ಪೈನ್ ಮುಳ್ಳುಗಳು, ಬಿದಿರಿನಿಂದ ಜೈವಿಕ ಇಂಧನ ಉತ್ಪಾದನೆಗೆ ಪೈಲಟ್ ಯೋಜನೆ ಆರಂಭ: ಹಿಮಾಚಲ ಮುಖ್ಯಮಂತ್ರಿ

ಹಿಮಾಚಲ ಪ್ರದೇಶ ಅಗಾಧವಾದ ಕೋನಿಫೆರಸ್ ಅರಣ್ಯದಿಂದ ತುಂಬಿದ್ದು, ಬಿದಿರು ಉತ್ಪಾದನೆಗೆ ಹೆಚ್ಚಿನ ಸಾಮರ್ಥ್ಯ ಹೊಂದಿರುವುದರಿಂದ ಪೈನ್ ಮುಳ್ಳುಗಳು ಮತ್ತು ಬಿದಿರಿನಿಂದ ಜೈವಿಕ ಇಂಧನ ಉತ್ಪಾದನೆಗೆ ಪೈಲಟ್ ಯೋಜನೆ ಪ್ರಾರಂಭಿಸಲಿದೆ ಎಂದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದಾರೆ.
ಹಿಮಾಚಲ ಸಿಎಂ ಸುಖ್ವಿಂದರ್ ಸಿಂಗ್ ಸುಖು
ಹಿಮಾಚಲ ಸಿಎಂ ಸುಖ್ವಿಂದರ್ ಸಿಂಗ್ ಸುಖು

ಶಿಮ್ಲಾ: ಹಿಮಾಚಲ ಪ್ರದೇಶ ಅಗಾಧವಾದ ಕೋನಿಫೆರಸ್ ಅರಣ್ಯದಿಂದ ತುಂಬಿದ್ದು, ಬಿದಿರು ಉತ್ಪಾದನೆಗೆ ಹೆಚ್ಚಿನ ಸಾಮರ್ಥ್ಯ ಹೊಂದಿರುವುದರಿಂದ ಪೈನ್ ಮುಳ್ಳುಗಳು ಮತ್ತು ಬಿದಿರಿನಿಂದ ಜೈವಿಕ ಇಂಧನ ಉತ್ಪಾದನೆಗೆ ಪೈಲಟ್ ಯೋಜನೆ ಪ್ರಾರಂಭಿಸಲಿದೆ ಎಂದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದಾರೆ.

ಸ್ಥಳೀಯ ಸಮುದಾಯ ಯೋಜನೆಯಲ್ಲಿ ತೊಡಗಿಸಿಕೊಳ್ಳಲಿದ್ದು, ಅವರ ಆದಾಯ ಹೆಚ್ಚಲಿದೆ. ಜೈವಿಕ ಇಂಧನ ವಲಯಕ್ಕೆ ನೀತಿ ರಚನೆ ಮತ್ತು ಸಂಶೋಧನೆಗೆ ಬೆಂಬಲ ಒದಗಿಸಲು ರಾಜ್ಯ ಸರ್ಕಾರ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ಐಎಸ್‌ಬಿ) ಯೊಂದಿಗೆ ಪಾಲುದಾರಿಕೆ ಹೊಂದಲು ಸಿದ್ಧವಾಗಿದೆ ಎಂದು ಅವರು ಶನಿವಾರ ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಪೈನ್ ಮುಳ್ಳುಗಳಿಂದ ತಯಾರಿಸಿದ ಇಂಧನ ಹೆಚ್ಚಿನ ಪ್ರಯೋಜನ ಹೊಂದಿದೆ ಮತ್ತು ಇದು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ದಾರಿ ಮಾಡಿಕೊಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

2025 ರ ವೇಳೆಗೆ ' ಹಸಿರು ಇಂಧನ ರಾಜ್ಯ ಗುರಿ ಸಾಧನೆಯೊಂದಿಗೆ ಪೆಟ್ರೋಲ್‌ನಲ್ಲಿ  ಶೇಕಡಾ 10 ರಿಂದ 20 ರಷ್ಚು ಎಥೆನಾಲ್ ಮಿಶ್ರಣಕ್ಕಾಗಿ ಸರ್ಕಾರ ಆದೇಶ ಹೊರಡಿಸಿದೆ. ಬಿದಿರಿನಿಂದ ಎಥೆನಾಲ್ ಉತ್ಪಾದನೆನಿಂದ ಉಳಿದ ವಸ್ತುಗಳು ಜೈವಿಕ ಅನಿಲ ಮತ್ತು ಜೈವಿಕ ಗೊಬ್ಬರವನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ನೆರವಾಗುತ್ತವೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com