್ನು ಕೊಂದು ಹಾಕಿರುವ ಆಘಾತಕಾರಿ ಘಟನೆ ಬಾಲಸೋರ್ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ಪೈಕಪದವಿನ 43 ವರ್ಷದ ರಾಮ್ ಸಿಂಗ್ ಆರೋಪಿ. ಮೃತ ಮಹಿಳೆಯನ್ನು ಶರ್ಮಿಳಾ ಸಿಂಗ್ (35) ಎಂದು ಗುರುತಿಸಲಾಗಿದೆ. ರಾಮ್ ವೃತ್ತಿಯಲ್ಲಿ ಚಾಲಕ ಎನ್ನಲಾಗಿದೆ. 

ಬಾಲಸೋರ್: ಮದುವೆ ಮೆರವಣಿಗೆಯಲ್ಲಿ ತನ್ನ ಅನುಮತಿಯಿಲ್ಲದೆ ನೃತ್ಯ ಮಾಡಿದ್ದಕ್ಕಾಗಿ ಪತಿಯೊಬ್ಬ ತನ್ನ ಹೆಂಡತಿಯನ್ನು ಕೊಂದು ಹಾಕಿರುವ ಆಘಾತಕಾರಿ ಘಟನೆ ಬಾಲಸೋರ್ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ಪೈಕಪದವಿನ 43 ವರ್ಷದ ರಾಮ್ ಸಿಂಗ್ ಆರೋಪಿ. ಮೃತ ಮಹಿಳೆಯನ್ನು ಶರ್ಮಿಳಾ ಸಿಂಗ್ (35) ಎಂದು ಗುರುತಿಸಲಾಗಿದೆ. ರಾಮ್ ವೃತ್ತಿಯಲ್ಲಿ ಚಾಲಕ ಎನ್ನಲಾಗಿದೆ. 

ರಾಮ್ ಅವರ ನೆರೆಹೊರೆಯವರು ಶನಿವಾರ ರಾತ್ರಿ ವಿವಾಹ ಸಮಾರಂಭ ಆಯೋಜಿಸಿದ್ದರು ಎಂದು ಮೂಲಗಳು ತಿಳಿಸಿವೆ. ಮದುವೆ ಮೆರವಣಿಗೆಯಲ್ಲಿ ಕೆಲವು ಮಹಿಳೆಯರು ಶರ್ಮಿಳಾ ನೃತ್ಯ ಮಾಡುವಂತೆ ಮನವಿ ಮಾಡಿದ್ದಾರೆ. ಆಕೆ ನಿರಾಕರಿಸಿದರೂ ಬಲವಂತವಾಗಿ ಆಕೆಯನ್ನು ಮೆರವಣಿಗೆಯ ಮಧ್ಯಕ್ಕೆ ಎಳೆದೊಯ್ದು ನೃತ್ಯ ಮಾಡಿಸಿದ್ದಾರೆ. ಸ್ಥಳದಲ್ಲಿದ್ದ ರಾಮ್, ಶರ್ಮಿಳಾ ಹೆಜ್ಜೆ ಹಾಕಿದ್ದನ್ನು ಕಂಡು ಕೋಪಗೊಂಡಿದ್ದರು. ಆದರೆ, ಅಸಮಾಧಾನ ವ್ಯಕ್ತಪಡಿಸದೆ ಕಾರ್ಯ ಮುಗಿಯುವವರೆಗೆ ಕಾಯುತ್ತಿದ್ದರು. ಈ ನಡುವೆ ಗೆಳೆಯರೊಂದಿಗೆ ಮದ್ಯ ಸೇವಿಸಿ ಸಂಪೂರ್ಣ ಕುಡಿದಿದ್ದಾನೆ.

ಮದುವೆ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ದಂಪತಿ ಮನೆಗೆ ತೆರಳಿದಾಗ ರಾತ್ರಿ 11 ಗಂಟೆ ಸುಮಾರಿಗೆ ಅವರ ನಡುವೆ ಮಾರಾಮಾರಿ ನಡೆದಿದೆ. ಈ ಸಂದರ್ಭದಲ್ಲಿ ಕೋಪೋದ್ರಿಕ್ತ ರಾಮ್, ಹಾರೆ ಕೋಲಿನಿಂದ ಹಲ್ಲೆ ಮಾಡಿದ್ದಾನೆ.
ದಂಪತಿಯ ಇಬ್ಬರು ಅಪ್ರಾಪ್ತ ಮಕ್ಕಳು ರಾಮ್ ಅವರ ಕೈಯಿಂದ ಕಬ್ಬಿಣದ ಹಾರೆ ಕೋಲು ಕಿತ್ತುಕೊಂಡಿದ್ದಾರೆ. ಆದರೆ ನಂತರವೂ ಕೊಡಲಿಯಿಂದ ಶರ್ಮಿಳಾ ಮೇಲೆ ಹಲ್ಲೆ ಮುಂದುವರೆಸಿದ್ದಾನೆ. ಇದರಿಂದಾಗಿ ಮಹಿಳೆ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ. ಗಲಾಟೆ ಕೇಳಿ ಅಕ್ಕಪಕ್ಕದವರು ಸ್ಥಳಕ್ಕೆ ಧಾವಿಸಿ ನೋಡಿದಾಗ ಶರ್ಮಿಳಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಘಟನೆಯ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮರುದಿನ ಬೆಳಿಗ್ಗೆ ಪೊಲೀಸರ ತಂಡ  ತನಿಖೆಗಾಗಿ ಗ್ರಾಮಕ್ಕೆ ಆಗಮಿಸಿದೆ. ಮಹಿಳೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸೊರೊ ಉಪವಿಭಾಗೀಯ ಪೊಲೀಸ್ ಅಧಿಕಾರಿ ರಿತೇಶ್ ಕುಮಾರ್ ಮಹಾಪಾತ್ರ ತಿಳಿಸಿದ್ದಾರೆ. ಮೃತನ ಪೋಷಕರ ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

Related Stories

No stories found.

Advertisement

X
Kannada Prabha
www.kannadaprabha.com