ಭಾರತ ಮಾತ್ರವಲ್ಲ, ವಿದೇಶದಲ್ಲಿಯೂ ಮುಖೇಶ್ ಅಂಬಾನಿ ಕುಟುಂಬಕ್ಕೆ ಝೆಡ್‌ ಪ್ಲಸ್ ಭದ್ರತೆ ನೀಡಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ

ಉದ್ಯಮಿ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಭಾರತ ಮತ್ತು ವಿದೇಶದಲ್ಲೂ ಝೆಡ್‌ ಪ್ಲಸ್ ಗರಿಷ್ಠ ಭದ್ರತೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮುಕೇಶ್ ಅಂಬಾನಿ ಕುಟುಂಬ
ಮುಕೇಶ್ ಅಂಬಾನಿ ಕುಟುಂಬ

ನವದೆಹಲಿ: ಉದ್ಯಮಿ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಭಾರತ ಮತ್ತು ವಿದೇಶದಲ್ಲೂ ಝೆಡ್‌ ಪ್ಲಸ್ ಗರಿಷ್ಠ ಭದ್ರತೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಅಂಬಾನಿ ಕುಟುಂಬಕ್ಕೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಇಂತಿಷ್ಟೇ ಪ್ರದೇಶಕ್ಕೆ ಭದ್ರತೆಯನ್ನು ಮಿತಿಗೊಳಿಸಬಾರದು ಎಂದು ನ್ಯಾಯಮೂರ್ತಿ ಕೃಷ್ಣ ಮುರಾರಿ ಮತ್ತು ಅಹ್ಸಾನುದ್ದಿನ್ ಅಮಾನುಲ್ಲಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಹೇಳಿದೆ.

ಭಾರತ ಸರ್ಕಾರದ ನಿಯಮಗಳ ಪ್ರಕಾರ ಇರುವ ಝೆಡ್ ಪ್ಲಸ್ ಭದ್ರತೆಯನ್ನು ವಿದೇಶಿಗಳಿಗೆ ತೆರಳಿದಾಗಲೂ ನೀಡಬೇಕು. ಮಹಾರಾಷ್ಟ್ರ ಸರ್ಕಾರ ಮತ್ತು ಗೃಹ ಸಚಿವಾಲಯವು ಇದನ್ನು ಖಚಿತಪಡಿಸಬೇಕು ಎಂದು ಪೀಠ ಹೇಳಿದೆ.

ಅಂಬಾನಿ ಮತ್ತು ಅವರ ಕುಟುಂಬಕ್ಕೆ ಭಾರತ ಮತ್ತು ವಿದೇಶದಲ್ಲಿ ನೀಡಲಾಗುವ ಭದ್ರತೆಯ ವೆಚ್ಚವನ್ನೂ ಅವರೇ ಭರಿಸಬೇಕು ಎಂದು ಕೋರ್ಟ್ ಹೇಳಿದೆ. ಅಂಬಾನಿ ಉದ್ಯಮವು ದೇಶ ವಿದೇಶಗಳಲ್ಲೂ ಹರಡಿಕೊಂಡಿದ್ದು, ಭದ್ರತೆಯನ್ನು ಮಿತಿಗೊಳಿಸುವುದು ಸೂಕ್ತವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಆದ್ದರಿಂದ, ಮುಕೇಶ್ ಅಂಬಾನಿ, ನೀತಾ ಅಂಬಾನಿ, ಆಕಾಶ್ ಅಂಬಾನಿ, ಅನಂತ್ ಅಂಬಾನಿ ಮತ್ತು ಇಶಾ ಅಂಬಾನಿ ಅವರಿಗೆ ಅತ್ಯುನ್ನತ ಮಟ್ಟದ ಭದ್ರತೆ ಒದಗಿಸಲಾಗಿದ್ದು, ಇದಕ್ಕಾಗಿ ಅಂಬಾನಿ ಕುಟುಂಬವು ವೆಚ್ಚವನ್ನು ಭರಿಸಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com