"ಕಾನೂನು ಸಚಿವರೊಂದಿಗೆ ಸಮಸ್ಯೆಗಳ ಜೋಡಿಸಲು ಬಯಸುವುದಿಲ್ಲ": ಸಿಜೆಐ ಚಂದ್ರಚೂಡ್

ನ್ಯಾಯಮೂರ್ತಿಗಳ ನೇಮಕದ ಕೊಲಿಜಿಯಂ ವ್ಯವಸ್ಥೆ ಕುರಿತಂತೆ ಕೇಂದ್ರ ಸರ್ಕಾರದೊಂದಿಗಿನ ಗೊಂದಲದ ಕುರಿತು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು, ಕಾನೂನು ಸಚಿವರೊಂದಿಗಿನ ಸಮಸ್ಯೆಗಳಲ್ಲಿ ಭಾಗಿಯಾಗಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಡಿವೈ ಚಂದ್ರಚೂಡ್
ಡಿವೈ ಚಂದ್ರಚೂಡ್

ನವದೆಹಲಿ: ನ್ಯಾಯಮೂರ್ತಿಗಳ ನೇಮಕದ ಕೊಲಿಜಿಯಂ ವ್ಯವಸ್ಥೆ ಕುರಿತಂತೆ ಕೇಂದ್ರ ಸರ್ಕಾರದೊಂದಿಗಿನ ಗೊಂದಲದ ಕುರಿತು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು, ಕಾನೂನು ಸಚಿವರೊಂದಿಗಿನ ಸಮಸ್ಯೆಗಳಲ್ಲಿ ಭಾಗಿಯಾಗಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ನ್ಯಾಯಮೂರ್ತಿಗಳ ನೇಮಕದ ಕೊಲಿಜಿಯಂ ವ್ಯವಸ್ಥೆಯನ್ನು ಶನಿವಾರ ಸಮರ್ಥಿಸಿಕೊಂಡ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, 'ಪ್ರತಿಯೊಂದು ವ್ಯವಸ್ಥೆಯೂ ಪರಿಪೂರ್ಣವಾಗಿಲ್ಲ, ಆದರೆ ಇದು ಲಭ್ಯವಿರುವ ಅತ್ಯುತ್ತಮ ವ್ಯವಸ್ಥೆಯಾಗಿದೆ ಎಂದು ಹೇಳಿದ್ದಾರೆ. 

ಖಾಸಗಿ ಮಾಧ್ಯಮದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಜೆಐ, 'ನ್ಯಾಯಾಂಗವನ್ನು ಸ್ವತಂತ್ರವಾಗಿಡಲು, ಹೊರಗಿನ ಪ್ರಭಾವಗಳಿಂದ ಅದನ್ನು ರಕ್ಷಿಸಬೇಕು. ಎಲ್ಲ ವ್ಯವಸ್ಥೆಯು ಪರಿಪೂರ್ಣವಾಗಿಲ್ಲ ಆದರೆ ಇದು ನಾವು ಅಭಿವೃದ್ಧಿಪಡಿಸಿದ ಅತ್ಯುತ್ತಮ ವ್ಯವಸ್ಥೆಯಾಗಿದೆ. ಆದರೆ ನ್ಯಾಯಾಂಗದ ಸ್ವಾತಂತ್ರ್ಯವನ್ನು ರಕ್ಷಿಸುವುದು ಮುಖ್ಯ ಮೌಲ್ಯವಾಗಿದೆ. ನ್ಯಾಯಾಂಗವು ಹೊರಗಿನ ಪ್ರಭಾವಗಳಿಂದ ನಾವು ನ್ಯಾಯಾಂಗವನ್ನು ಪ್ರತ್ಯೇಕವಾಗಿ ಇರಿಸಬೇಕು. ಸ್ವತಂತ್ರವಾಗಿ ಇಡಬೇಕು ಎಂದು ಹೇಳಿದರು.

ಇದೇ ವೇಳೆ ಸಾಂವಿಧಾನಿಕ ನ್ಯಾಯಾಲಯಗಳ ನ್ಯಾಯಾಧೀಶರಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ ಹೆಸರುಗಳನ್ನು ಅನುಮೋದಿಸದಿರಲು ಸರ್ಕಾರದ ಕಾರಣಗಳನ್ನು ಕಾನೂನು ಸಚಿವ ಕಿರಣ್ ರಿಜಿಜು ಬಹಿರಂಗಪಡಿಸಿರುವುದಕ್ಕೆ ಸಿಜೆಐ ಅಸಮಾಧಾನ ವ್ಯಕ್ತಪಡಿಸಿದರು.

"ಅಭಿಪ್ರಾಯ ಭಿನ್ನಾಭಿಪ್ರಾಯವನ್ನು ಹೊಂದಿರುವುದರಲ್ಲಿ ಏನು ತಪ್ಪಾಗಿದೆ? ಆದರೆ, ನಾನು ಅಂತಹ ಭಿನ್ನಾಭಿಪ್ರಾಯಗಳನ್ನು ಬಲವಾದ ಸಾಂವಿಧಾನಿಕ ರಾಜಕೀಯದ ಉತ್ಸಾಹದಲ್ಲಿ ಎದುರಿಸಬೇಕಾಗಿದೆ. ನಾನು ಸಮಸ್ಯೆಗಳನ್ನು ಕಾನೂನು ಸಚಿವರೊಂದಿಗೆ ಜೋಡಿಸಲು ಬಯಸುವುದಿಲ್ಲ ಎಂದು ಹೇಳಿದರು.

ಗಮನಾರ್ಹವಾಗಿ, ರಿಜಿಜು ಅವರು ಕೊಲಿಜಿಯಂ ವ್ಯವಸ್ಥೆಯ ವಿರುದ್ಧ ತುಂಬಾ ದನಿಯೆತ್ತಿದ್ದು, ಒಮ್ಮೆ ಇದನ್ನು "ನಮ್ಮ ಸಂವಿಧಾನಕ್ಕಿಂತ ಭಿನ್ನವಾಗಿದೆ" ಎಂದೂ ಕರೆದಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com