15 ದಿನಗಳಲ್ಲಿ 11 ವಿದೇಶಿ ಉಗ್ರರ ಎನ್ಕೌಂಟರ್, ಅಪಾರ ಪ್ರಮಾಣದ ಮಾದಕ ದ್ರವ್ಯ, ಶಸ್ತ್ರಾಸ್ತ್ರ ಪತ್ತೆಗೆ ಗುಪ್ತಚರ ಮಾಹಿತಿ ನೆರವು: ಭಾರತೀಯ ಸೇನೆ

ಕಳೆದ 15 ದಿನಗಳಲ್ಲಿ 11 ವಿದೇಶಿ ಉಗ್ರರ ಎನ್ಕೌಂಟರ್ ಮಾಡಲಾಗಿದ್ದು,  ಅಪಾರ ಪ್ರಮಾಣದ ಮಾದಕ ದ್ರವ್ಯ, ಶಸ್ತ್ರಾಸ್ತ್ರ ಪತ್ತೆ ಕಾರ್ಯಾಚರಣೆಯಲ್ಲಿ ಗುಪ್ತಚರ ಮಾಹಿತಿ ನೆರವು ನೀಡಿದೆ ಎಂದು ಭಾರತೀಯ ಸೇನೆ ಹೇಳಿದೆ.
ಭಾರತೀಯ ಸೇನೆಯಿಂದ ಗಡಿಯಲ್ಲಿ ಕಣ್ಗಾವಲು
ಭಾರತೀಯ ಸೇನೆಯಿಂದ ಗಡಿಯಲ್ಲಿ ಕಣ್ಗಾವಲು

ಶ್ರೀನಗರ: ಕಳೆದ 15 ದಿನಗಳಲ್ಲಿ 11 ವಿದೇಶಿ ಉಗ್ರರ ಎನ್ಕೌಂಟರ್ ಮಾಡಲಾಗಿದ್ದು,  ಅಪಾರ ಪ್ರಮಾಣದ ಮಾದಕ ದ್ರವ್ಯ, ಶಸ್ತ್ರಾಸ್ತ್ರ ಪತ್ತೆ ಕಾರ್ಯಾಚರಣೆಯಲ್ಲಿ ಗುಪ್ತಚರ ಮಾಹಿತಿ ನೆರವು ನೀಡಿದೆ ಎಂದು ಭಾರತೀಯ ಸೇನೆ ಹೇಳಿದೆ.

ಕಳೆದ 15 ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಸೆಕ್ಟರ್ ನಲ್ಲಿ ಏಜೆನ್ಸಿಗಳು ನೀಡಿದ ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಗಳು 11 ವಿದೇಶಿ ಭಯೋತ್ಪಾದಕರ ಹತ್ಯೆಗೆ ಸಹಾಯ ಮಾಡುವುದರ ಜೊತೆಗೆ ಅಪಾರ ಪ್ರಮಾಣದ ಮಾದಕ ದ್ರವ್ಯಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲು ಸಹಾಯ ಮಾಡಿದೆ ಎಂದು ಭಾರತೀಯ ಸೇನಾಧಿಕಾರಿಗಳು ಹೇಳಿದ್ದಾರೆ.

"ಏಜೆನ್ಸಿಗಳು ಒದಗಿಸಿದ ನಿರ್ದಿಷ್ಟ ಗುಪ್ತಚರ ಆಧಾರದ ಮೇಲೆ ಹೆಚ್ಚಿನ ಕಣ್ಗಾವಲು ಭದ್ರತಾ ಪಡೆಗಳಿಗೆ ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಸೆಕ್ಟರ್‌ನಲ್ಲಿ ಮೂರು ಪ್ರಮುಖ ಒಳನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಲು ಸಹಾಯ ಮಾಡಿದೆ. ಇದು 11 ವಿದೇಶಿ ಭಯೋತ್ಪಾದಕರ ಹೊಡೆದುರುಳಿಸಲು ಮತ್ತು ಅಪಾರ ಪ್ರಮಾಣದ ಮಾದಕ ವಸ್ತುಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲು ಕಾರಣವಾಯಿತು. ಭಾರತೀಯ ಸೇನೆಯು ಗುಪ್ತಚರ ಏಜೆನ್ಸಿಗಳೊಂದಿಗೆ ಕುಪ್ವಾರದ ನಿರ್ದಿಷ್ಟ ಪ್ರದೇಶಗಳಲ್ಲಿ ಹೆಚ್ಚಿನ ಕಣ್ಗಾವಲು ಪ್ರಾರಂಭಿಸಿದೆ. ಈ ಪ್ರದೇಶಗಳಲ್ಲಿ ಹೊಸಬರು ಅಥವಾ ಹೊಸ ಮುಖಗಳ ಉಪಸ್ಥಿತಿಯ ಬಗ್ಗೆ ಮಾಹಿತಿಗಳು ಲಭ್ಯವಾಗುತ್ತಿದ್ದು, ಅವರ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಅವರು ಗಡಿ ಪ್ರದೇಶದೊಳಗೆ ನುಸುಳಲು ಪ್ರಯತ್ನಿಸಿದಾಗ, ಅಂತಹ ಶತ್ರುಗಳ ಕ್ರಮವನ್ನು ನಿಭಾಯಿಸಲು ಈಗಾಗಲೇ ಜಾಗೃತ ಪಡೆಗಳ ಕಾರ್ಯಾಚರಣೆ ಮೂಲಕ ಅವರನ್ನು ಹೊರಹಾಕಲಾಯಿತು", ಎಂದು ಅವರು ಹೇಳಿದರು.

