ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋವಿಡ್‌ ಚಿಕಿತ್ಸೆಯಲ್ಲಿ ಆ್ಯಂಟಿಬಯಾಟಿಕ್ಸ್‌ ಬಳಕೆಬೇಡ: ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ

ಕೋವಿಡ್‌ ಚಿಕಿತ್ಸೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಕೋವಿಡ್‌ ಪ್ರಕರಣಗಳ ಚಿಕಿತ್ಸೆಯಲ್ಲಿ ಆ್ಯಂಟಿಬಯೊಟಿಕ್ಸ್‌ ಬಳಸಬಾರದು ಎಂದು ಹೇಳಿದೆ.

ನವದೆಹಲಿ: ಕೋವಿಡ್‌ ಚಿಕಿತ್ಸೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಕೋವಿಡ್‌ ಪ್ರಕರಣಗಳ ಚಿಕಿತ್ಸೆಯಲ್ಲಿ ಆ್ಯಂಟಿಬಯೊಟಿಕ್ಸ್‌ ಬಳಸಬಾರದು ಎಂದು ಹೇಳಿದೆ.

ಕೋವಿಡ್‌ ಪ್ರಕರಣಗಳಲ್ಲಿ ಇತ್ತೀಚೆಗೆ ಏರಿಕೆ ಕಂಡುಬಂದ ಕಾರಣ ವಯಸ್ಕರ ಕೋವಿಡ್‌ ಚಿಕಿತ್ಸಾ ಮಾರ್ಗಸೂಚಿಯಲ್ಲಿ ಪರಿಷ್ಕರಣೆ ಮಾಡಿದ್ದು, ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ‘ಬ್ಯಾಕ್ಟೀರಿಯಾ ಸೋಂಕಿನ ಸಂದೇಹವಿದ್ದರೆ ಮಾತ್ರವೇ ಆ್ಯಂಟಿಬಯೊಟಿಕ್ಸ್‌ ನೀಡಬೇಕು. ಇಲ್ಲವಾದಲ್ಲಿ ಕೋವಿಡ್‌ ಪ್ರಕರಣಗಳ ಚಿಕಿತ್ಸೆಯಲ್ಲಿ ಆ್ಯಂಟಿಬಯೊಟಿಕ್ಸ್‌ ಬಳಸಬಾರದು’ ಎಂದು ಕೇಂದ್ರ ಸರ್ಕಾರವು ಪರಿಷ್ಕೃತ ಮಾರ್ಗಸೂಚಿಯಲ್ಲಿ ಹೇಳಿದೆ.

ಕೋವಿಡ್‌ ಚಿಕಿತ್ಸಾ ಮಾರ್ಗಸೂಚಿಯಲ್ಲಿ ಪರಿಷ್ಕರಣೆ ಮಾಡಲು ಏಮ್ಸ್‌/ಐಸಿಎಂಆರ್‌ ಕೋವಿಡ್‌ ರಾಷ್ಟ್ರೀಯ ಕಾರ್ಯ ಪಡೆಯು ಇದೇ ಜನವರಿ 5ರಂದು ಸಭೆ ಸೇರಿತ್ತು. ಈ ಸಭೆಯಲ್ಲಿ ಸಾಕಷ್ಟು ಶಿಫಾರಸ್ಸುಗಳನ್ನು ಮಾಡಿತ್ತು. ಇದೀಗ ಕೇಂದ್ರ ಸರ್ಕಾರ ಅವುಗಳನು ನೂತನ ಮಾರ್ಗಸೂಚಿಯಲ್ಲಿ ಅಳವಡಿಸಿದೆ.

ನೂತನ ಮಾರ್ಗಸೂಚಿಯಲ್ಲೇನಿದೆ?
ನೂತನ ಮಾರ್ಗಸೂಚಿಯಲ್ಲಿ, ಕೋವಿಡ್‌ ರೋಗಿಗಳಿಗೆ ಇನ್ನು ಮುಂದೆ ಪ್ಲಾಸ್ಮಾ ಚಿಕಿತ್ಸೆ ಮಾಡಬಾರದು. ವ್ಯಕ್ತಿಯಲ್ಲಿ ಕೊರೊನಾ ಸೋಂಕಿನೊಂದಿಗೆ ಇತರೆ ಸಾಂಕ್ರಾಮಿಕ ಸೋಂಕು ಇದ್ದರೆ ಮಾತ್ರವೇ ಆ್ಯಂಟಿಬಯೊಟಿಕ್ಸ್‌ ಬಳಸಬಹುದು. ವ್ಯಕ್ತಿಯಲ್ಲಿ ಸೋಂಕಿತ ತೀವ್ರತೆ ಹೆಚ್ಚಿದ್ದು ಮತ್ತು ಸೋಂಕು ಇನ್ನಷ್ಟು ಉಲ್ಬಣಿಸುವ ಲಕ್ಷಣಗಳಿದ್ದರೆ ಮಾತ್ರವೇ ಐದು ದಿನಗಳವರೆಗೆ ರೆಮ್ಡಿಸಿವಿರ್‌ ಮಾತ್ರೆಗಳನ್ನು ನೀಡಬಹುದು. ವ್ಯಕ್ತಿಯಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದ 10 ದಿನಗಳ ಒಳಗೆ ರೆಮ್ಡಿಸಿವಿರ್‌ ಮಾತ್ರೆಗಳನ್ನು ನೀಡಬೇಕು. ವೆಂಟಿಲೇಟರ್‌ನಲ್ಲಿ ಇರುವ ರೋಗಿಗಳಿಗೆ ಇದು ಅನ್ವಯ ಆಗುವುದಿಲ್ಲ ಎನ್ನಲಾಗಿದೆ.

