ದಯಾಮರಣಕ್ಕೆ ಅನುಮತಿ ಕೋರಿದ್ದ ಪುಲ್ವಾಮಾ ಹುತಾತ್ಮ ಯೋಧರ ಪತ್ನಿಯರ ಮೇಲೆ ಪೊಲೀಸರಿಂದ ಹಲ್ಲೆ, ವಿಡಿಯೋ

2019ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಮೂರು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದು ಅವರ ಪತ್ನಿಯರು ದಯಾಮರಣಕ್ಕೆ ಅನುಮತಿ ಕೋರಲು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ರನ್ನು ಭೇಟಿ ಮಾಡಲು ಹೋದಾಗ..
ಪ್ರತಿಭಟನೆ ಚಿತ್ರ
ಪ್ರತಿಭಟನೆ ಚಿತ್ರ

2019ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಮೂರು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದು ಅವರ ಪತ್ನಿಯರು ದಯಾಮರಣಕ್ಕೆ ಅನುಮತಿ ಕೋರಲು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ರನ್ನು ಭೇಟಿ ಮಾಡಲು ಹೋದಾಗ ರಾಜಸ್ಥಾನ ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. 

ಈ ಸಂಬಂಧ ಪುಲ್ವಾಮಾ ಹುತಾತ್ಮರ ಪತ್ನಿಯರು ಭಾನುವಾರ ಜೈಪುರದಲ್ಲಿ ರಾಜಸ್ಥಾನ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಸಿಎಂ ಗೆಹ್ಲೋಟ್ ನೇತೃತ್ವದ ರಾಜ್ಯ ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ. 

ಹುತಾತ್ಮ ಯೋಧರ ಪತ್ನಿಯರ ಮೇಲಿನ ಹಲ್ಲೆಯನ್ನು ಖಂಡಿಸಿರುವ ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಸಂಸದ ಕಿರೋಡಿ ಲಾಲ್ ಮೀನಾ ಅವರು ಶನಿವಾರದ ಘಟನೆ ನಾಚಿಕೆಗೇಡಿನದ್ದು ಎಂದು ಕರೆದಿದೆ. ಹುತಾತ್ಮರ ವಿಧವೆಯರನ್ನು ಅವಮಾನಿಸಲಾಗಿದೆ ಎಂದು ಮೀನಾ ಹೇಳಿದ್ದಾರೆ.

ಪುಲ್ವಾಮಾ ಹುತಾತ್ಮರ ವಿಧವೆಯರ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ರಾಜಸ್ಥಾನ ಸಚಿವ ಪ್ರತಾಪ್ ಖಚರಿಯಾವಾಸ್ ಅವರು ಕರ್ತವ್ಯದ ಸಾಲಿನಲ್ಲಿ ಪ್ರಾಣ ಕಳೆದುಕೊಂಡ ಸೈನಿಕರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಸರ್ಕಾರ ಯಾವಾಗಲೂ ಇರುತ್ತದೆ ಎಂದು ಹೇಳಿದರು.

ನಾವು ಹುತಾತ್ಮರ ವಿಧವೆಯರು ಮತ್ತು ಕುಟುಂಬಗಳನ್ನು ತುಂಬಾ ಗೌರವಿಸುತ್ತೇವೆ. ಹುತಾತ್ಮರ ಕುಟುಂಬಕ್ಕೆ ನಾವು ಎಲ್ಲಾ ಬೆಂಬಲ ಮತ್ತು ಪ್ಯಾಕೇಜ್ ನೀಡಿದ್ದೇವೆ. ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ನಾವು ಯಾವಾಗಲೂ ಇರುತ್ತೇವೆ ಎಂದು ಖಚರಿಯಾವಾಸ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com