ಬೆಂಗಳೂರಿನಿಂದ ಲಖನೌಗೆ ಹೊರಟಿದ್ದ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ತುರ್ತು ಭೂಸ್ಪರ್ಶ
ಬೆಂಗಳೂರಿನಿಂದ ಲಖನೌಗೆ ಹೊರಟಿದ್ದ ಎಐಎಕ್ಸ್ ಕನೆಕ್ಟ್ ವಿಮಾನವು ಶನಿವಾರ ತಾಂತ್ರಿಕ ದೋಷದಿಂದಾಗಿ ಟೇಕ್ ಆಫ್ ಆದ 10 ನಿಮಿಷಗಳಲ್ಲಿಯೇ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಏರ್ ಏಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.
Published: 11th March 2023 01:09 PM | Last Updated: 11th March 2023 06:13 PM | A+A A-

ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಬೆಂಗಳೂರಿನಿಂದ ಲಖನೌಗೆ ಹೊರಟಿದ್ದ ಎಐಎಕ್ಸ್ ಕನೆಕ್ಟ್ ವಿಮಾನವು ಶನಿವಾರ ತಾಂತ್ರಿಕ ದೋಷದಿಂದಾಗಿ ಟೇಕ್ ಆಫ್ ಆದ 10 ನಿಮಿಷಗಳಲ್ಲಿಯೇ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಏರ್ ಏಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, i5-2472 ವಿಮಾನವು ಶನಿವಾರ ಬೆಳಿಗ್ಗೆ 6. 45ಕ್ಕೆ ಟೇಕ್ ಆಫ್ ಆಗಿತ್ತು ಮತ್ತು 9 ಗಂಟೆಗೆ ಲಖನೌನಲ್ಲಿ ಇಳಿಯಬೇಕಿತ್ತು. ಆದಾಗ್ಯೂ, ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅದು ತುರ್ತು ಭೂಸ್ಪರ್ಶ ಮಾಡಿದೆ.
'ಬೆಂಗಳೂರಿನಿಂದ ಲಖನೌಗೆ ಕಾರ್ಯಾಚರಣೆ ನಡೆಸಲು ಉದ್ದೇಶಿಸಿದ್ದ i5-2472 ವಿಮಾನವು ಸಣ್ಣ ತಾಂತ್ರಿಕ ಸಮಸ್ಯೆಯನ್ನು ಎದುರಿಸಿದೆ ಮತ್ತು ಹೀಗಾಗಿ, ಮತ್ತೆ ಬೆಂಗಳೂರಿಗೆ ಮರಳಿದೆ ಎಂದು ಎಐಎಕ್ಸ್ ಕನೆಕ್ಟ್ ಸ್ಪಷ್ಟಪಡಿಸಿದೆ' ಎಂದು ವಕ್ತಾರರು ತಿಳಿಸಿದ್ದಾರೆ.
ಪ್ರಭಾವಿತ ಅತಿಥಿಗಳಿಗಾಗಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ ಮತ್ತು ಇತರ ನಿಗದಿತ ಕಾರ್ಯಾಚರಣೆಗಳ ಮೇಲೆ ಇದರ ಪ್ರಭಾವವನ್ನು ಕಡಿಮೆ ಮಾಡಲು ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ವಕ್ತಾರರು ಹೇಳಿದ್ದಾರೆ.