ಏಕರೂಪ ನೀತಿಸಂಹಿತೆ ಜಾರಿ ಕುರಿತು ಪ್ರಧಾನಿ ಮೋದಿ ಸುಳಿವು; ತಡರಾತ್ರಿ ಮುಸ್ಲಿಂ ಲಾ ಬೋರ್ಡ್ ನಿಂದ ಮಹತ್ವದ ಸಭೆ

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಬಲವಾದ ಸಮರ್ಥನೆ ನೀಡಿದ ಕೆಲವೇ ಗಂಟೆಗಳ ನಂತರ, ಭಾರತದ ಉನ್ನತ ಮುಸ್ಲಿಂ ಸಂಸ್ಥೆಯಾದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿನ್ನೆ ತಡರಾತ್ರಿ ತುರ್ತು ಸಭೆ ನಡೆಸಿತು.
ಮುಸ್ಲಿಂ ಲಾ ಬೋರ್ಡ್
ಮುಸ್ಲಿಂ ಲಾ ಬೋರ್ಡ್
Updated on

ನವದೆಹಲಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಬಲವಾದ ಸಮರ್ಥನೆ ನೀಡಿದ ಕೆಲವೇ ಗಂಟೆಗಳ ನಂತರ, ಭಾರತದ ಉನ್ನತ ಮುಸ್ಲಿಂ ಸಂಸ್ಥೆಯಾದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿನ್ನೆ ತಡರಾತ್ರಿ ತುರ್ತು ಸಭೆ ನಡೆಸಿತು.

ನಿನ್ನೆ ಭೋಪಾಲ್‌ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಒಂದೇ ದೇಶದಲ್ಲಿ ಎರಡು ಕಾನೂನುಗಳು ಕಾರ್ಯನಿರ್ವಹಿಸುವುದಿಲ್ಲ. ಸಂವಿಧಾನವು ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳನ್ನು ಉಲ್ಲೇಖಿಸುತ್ತದೆ ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪುಗಳು ಏಕರೂಪದ ಕಾನೂನುಗಳಿಗೆ ಕರೆ ನೀಡಿವೆ ಎಂದು ಪ್ರತಿಪಾದಿಸಿದ್ದರು. ಅಲ್ಲದೆ ಮತಬ್ಯಾಂಕ್ ರಾಜಕೀಯಕ್ಕೆ ಒಲವು ತೋರುವ ಪಕ್ಷಗಳಿಂದ ಮುಸ್ಲಿಮರನ್ನು ಪ್ರಚೋದಿಸಲಾಗುತ್ತಿದ್ದು, ಬಿಜೆಪಿ ತುಷ್ಟೀಕರಣದ ಹಾದಿಯನ್ನು ಅನುಸರಿಸುವುದಿಲ್ಲ ಎಂದು ಹೇಳಿದರು.

ಅತ್ತ ಪ್ರಧಾನಿ ಮೋದಿ ಹೇಳಿಕೆ ಬೆನ್ನಲ್ಲೇ ಮುಸ್ಲಿಂ ಕಾನೂನು ಮಂಡಳಿಯ ಸಭೆಯು ನಡೆಯಿತು. ನಿನ್ನೆ ತಡರಾತ್ರಿ ಸುಮಾರು ಮೂರು ಗಂಟೆಗಳ ಕಾಲ ಈ ಸಭೆ ನಡೆದಿದ್ದು, ಬಿಜೆಪಿ ಪ್ರಣಾಳಿಕೆಗಳ ಭಾಗವಾಗಿರುವ ಕಾರ್ಯಸೂಚಿಗೆ ಆದ್ಯತೆ ನೀಡುವ ಪ್ರಧಾನಿ ಮೋದಿಯವರ ಹೇಳಿಕೆಗಳ ಸಂದರ್ಭದಲ್ಲಿ ಅವರು ಯುಸಿಸಿಯ ಕಾನೂನು ಅಂಶಗಳನ್ನು ಚರ್ಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ವಕೀಲರು ಮತ್ತು ತಜ್ಞರು ನೀಡಿರುವ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಕಾನೂನು ಆಯೋಗಕ್ಕೆ ತನ್ನ ಅಭಿಪ್ರಾಯಗಳನ್ನು ಸಲ್ಲಿಸಲು ಮುಸ್ಲಿಂ ಸಂಸ್ಥೆ ನಿರ್ಧರಿಸಿದೆ.

ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆಯ ಕುರಿತು ಹೊಸ ಸಮಾಲೋಚನೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಸರ್ಕಾರವು ಶೀಘ್ರದಲ್ಲೇ ಕರಡು ಮಸೂದೆಯನ್ನು ತರಲು ಯೋಜಿಸುತ್ತಿದೆ ಎಂಬ ವರದಿಗಳ ನಡುವೆ ವಿವಿಧ ಮಧ್ಯಸ್ಥಗಾರರಿಂದ ಅಭಿಪ್ರಾಯಗಳನ್ನು ಕೇಳಿದೆ. ಏಕರೂಪ ನಾಗರಿಕ ಸಂಹಿತೆಯು ದೇಶದಲ್ಲಿ ಪ್ರತಿಯೊಬ್ಬರಿಗೂ ಅನ್ವಯಿಸುವ ಮತ್ತು ಧರ್ಮ-ಆಧಾರಿತ ವೈಯಕ್ತಿಕ ಕಾನೂನುಗಳು, ಉತ್ತರಾಧಿಕಾರದ ನಿಯಮಗಳು, ದತ್ತು ಮತ್ತು ಉತ್ತರಾಧಿಕಾರವನ್ನು ಬದಲಿಸುವ ವ್ಯಾಪಕವಾದ ಕಾನೂನುಗಳ ಗುಂಪನ್ನು ಉಲ್ಲೇಖಿಸುತ್ತದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com