ಜೋಧ್‌ಪುರ: ಭಾರತೀಯ ವಾಯುಪಡೆಯ ಎಂಐ-17 ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೋಧ್‌ಪುರದ ಲೋಹಾವತ್ ಪ್ರದೇಶದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಭಾನುವಾರ ಮಧ್ಯಾಹ್ನ ಕೆಲ ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಅನ್ನು ಮುನ್ನೆಚ್ಚರಿಕೆ ಕ್ರಮವಾಗಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.
20 ಏರ್‌ಮೆನ್‌ಗಳೊಂದಿಗೆ ಜೋಧಪುರ ವಾಯುನೆಲೆಯಿಂದ ಫಲೋಡಿ ವಾಯುನೆಲೆಗೆ ಹೆಲಿಕಾಪ್ಟರ್ ಟೇಕಾಫ್ ಆಗಿತ್ತು. ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.
ತಾಂತ್ರಿಕ ತಂಡ ದೋಷವನ್ನು ಸರಿಪಡಿಸಿದ ನಂತರ ಸುಮಾರು ಒಂದು ಗಂಟೆ ವಿಳಂಬವಾಗಿ ಹೆಲಿಕಾಪ್ಟರ್ ತನ್ನ ಗಮ್ಯಸ್ಥಾನಕ್ಕೆ ತೆರಳಿತು ಎಂದು ಲೋಹಾವತ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಬದ್ರಿ ಪ್ರಸಾದ್ ಅವರು ತಿಳಿಸಿದ್ದಾರೆ.
ಭಾರತೀಯ ವಾಯುಪಡೆಯ ಎರಡು MI-17 ಹೆಲಿಕಾಪ್ಟರ್‌ಗಳು ಜೋಧ್‌ಪುರ ವಾಯುಪಡೆ ನಿಲ್ದಾಣದಿಂದ ಭಾನುವಾರ ಮಧ್ಯಾಹ್ನ ಫಲೋಡಿ ವಾಯುಪಡೆ ನಿಲ್ದಾಣಕ್ಕೆ ಟೇಕಾಫ್ ಆಗಿದ್ದವು.
Advertisement