ನಿನ್ನ ಹೃದಯ ನೀಡಿದ್ದಕ್ಕೆ ಧನ್ಯವಾದಗಳು: ಜಾಕ್ವೆಲಿನ್‌ಗೆ ಬರೆದ ಪತ್ರದಲ್ಲಿ ವಂಚಕ ಸುಕೇಶ್ ಚಂದ್ರಶೇಖರ್
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಂಡೋಲಿ ಜೈಲಿನಲ್ಲಿರುವ ಆರೋಪಿ ಸುಕೇಶ್ ಚಂದ್ರಶೇಖರ್ ಶನಿವಾರ ತಮ್ಮ ಹುಟ್ಟುಹಬ್ಬದಂದು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಪತ್ರ ಬರೆದಿದ್ದಾರೆ.
Published: 25th March 2023 03:16 PM | Last Updated: 25th March 2023 03:16 PM | A+A A-

ಜಾಕ್ವೆಲಿನ್ ಫರ್ನಾಂಡಿಸ್
ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಂಡೋಲಿ ಜೈಲಿನಲ್ಲಿರುವ ಆರೋಪಿ ಸುಕೇಶ್ ಚಂದ್ರಶೇಖರ್ ಶನಿವಾರ ತಮ್ಮ ಹುಟ್ಟುಹಬ್ಬದಂದು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಪತ್ರ ಬರೆದಿದ್ದಾರೆ.
ನಟಿಯನ್ನು 'ಮೈ ಬೇಬಿ ಜಾಕ್ವೆಲಿನ್' ಎಂದು ಸಂಬೋಧಿಸುವ ತನ್ನ ಕೈಬರಹದ ಪತ್ರದಲ್ಲಿ, 'ಈ ದಿನದಂದು ಆಕೆಯನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಮತ್ತು ತನ್ನ ಮೇಲಿನ ಆಕೆಯ 'ಪ್ರೀತಿ' ಎಂದಿಗೂ ಕೊನೆಗೊಳ್ಳುವುದಿಲ್ಲ ಎಂಬುದು ನನಗೆ ತಿಳಿದಿದೆ' ಎಂದು ಹೇಳಿದ್ದಾರೆ.
'ನನ್ನ ಬೊಂಬೆ, ನನ್ನ ಜನ್ಮದಿನದ ಈ ದಿನದಂದು ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ನನ್ನ ಸುತ್ತಲಿನ ನಿನ್ನ ಶಕ್ತಿಯನ್ನು ನಾನು ಕಳೆದುಕೊಳ್ಳುತ್ತಿದ್ದೇನೆ, ನನಗೆ ಪದಗಳೇ ಸಿಗುತ್ತಿಲ್ಲ. ಆದರೆ, ನನ್ನ ಮೇಲಿನ ನಿನ್ನ ಪ್ರೀತಿ ಎಂದಿಗೂ ಕೊನೆಗೊಳ್ಳುವುದಿಲ್ಲ ಎಂಬುದು ನನಗೆ ತಿಳಿದಿದೆ' ಎಂದು ಅವರು ಬರೆದಿದ್ದಾರೆ.
ಆಕೆಯ ಹೃದಯದಲ್ಲಿ ಏನಿದೆ ಎಂಬುದೇ ನನಗೆ ಮುಖ್ಯ. ಅದು ಸುಂದರವಾಗಿದೆ. ಅದಕ್ಕಾಗಿ ನನಗೆ ಯಾವುದೇ ಪುರಾವೆಯ ಅಗತ್ಯವಿಲ್ಲ ಎಂದು ಆತ ಹೇಳಿದ್ದಾರೆ.
ಆದರೆ, ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು. ನನ್ನ ಬೊಂಬೆ ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದು ನಿನಗೆ ತಿಳಿದಿದೆ. ಜಾಕ್ವೆಲಿನ್ ಮತ್ತು ಆಕೆಯ ಪ್ರೀತಿಯು ತನ್ನ ಜೀವನದಲ್ಲಿ ಬೆಲೆಯೇ ಕಟ್ಟಲಾಗದ 'ಅತ್ಯುತ್ತಮ ಕೊಡುಗೆ' ಎಂದು ಸುಕೇಶ್ ಚಂದ್ರಶೇಖರ್ ಸೇರಿಸಿದ್ದಾರೆ.
ಏನೇ ಆದರೂ ನಾನು ನಿನಗಾಗಿ ನಿಂತಿದ್ದೇನೆ ಎಂಬುದು ನಿನಗೆ ತಿಳಿದಿದೆ ... ಲವ್ ಯೂ ಮೈ ಬೇಬಿ, ನಿನ್ನ ಹೃದಯವನ್ನು ನನಗೆ ನೀಡಿದಕ್ಕಾಗಿ ಧನ್ಯವಾದಗಳು ಎಂದಿರುವ ಸುಕೇಶ್, ನನಗೆ ನೂರಾರು ಪತ್ರಗಳು, ಶುಭಾಶಯಗಳು ಬಂದಿವೆ. ನಾನು ಆಶೀರ್ವಾದ ಪಡೆದಿದ್ದೇನೆ, ಧನ್ಯವಾದಗಳು ಎಂದು ತಮ್ಮ ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಲ್ಲಾ ಬೆಂಬಲಿಗರು ಮತ್ತು ಸ್ನೇಹಿತರಿಗೆ ಧನ್ಯವಾದ ಸಲ್ಲಿಸುವ ಮೂಲಕ ಅವರು ತಮ್ಮ ಪತ್ರವನ್ನು ಮುಗಿಸಿದರು.