ಅಬಕಾರಿ ನೀತಿ ಹಗರಣ: ಮನೀಷ್ ಸಿಸೋಡಿಯಾ 7 ದಿನ ಇಡಿ ಕಸ್ಟಡಿಗೆ: ದೆಹಲಿ ಕೋರ್ಟ್

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ದೆಹಲಿ ನ್ಯಾಯಾಲಯ 7 ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ.
ಮನೀಶ್ ಸಿಸೋಡಿಯಾ
ಮನೀಶ್ ಸಿಸೋಡಿಯಾ

ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ದೆಹಲಿ ನ್ಯಾಯಾಲಯ 7 ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ.

ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಎಎಪಿ ನಾಯಕ ಮಾಜಿ ಉಪಮುಖ್ಯಮಂತ್ರಿ ಸಿಸೋಡಿಯಾ ಅವರನ್ನು ಮಾರ್ಚ್ 17 ರವರೆಗೆ ಇಡಿ ವಶಕ್ಕೆ ನೀಡಿದೆ. ಇಂದು ನ್ಯಾಯಾಂಗ ವಶದ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ಸಿಸೋಡಿಯಾ ಅವರನ್ನು ತಿಹಾರ್ ಜೈಲಿನಲ್ಲಿ ರೂಸ್ ಅವೆನ್ಯೂ ಕೋರ್ಟ್ ಗೆ ಇಂದು ಮಧ್ಯಾಹ್ನ 2 ಗಂಟೆಗೆ ಹಾಜರುಪಡಿಸಲಾಯಿತು. 

ವಿಚಾರಣೆಯ ವೇಳೆ, ಮನೀಶ್ ಸಿಸೋಡಿಯಾ ಅವರನ್ನು ಜಾರಿ ನಿರ್ದೇಶಾನಾಲಯದ ಅಧಿಕಾರಿಗಳು 10 ದಿನಗಳ ವಶಕ್ಕೆ ಮನವಿ ಮಾಡಿದ್ದರು. ಕಾರ್ಯಾಚರಣೆಯ ವಿಧಾನಗಳನ್ನು ಗುರುತಿಸಲು ಮತ್ತು ಸಮನ್ಸ್ ಪಡೆದ ಇತರ ವ್ಯಕ್ತಿಗಳನ್ನು ಎದುರಿಸಲು ಮನೀಶ್ ಸಿಸೋಡಿಯಾ ಅವರನ್ನು ವಿಚಾರಣೆಗೆ ಒಳಪಡಿಸಲು 10 ದಿನಗಳ ಕಸ್ಟಡಿಗೆ ನೀಡುವಂತೆ ಅಧಿಕಾರಿಗಳು ಕೇಳಿದ್ದರು. ಅಂತೆಯೇ ಮನೀಶ್ ಸಿಸೋಡಿಯಾ ಇತರರ ಹೆಸರಿನಲ್ಲಿ ಸಿಮ್ ಕಾರ್ಡ್ ಮತ್ತು ಮೊಬೈಲ್ ಫೋನ್ ಗಳನ್ನು ಖರೀದಿಸಿದ್ದಾರೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿತ್ತು. 

ಇದೇ ಅಂಶಗಳ ಅಧಾರದ ಮೇಲೆ ಅಬಕಾರಿ ನೀತಿ ರೂಪಿಸುವುದರ ಹಿಂದೆ ಷಡ್ಯಂತ್ರವಿದೆ. ಸಂಚು ವಿಜಯ್ ನಾಯರ್ ಮತ್ತು ಇತರರೊಂದಿಗೆ ಸಂಯೋಜಿಸಲ್ಪಟ್ಟಿದೆ ಮತ್ತು ಸಗಟು ವ್ಯಾಪಾರಿಗಳಿಗೆ ಅಸಾಧಾರಣ ಲಾಭಕ್ಕಾಗಿ ಅಬಕಾರಿ ನೀತಿಯನ್ನು ಹೊರತರಲಾಗಿದೆ. ಖಾಸಗಿ ಸಂಸ್ಥೆಗಳಿಗೆ ಸಗಟು ಲಾಭದ ಶೇಕಡಾ 12 ರಷ್ಟು ಮಾರ್ಜಿನ್ ನೀಡುವ ಕುರಿತು ಶಂಕೆ ವ್ಯಕ್ತವಾಗಿದೆ ಎಂದು ಎಂದು ಇಡಿ ನ್ಯಾಯಾಲಯದಲ್ಲಿ ವಾದಿಸಿತು. ಅಂತೆಯೇ ವಿಜಯ್ ನಾಯರ್ ಮತ್ತು ಕೆ ಕವಿತಾ (ಬಿಆರ್‌ಎಸ್ ಪಕ್ಷದ ಎಂಎಲ್‌ಸಿ) ಭೇಟಿಯ ಬಗ್ಗೆ ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ ಎನ್ನಲಾಗಿದೆ.

ಇನ್ನು ಇಡಿ ಆರೋಪಗಳಿಗೆ ಮನೀಶ್ ಸಿಸೋಡಿಯಾ ಪರ ಹಾಜರಾದ ಹಿರಿಯ ವಕೀಲ ದಯನ್ ಕೃಷ್ಣನ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, 10 ದಿನಗಳ ಇಡಿ ಕಸ್ಟಡಿಗೆ ವಿರೋಧ ವ್ಯಕ್ತಪಡಿಸಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com