ಗುಜರಾತ್ ನಲ್ಲಿ ಬೈಪರ್‌ಜೋಯ್ ಎಫೆಕ್ಟ್: ಬಿರುಗಾಳಿಗೆ ಮರ ಬಿದ್ದು ಮಹಿಳೆ ಸಾವು; ಭುಜ್‌ನಲ್ಲಿ ಇಬ್ಬರು ಮಕ್ಕಳು ಸಾವು

ಗುಜರಾತಿನ ರಾಜ್‌ಕೋಟ್ ಜಿಲ್ಲೆಯಲ್ಲಿ ಬಿರುಗಾಳಿಗೆ ಬೈಕ್ ಮೇಲೆ ಮರ ಬಿದ್ದು ಪತಿ ಗಾಯಗೊಂಡು ಮಹಿಳೆ ಸಾವನ್ನಪ್ಪಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ರಾಜ್‌ಕೋಟ್: ಗುಜರಾತಿನ ರಾಜ್‌ಕೋಟ್ ಜಿಲ್ಲೆಯಲ್ಲಿ ಬಿರುಗಾಳಿಗೆ ಬೈಕ್ ಮೇಲೆ ಮರ ಬಿದ್ದು ಪತಿ ಗಾಯಗೊಂಡು ಮಹಿಳೆ ಸಾವನ್ನಪ್ಪಿದ್ದಾರೆ.

ಜೂನ್ 15ರಂದು ಕಚ್ ಜಿಲ್ಲೆಗೆ 150 ಕಿಮೀ ವೇಗದಲ್ಲಿ ಗಾಳಿ ಬೀಸುವ 'ಬೈಪರ್‌ಜೋಯ್' ಚಂಡಮಾರುತದಿಂದಾಗಿ ಗುಜರಾತ್‌ನ ಹಲವಾರು ಭಾಗಗಳು ಬಿರುಗಾಳಿಗೆ ಸಾಕ್ಷಿಯಾಗುತ್ತಿವೆ.

ಗುಜರಾತ್‌ನ ಭುಜ್‌ನಲ್ಲಿ ಗೋಡೆ ಕುಸಿದು ಇಬ್ಬರು ಮಕ್ಕಳು ಸಾವು
ಸೋಮವಾರ ಸಂಜೆ ಗುಜರಾತ್‌ನ ಕಚ್ ಜಿಲ್ಲೆಯ ಭುಜ್ ಪಟ್ಟಣದಲ್ಲಿ ಮಣ್ಣಿನ ಗೋಡೆ ಕುಸಿದು ಇಬ್ಬರು ಸೋದರ ಸಂಬಂಧಿಗಳು ಸಾವನ್ನಪ್ಪಿದ್ದಾರೆ. ಮೃತರನ್ನು ಆರು ವರ್ಷದ ಫೈಜಾನಾ ಕುಂಬಾರ್ ಮತ್ತು ಆಕೆಯ ಸೋದರ ಸಂಬಂಧಿ ಮೊಹಮ್ಮದ್ ಇಕ್ಬಾಲ್ ಕುಂಬಾರ್ (4 ವರ್ಷ) ಎಂದು ಗುರುತಿಸಲಾಗಿದೆ. ಭುಜ್ ನಗರದ ಸುರಲ್ ಭಿತ್ ರಸ್ತೆಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಎರಡು ಮನೆಗಳ ನಡುವಿನ ಗೋಡೆ ಕುಸಿದು ಇಬ್ಬರೂ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಭುಜ್ ಬಿ ವಿಭಾಗದ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಕೆ.ಸಿ ವಘೇಲಾ ತಿಳಿಸಿದ್ದಾರೆ. ಮಕ್ಕಳಿಬ್ಬರೂ ಗೋಡೆಯ ಬಳಿ ಆಟವಾಡುತ್ತಿದ್ದರು.

ಘಟನೆ ಬಳಿಕ ಕೂಡಲೇ ಮಕ್ಕಳನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಮಕ್ಕಳು ಮೃತಪಟ್ಟಿರುವುದಾಗಿ ಘೋಷಿಸಿದರು. ನಾವು ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿ, ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ವಘೇಲಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com