ಉದ್ಧವ್ ಠಾಕ್ರೆಗೆ ತೀವ್ರ ಹಿನ್ನಡೆ; ಮಹಾ ಸಿಎಂ ಶಿಂಧೆ ಬಣ ಸೇರಿದ ಮಾಜಿ ಸಚಿವ ದೀಪಕ್ ಸಾವಂತ್
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಮಹಾರಾಷ್ಟ್ರ ಮಾಜಿ ಆರೋಗ್ಯ ಸಚಿವ ದೀಪಕ್ ಸಾವಂತ್ ಅವರು ಬುಧವಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿದ್ದಾರೆ.
Published: 15th March 2023 07:44 PM | Last Updated: 15th March 2023 07:44 PM | A+A A-

ಶಿಂಧೆ ಬಣ ಸೇರಿದ ಮಾಜಿ ಸಚಿವ ದೀಪಕ್ ಸಾವಂತ್
ಮುಂಬೈ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಮಹಾರಾಷ್ಟ್ರ ಮಾಜಿ ಆರೋಗ್ಯ ಸಚಿವ ದೀಪಕ್ ಸಾವಂತ್ ಅವರು ಬುಧವಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿದ್ದಾರೆ.
ಮುಖ್ಯಮಂತ್ರಿ ಶಿಂಧೆ ಸಮ್ಮುಖದಲ್ಲಿ ಸಾವಂತ್ ಶಿವಸೇನೆಗೆ ಸೇರ್ಪಡೆಗೊಂಡರು.
ಇದನ್ನು ಓದಿ: ಮಹಾ ಸಿಎಂ ಶಿಂಧೆ ಬಣ ಸೇರಿದ ಉದ್ಧವ್ ಠಾಕ್ರೆ ಆಪ್ತ ಸುಭಾಷ್ ದೇಸಾಯಿ ಪುತ್ರ
ಸಾವಂತ್ ಅವರು ದೇವೇಂದ್ರ ಫಡನ್ವಿಸ್ ನೇತೃತ್ವದ ಬಿಜೆಪಿ-ಶಿವಸೇನೆ ಸರ್ಕಾರದಲ್ಲಿ 2014 ರಿಂದ 2018 ರವರೆಗೆ ಆರೋಗ್ಯ ಸಚಿವರಾಗಿದ್ದರು.
ನಂತರ ಸಾವಂತ್ ಅವರನ್ನು ಸಂಪುಟದಿಂದ ಕೈಬಿಡಲಾಯಿತು ಮತ್ತು 2018 ರಲ್ಲಿ ಉದ್ಧವ್ ಠಾಕ್ರೆ ಅವರು ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನಿರಾಕರಿಸಿದ್ದರು.