ನವದೆಹಲಿ: ಕಾರಿನಲ್ಲಿ ಮ್ಯೂಸಿಕ್ ವಾಲ್ಯೂಮ್ ಕಡಿಮೆ ಮಾಡಲು ಹೇಳಿದ ಪೇದೆ ಮೇಲೆ ದಾಳಿ; ಓರ್ವನ ಬಂಧನ
ಕಾರಿನಲ್ಲಿ ಮ್ಯೂಸಿಕ್ ವಾಲ್ಯೂಮ್ ತಗ್ಗಿಸುವಂತೆ ಹೇಳಿದ ಪೊಲೀಸ್ ಪೇದೆ ಮೇಲೆ ವ್ಯಕ್ತಿಯೊಬ್ಬ ಕಾರು ಹರಿಸಲು ಯತ್ನಿಸಿದ ಘಟನೆ ದೆಹಲಿಯ ದ್ವಾರಕಾ ಎಂಬಲ್ಲಿ ಮಾರ್ಚ್ 8ರಂದು ಹೋಳಿ ಹಬ್ಬದ ದಿನ ನಡೆದಿದೆ.
Published: 11th March 2023 12:02 PM | Last Updated: 11th March 2023 12:02 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಕಾರಿನಲ್ಲಿ ಮ್ಯೂಸಿಕ್ ವಾಲ್ಯೂಮ್ ತಗ್ಗಿಸುವಂತೆ ಹೇಳಿದ ಪೊಲೀಸ್ ಪೇದೆ ಮೇಲೆ ವ್ಯಕ್ತಿಯೊಬ್ಬ ಕಾರು ಹರಿಸಲು ಯತ್ನಿಸಿದ ಘಟನೆ ದೆಹಲಿಯ ದ್ವಾರಕಾ ಎಂಬಲ್ಲಿ ಮಾರ್ಚ್ 8ರಂದು ಹೋಳಿ ಹಬ್ಬದ ದಿನ ನಡೆದಿದೆ.
ಆರೋಪಿಯನ್ನು ಇಲ್ಲಿನ ಧುಲ್ಸಿರಸ್ ಗ್ರಾಮದ ನಿವಾಸಿ ನಿತಿನ್ ಗೋಡಾರ(29) ಎಂದು ಗುರುತಿಸಲಾಗಿದೆ. ದ್ವಾರಕಾದ ಸೆಕ್ಟರ್ – 10ರ ಮಾರುಕಟ್ಟೆ ಪ್ರದೇಶದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಹೋಳಿ ಹಬ್ಬದಂದು ರಾತ್ರಿ 8.30ರ ಸುಮಾರಿಗೆ ಕಾರಿನಲ್ಲಿ ಜೋರು ವಾಲ್ಯೂಮ್‌ನಲ್ಲಿ ಹಾಡುಗಳು ಕೇಳಿಬರುತ್ತಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಾರಿನಲ್ಲಿ ಹಾಡಿನ ವಾಲ್ಯೂಮ್ ಕಡಿಮೆ ಮಾಡಲು ಹೇಳಿದಾಗ ಆರೋಪಿಯು, ಹೆಡ್ ಕಾನ್ಸ್‌ಟೇಬಲ್ ಜಗದೀಶ್‌ಗೆ ಕಾರಿನಿಂದ ಡಿಕ್ಕಿ ಹೊಡೆಯಲು ಯತ್ನಿಸಿದ್ದಾನೆ. ಅವರು ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಜಗದೀಶ್‌ಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿ ಹೇಳಿದ್ದಾರೆ
ಆತನು ಪಾನಮತ್ತನಾಗಿದ್ದು, ವೈದ್ಯಕೀಯ ಪರೀಕ್ಷೆಗಳಲ್ಲಿ ಇದು ಧೃಡವಾಗಿದೆ. ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆತನ ವಿರುದ್ಧ ಕಾನೂನಿನ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.