ಯುಸಿಸಿ ವಿವಾದ: ಬಿಜೆಪಿ ಜನರನ್ನು ವಿಭಜಿಸಿ, ದ್ವೇಷವನ್ನು ಹರಡಲು ಯತ್ನಿಸುತ್ತಿದೆ - ಕಾಂಗ್ರೆಸ್

ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ವಿಚಾರದಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಕೇಂದ್ರ ಸರ್ಕಾರ ಜನರನ್ನು ವಿಭಜಿಸಲು ಮತ್ತು ದ್ವೇಷವನ್ನು ಹರಡಲು ಪ್ರಯತ್ನಿಸುತ್ತಿದೆ ಎಂದು ಶುಕ್ರವಾರ ಆರೋಪಿಸಿದೆ.
ಮನೀಶ್ ತಿವಾರಿ
ಮನೀಶ್ ತಿವಾರಿ

ನವದೆಹಲಿ: ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ವಿಚಾರದಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಕೇಂದ್ರ ಸರ್ಕಾರ ಜನರನ್ನು ವಿಭಜಿಸಲು ಮತ್ತು ದ್ವೇಷವನ್ನು ಹರಡಲು ಪ್ರಯತ್ನಿಸುತ್ತಿದೆ ಎಂದು ಶುಕ್ರವಾರ ಆರೋಪಿಸಿದೆ.

ಕಳೆದ ಮಂಗಳವಾರ ಭೋಪಾಲ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಯುಸಿಸಿ ಜಾರಿಯ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದ್ದರು. ಸಂವಿಧಾನವು ಎಲ್ಲ ಪ್ರಜೆಗಳಿಗೂ ಸಮಾನ ಹಕ್ಕುಗಳನ್ನು ನೀಡಿದೆ ಎಂದು ಹೇಳಿದ್ದರು.

ಇದು ಯುಸಿಸಿ ಅಲ್ಲ. ದೇಶದ ರಾಜಕೀಯವನ್ನು ವಿಭಜಿಸಲು ಪ್ರಯತ್ನಿಸುವ "ಡಿಸಿಸಿ - ವಿಭಜಿಸುವ ನಾಗರಿಕ ಸಂಹಿತೆ" ಎಂದು ಕಾಂಗ್ರೆಸ್ ವಕ್ತಾರ ಮೀಮ್ ಅಫ್ಜಲ್ ಹೇಳಿದ್ದಾರೆ. "ಯುಸಿಸಿ ದೇಶದ ಜನರನ್ನು ವಿಭಜಿಸುವ ಕಾರ್ಯಸೂಚಿಯಾಗಿದೆ" ಎಂದು ಆರೋಪಿಸಿದ್ದಾರೆ.

"ರಾಜಕೀಯ ಮತ್ತು ಜನರನ್ನು ವಿಭಜಿಸುವುದು ಮತ್ತು ಅವರ ನಡುವೆ ದ್ವೇಷವನ್ನು ಹರಡಲು ಬಿಜೆಪಿ ಯತ್ನಿಸುತ್ತಿದೆ. ಪ್ರಧಾನಿ ಕೂಡ ನಿರ್ದಿಷ್ಟ ವರ್ಗದ ಜನರನ್ನು ಹೆಸರಿಸುತ್ತಿದ್ದಾರೆ. ಆದರೆ ಇದು ಒಂದು ವರ್ಗದ ವಿಷಯವಲ್ಲ. ಇದು ಪ್ರತಿ ವಿಭಾಗ, ಪ್ರತಿ ಧರ್ಮ ಮತ್ತು ಪ್ರತಿಯೊಂದು ಭಾಷೆಯ ಸಮಸ್ಯೆಯಾಗಿದೆ. ಕೇಂದ್ರ ಏನೇ ಕೆಲಸ ಮಾಡಿದರೂ ಅದು ಎಲ್ಲರಿಗೂ ಒಪ್ಪಿಗೆಯಾಗಬೇಕು’’ ಎಂದು ಹೇಳಿದ್ದಾರೆ.

ನನಗೆ ಗೊತ್ತಿರುವ ಪ್ರಕಾರ "ವೈಯಕ್ತಿಕ ಕಾನೂನುಗಳ ಪರಿಶೀಲನೆ ಎಂದರೆ ಅಸ್ತಿತ್ವದಲ್ಲಿರುವ ವೈಯಕ್ತಿಕ ಕಾನೂನುಗಳ ವಿಮರ್ಶೆ".  "ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಇನ್ನೂ ಕಾನೂನಾಗಿಲ್ಲ" ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com