
ತ್ರಿವರ್ಣ ಧ್ವಜ (ಸಂಗ್ರಹ ಚಿತ್ರ)
ದೋಡ: ಭಾರತೀಯ ಸೇನೆ ಜಮ್ಮು-ಕಾಶ್ಮೀರದ ದೋಡಾದಲ್ಲಿ 100 ಅಡಿ ಎತ್ತರದ ಧ್ವಜಸ್ತಂಭದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದೆ.
ಜಮ್ಮು-ಕಾಶ್ಮೀರದ ಕ್ರೀಡಾ ಸ್ಟೇಡೀಯಂ ನಲ್ಲಿ ರಾಷ್ಟ್ರಧ್ವಜವನ್ನು ಸ್ಥಾಪಿಸಲಾಗಿದ್ದು, ಕೇಂದ್ರಾಡಳಿತದ ಪ್ರದೇಶದಲ್ಲಿನ ಜನರ ಮನಸ್ಸಿನಲ್ಲಿ ದೇಶಭಕ್ತಿ ಉತ್ತೇಜಿಸುವ ಉದ್ದೇಶವನ್ನು ಹೊಂದಲಾಗಿದೆ.
ಮೇಜರ್ ಜನರಲ್ ಅಜಯ್ ಕುಮಾರ್ (ಜಿಒಸಿ ಡೆಲ್ಟಾ ಫೋರ್ಸ್ ಬಟೋಟೆ) ಬಂಡಾಯ ನಿಗ್ರಹ ಕಾರ್ಯಾಚರಣೆ, ದೋಡಾ ಸಾಂಸ್ಕೃತಿಕ ಉತ್ಸವಗಳ ಉದ್ಘಾಟನಾ ಸಮಾರಂಭದಲ್ಲಿ ತ್ರಿವರ್ಣ ಧ್ವಜವನ್ನು ಸಾರ್ವಜನಿಕರಿಗೆ ಸಮರ್ಪಿಸಿದರು.
ಇದನ್ನೂ ಓದಿ: ಮೆಲ್ಬರ್ನ್: ರಾಷ್ಟ್ರಧ್ವಜ ಹಿಡಿದಿದ್ದ ಭಾರತೀಯರ ಮೇಲೆ ಖಲಿಸ್ತಾನಿಗಳ ದಾಳಿ, ಐವರಿಗೆ ಗಾಯ
ಯೋಜನೆಗೆ ಅಗತ್ಯವಾದ ಅನುಮತಿಗಳನ್ನು ಟ್ರ್ಯಾಕ್ ಮಾಡುವುದು ಮತ್ತು ಸೈನ್ಯಕ್ಕೆ ಒದಗಿಸಲಾದ ಎಲ್ಲಾ ನೆರವಿಗೆ ತಮ್ಮ ಭಾಷಣದಲ್ಲಿ ಜಿಒಸಿ ಕುಮಾರ್ ಜಿಲ್ಲಾ ಆಡಳಿತ ಹಾಗೂ ಪೊಲೀಸರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೋಡಾ ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ಸೇನೆ ದೋಡಾ ಸಾಂಸ್ಕೃತಿಕ ಉತ್ಸವವನ್ನು ಆಯೋಜನೆ ಮಾಡಿದ್ದು, ಸದ್ಭಾವನೆ ಮತ್ತು ರಾಷ್ಟ್ರೀಯ ಏಕೀಕರಣವನ್ನು ಉತ್ತೇಜಿಸಿ, ಮತ್ತು ಪ್ರದೇಶದ ಪ್ರತಿಭೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುವ ಉದ್ದೇಶ ಹೊಂದಿದೆ ಎಂದು ವಕ್ತಾರರು ಹೇಳಿದ್ದಾರೆ.