ಮೊದಲ ಘಟನೆಯು ಮಚ್ಚಿಲ್ ಸೆಕ್ಟರ್‌ನಲ್ಲಿ ಸಂಭವಿಸಿದ್ದು, ಇಬ್ಬರು ವಿದೇಶಿ ಭಯೋತ್ಪಾದಕರನ್ನು ಸೇನಾ ಪಡೆಗಳು ಹೊಡೆದುರುಳಿಸಿದ್ದು, ಎರಡು ಎಕೆ-ಸರಣಿಯ ರೈಫಲ್‌ಗಳು ಮತ್ತು ಗ್ರೆನೇಡ್‌ಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಲ್‌ಒಸಿಯಾದ್ಯಂತ ಎರಡನೇ ಪ್ರಮುಖ ಎನ್‌ಕೌಂಟರ್‌ನಲ್ಲಿ ಕೆರಾನ್ ಸೆಕ್ಟರ್‌ನಲ್ಲಿ ಐವರು ಭಯೋತ್ಪಾದಕರು ಹತರಾಗಿದ್ದಾರೆ ಮತ್ತು ಪಾಕಿಸ್ತಾನದ ಗುರುತುಗಳೊಂದಿಗೆ ಐದು ರೈಫಲ್‌ಗಳು ಮತ್ತು ಸ್ನೈಪರ್ ರೈಫಲ್ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾವು ರಾತ್ರಿ ನೈಟ್ ವಿಷನ್ ಕನ್ನಡಕಗಳು ಮತ್ತು ನೈಟ್ ವಿಷನ್ ಬೈನಾಕ್ಯುಲರ್‌ಗಳು ಸೇರಿದಂತೆ ಸಾಕಷ್ಟು ಕಣ್ಗಾವಲು ಉಪಕರಣಗಳನ್ನು ಬಳಕೆ ಮಾಡಿ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಇದೇ ರೀತಿಯ ಅತ್ಯಾಧುನಿಕ ಉಪಕರಣಗಳನ್ನು ಉಗ್ರರು ಬಳಕೆ ಮಾಡುತ್ತಿದ್ದಾರೆ. ಇದು ಭಯೋತ್ಪಾದಕರಿಗೆ ಸುಲಭವಾಗಿ ಗಡಿ ಪ್ರದೇಶದ ಮೂಲಕ ಚಲಿಸಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮರನಾಥ ಯಾತ್ರೆ ಮೇಲಿನ ಸಂಚು ವಿಫಲಗೊಳಿಸಿದ ಸೇನೆ
ಇದೇ ವೇಳೆ ಕಾಶ್ಮೀರ ಕಣಿವೆಯಲ್ಲಿ ಅಮರನಾಥ ಯಾತ್ರೆಯ ಸಿದ್ಧತೆಗಳ ಮೇಲೆ ದಾಳಿ ಮಾಡಲು ಇತ್ತೀಚಿನ ಒಳನುಸುಳುವಿಕೆ ಪ್ರಯತ್ನವನ್ನು ಜೂನ್ 23 ರಂದು ಮಚ್ಚಿಲ್ ಸೆಕ್ಟರ್‌ನಲ್ಲಿ ವಿಫಲಗೊಳಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಎನ್‌ಕೌಂಟರ್‌ನಲ್ಲಿ ಹತರಾದ ನಾಲ್ವರು ವಿದೇಶಿ ಭಯೋತ್ಪಾದಕರ ಬಳಿ 12 ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಮಹಾನಗರಗಳಲ್ಲಿ ಪ್ರತಿ ಕೆಜಿಗೆ ಕನಿಷ್ಠ ಐದು ಕೋಟಿಗೆ ಮಾರಾಟವಾಗಬಹುದಾಗಿದ್ದ 55 ಕೆಜಿ ಎ1 ದರ್ಜೆಯ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿರುವುದು ಪಾಕಿಸ್ತಾನ ಸೇನೆ ಮತ್ತು ಮಾದಕ ದ್ರವ್ಯ ಕಳ್ಳಸಾಗಣೆ ಮೂಲಕ ಭಯೋತ್ಪಾದನೆಯನ್ನು ಹುಡುಕುವ ಐಎಸ್‌ಐ ಪ್ರಯತ್ನಗಳತ್ತ ಬೊಟ್ಟು ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ಭದ್ರತಾ ಸಂಸ್ಥೆಗಳು ಭಯೋತ್ಪಾದಕರಿಂದ ವಶಪಡಿಸಿಕೊಂಡ ವಸ್ತುಗಳು ಮತ್ತು ದಾಖಲೆಗಳ ಮೂಲಕ ತನಿಖೆಯನ್ನು ಮುಂದುವರೆಸಿದ್ದು, ಅವರು ಭಾರತದಲ್ಲಿ ಇರುವ ಡ್ರಗ್ಸ್ ವೇರ್ ಹೌಸ್ (ರಹಸ್ಯ ಗೋಡೌನ್) ಬಗ್ಗೆ ತಿಳಿಯಲು ಭಯೋತ್ಪಾದಕರು ಮತ್ತು ಭಾರತದಲ್ಲಿ ಅವರ ಲಿಂಕ್‌ಗಳ ನಡುವಿನ ಸಂಪರ್ಕವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ವಶಪಡಿಸಿಕೊಂಡ 12 ಶಸ್ತ್ರಾಸ್ತ್ರಗಳು ಹೆಚ್ಚುವರಿ ಶಸ್ತ್ರಾಸ್ತ್ರಗಳನ್ನು ಕಾಶ್ಮೀರ ಕಣಿವೆಯೊಳಗೆ ಈಗಾಗಲೇ ಇರುವ ಅಥವಾ ಮುಂದಿನ ದಿನಗಳಲ್ಲಿ ಮಾಡಲು ಪ್ರಯತ್ನಿಸಬಹುದಾದ ಇತರ ಭಯೋತ್ಪಾದಕರಿಗೆ ನೀಡಲು ಉದ್ದೇಶಿಸಲಾಗಿತ್ತು ಎನ್ನಲಾಗಿದೆ.