ಕೊರೊನಾವೈರಸ್ ಪ್ರಕರಣಗಳ ಹೆಚ್ಚಳದ ಮಧ್ಯೆ ಭಾನುವಾರ ಹೊರಡಿಸಲಾದ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಲೋಪಿನಾವಿರ್-ರಿಟೋನಾವಿರ್, ಹೈಡ್ರಾಕ್ಸಿಕ್ಲೋರೋಕ್ವಿನ್, ಐವರ್‌ಮೆಕ್ಟಿನ್, ಮೊಲ್ನುಪಿರಾವಿರ್, ಫಾವಿಪಿರಾವಿರ್, ಅಜಿಥ್ರೊಮೈಸಿನ್ ಮತ್ತು ಡಾಕ್ಸಿಸೈಕ್ಲಿನ್‌ನಂತಹ ಔಷಧಗಳನ್ನು ಭಾರತದಲ್ಲಿ ವಯಸ್ಕ ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಬಳಸಬಾರದು ಎಂದು ಹೇಳಿದೆ.

ಅಂತೆಯೇ ಹೆಚ್ಚುವರಿಯಾಗಿ, ಹೆಚ್ಚಿನ ಅಪಾಯದಲ್ಲಿರುವ ಮಧ್ಯಮ ಅಥವಾ ತೀವ್ರತರವಾದ ಕಾಯಿಲೆಗಳಲ್ಲಿ, ರೆಮ್‌ಡೆಸಿವಿರ್ ಅನ್ನು ಐದು ದಿನಗಳವರೆಗೆ ಪರಿಗಣಿಸಬಹುದು. ಮಧ್ಯಮದಿಂದ ತೀವ್ರತರವಾದ ಕಾಯಿಲೆಯಿಂದ ಹೆಚ್ಚಿನ ಪ್ರಗತಿಯ ಅಪಾಯವಿರುವ (ಪೂರಕ ಆಮ್ಲಜನಕದ ಅಗತ್ಯವಿರುತ್ತದೆ) ಆದರೆ IMV ಅಥವಾ ECMOಯಲ್ಲಿಲ್ಲದವರಲ್ಲಿ ರೋಗಲಕ್ಷಣಗಳು ಪ್ರಾರಂಭವಾದ 10 ದಿನಗಳಲ್ಲಿ ಇದನ್ನು ಪ್ರಾರಂಭಿಸಬೇಕು. ಇದಲ್ಲದೆ, ವೇಗವಾಗಿ ಪ್ರಗತಿಯಲ್ಲಿರುವ ಮಧ್ಯಮ ಅಥವಾ ತೀವ್ರತರವಾದ ಕಾಯಿಲೆಗಳಲ್ಲಿ, ಟೋಸಿಲಿಝುಮಾಬ್ ಅನ್ನು ತೀವ್ರ ರೋಗ/ಐಸಿಯು ಪ್ರವೇಶದ ಪ್ರಾರಂಭದ 24-48 ಗಂಟೆಗಳ ಒಳಗೆ ಪರಿಗಣಿಸಬಹುದು ಎಂದು ನೂತನ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಭಾರತದಲ್ಲಿ 129 ದಿನಗಳ ನಂತರ ಭಾನುವಾರ ಒಂದೇ ದಿನ 1,000ಕ್ಕೂ ಹೊಸ COVID-19 ಪ್ರಕರಣಗಳುದಾಖಲಾಗಿದ್ದು, ಸೋಮವಾರ, ದೇಶದಲ್ಲಿ 918 ಪ್ರಕರಣಗಳು ದಾಖಲಾಗಿತ್ತು. ಆ ಮೂಲಕ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 6,350 ಕ್ಕೆ ಏರಿಕೆಯಾಗಿದೆ. 
 

Related Stories

No stories found.

Advertisement

X
Kannada Prabha
www.kannadaprabha.com