ಮೆಲ್ಬರ್ನ್: ರಾಷ್ಟ್ರಧ್ವಜ ಹಿಡಿದಿದ್ದ ಭಾರತೀಯರ ಮೇಲೆ ಖಲಿಸ್ತಾನಿಗಳ ದಾಳಿ, ಐವರಿಗೆ ಗಾಯ
ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ ರಾಷ್ಟ್ರಧ್ವಜ ಹಿಡಿದು ತೆರಳುತ್ತಿದ್ದ ಭಾರತೀಯರ ಮೇಲೆ ಖಲಿಸ್ತಾನಿ ಬೆಂಬಲಿಗರ ಗುಂಪು ದಾಳಿ ನಡೆಸಿದ್ದು, ಐವರು ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.
Published: 30th January 2023 08:23 AM | Last Updated: 30th January 2023 07:12 PM | A+A A-

ಭಾರತೀಯರ ಮೇಲೆ ದಾಳಿ ನಡೆಸುತ್ತಿರುವ ಖಲಿಸ್ತಾನ್ ಬೆಂಬಲಿಗರು.
ಮೆಲ್ಬರ್ನ್: ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ ರಾಷ್ಟ್ರಧ್ವಜ ಹಿಡಿದು ತೆರಳುತ್ತಿದ್ದ ಭಾರತೀಯರ ಮೇಲೆ ಖಲಿಸ್ತಾನಿ ಬೆಂಬಲಿಗರ ಗುಂಪು ದಾಳಿ ನಡೆಸಿದ್ದು, ಐವರು ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.
ಆಸ್ಟ್ರೇಲಿಯಾದಲ್ಲಿ ಹಿಂದೂ ದೇಗುಲಗಳ ಮೇಲೆ ಖಲಿಸ್ತಾನಿ ಉಗ್ರರು ದ್ವೇಷದ ಬರಹ ಬರೆದ ಘಟನೆ ಬೆನ್ನಲ್ಲೇ ಈ ಘಟನೆ ನಡೆದಿದೆ.
ರಾಷ್ಟ್ರಧ್ವಜ ಹಿಡಿದಿರುವ ಭಾರತೀಯರನ್ನು ಅಟ್ಟಾಡಿಸಿಕೊಂಡು ಬಂದಿರುವ ಖಲಿಸ್ತಾನಿಗಳ ಗುಂಪು, ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ದೌರ್ಜನ್ಯ ಮೆರೆದಿದ್ದಾರೆ.
ಇದನ್ನೂ ಓದಿ: 5 ದಿನಗಳಲ್ಲಿ ಆಸ್ಟ್ರೇಲಿಯಾದಲ್ಲಿ ಮತ್ತೊಂದು ಹಿಂದೂ ದೇವಾಲಯ ಧ್ವಂಸ: ಖಲಿಸ್ತಾನಿ ಬೆಂಬಲಿಗರ ಕುಕೃತ್ಯ
ಕ್ಯಾರಮ್ ಡೌನ್ಸ್‌ನಲ್ಲಿರುವ ಶಿವ ವಿಷ್ಣು ದೇವಾಲಯವ ಧ್ವಂಸವಾದ ಕೆಲವೇ ದಿನಗಳ ಬಳಿಕ ಮೆಲ್ಬೋರ್ನ್‌ನಲ್ಲಿರುವ ಆಲ್ಬರ್ಟ್ ಪಾರ್ಕ್‌ನಲ್ಲಿ ಹಿಂದೂ ದೇವಸ್ಥಾನವನ್ನು ಕೆಡವಿದ್ದರು. ಭಾರತ ವಿರೋಧಿ ಬರಹದೊಂದಿಗೆ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಲಾಗಿದೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿದ್ದವು. ಇದು ಕಳೆದ 11 ದಿನಗಳಲ್ಲಿ ಹಿಂದೂ ದೇವಾಲಯಗಳ ಮೇಲೆ ನಡೆದ 3ನೇ ದಾಳಿಯಾಗಿತ್ತು.