ಅಮರನಾಥ ಯಾತ್ರೆಯಲ್ಲಿ ಭಯೋತ್ಪಾದಕರ ಯಾವುದೇ ದಾಳಿಯನ್ನು ಎದುರಿಸಲು ಸೇನೆ ಮತ್ತು ಭದ್ರತಾ ಪಡೆಗಳು ಶಂಕಿತ ಪ್ರದೇಶಗಳಲ್ಲಿ ಹೆಚ್ಚುವರಿ ನಿಯೋಜನೆಗಳನ್ನು ಮಾಡಿದ್ದು, ಪಾಕಿಸ್ತಾನ ಸೇನೆಯು ತಮ್ಮ ಆಂತರಿಕ ರಾಜಕೀಯದಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಇಂತಹ ಹತಾಶ ಪ್ರಯತ್ನಗಳನ್ನು ಮಾಡುತ್ತಿದೆ. ಸೇನೆಯು ಹೊಸ ಹೈಟೆಕ್ ಕಣ್ಗಾವಲು ಉಪಕರಣಗಳನ್ನು ಬಳಸಿಕೊಂಡು ನಿಯಂತ್ರಣ ರೇಖೆಯ ಉದ್ದಕ್ಕೂ ಜಾಗರೂಕತೆಯನ್ನು ಹೆಚ್ಚಿಸಿದೆ, ಇದು ಇನ್ನೊಂದು ಬದಿಯಲ್ಲಿ ಯಾವುದೇ ಅಸಾಮಾನ್ಯ ಚಲನೆಗಳು ಅಥವಾ ಚಟುವಟಿಕೆಗಳನ್ನು ಸುಲಭವಾಗಿ ವಿಶ್ಲೇಷಿಸಲು ಸಹಾಯ ಮಾಡುತ್ತದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com