ಲೋಕಲ್ ಟ್ರೈನ್‌ನಲ್ಲಿ ಕರವಸ್ತ್ರಕ್ಕೆ ಬೆಂಕಿ ಹಚ್ಚಿ ಸಹ ಪ್ರಯಾಣಿಕನ ಮೇಲೆ ಎಸೆದ ವಿಕಲಚೇತನ ವ್ಯಕ್ತಿ, ಆರೋಪಿ ಪರಾರಿ
ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ವಿಕಲಚೇತನ ವ್ಯಕ್ತಿಯೊಬ್ಬರು ಸ್ಥಳೀಯ ರೈಲಿನಲ್ಲಿ ಸಹ ಪ್ರಯಾಣಿಕರೊಬ್ಬರಿಗೆ ಸುಟ್ಟ ಗಾಯಗಳನ್ನು ಮಾಡಿದ್ದಾರೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
Published: 26th March 2023 01:49 PM | Last Updated: 26th March 2023 01:49 PM | A+A A-

ಮಹಾರಾಷ್ಟ್ರ ಲೋಕಲ್ ಟ್ರೈನ್ (ಫೋಟೊ-ಎಎಫ್‌ಪಿ)
ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ವಿಕಲಚೇತನ ವ್ಯಕ್ತಿಯೊಬ್ಬರು ಸ್ಥಳೀಯ ರೈಲಿನಲ್ಲಿ ಸಹ ಪ್ರಯಾಣಿಕರೊಬ್ಬರಿಗೆ ಸುಟ್ಟ ಗಾಯಗಳನ್ನು ಮಾಡಿದ್ದಾರೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಶನಿವಾರ ರಾತ್ರಿ 10.45ರ ಸುಮಾರಿಗೆ ಛತ್ರಪತಿ ಶಿವಾಜಿ ಟರ್ಮಿನಲ್‌ನಿಂದ ಕಲ್ಯಾಣ್‌ಗೆ ತೆರಳುವ ಲೋಕಲ್ ರೈಲಿನಲ್ಲಿ ವಿಕಲಚೇತನ ವ್ಯಕ್ತಿಗಳ ವಿಭಾಗದಲ್ಲಿ ಈ ಘಟನೆ ನಡೆದಿದೆ ಎಂದು ಥಾಣೆ ಜಿಆರ್‌ಪಿಯ ಹಿರಿಯ ಇನ್ಸ್‌ಪೆಕ್ಟರ್ ಪಂಢರಿ ಕಾಂಡೆ ತಿಳಿಸಿದ್ದಾರೆ.
ಆರೋಪಿ ಕೆಲವು ಮಾದಕ ವಸ್ತುವನ್ನು ಬಳಿದ ಕರವಸ್ತ್ರಕ್ಕೆ ಬೆಂಕಿ ಹಚ್ಚಿ ಸಂತ್ರಸ್ತ ಪ್ರಸಾದ ವಾಡೇಕರ್ (35) ಅವರ ಮೇಲೆ ಎಸೆದಿದ್ದಾರೆ. ಸಂತ್ರಸ್ತನನ್ನು ಕೆಇಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 326 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಶಸ್ತ್ರಾಸ್ತ್ರಗಳು ಅಥವಾ ವಿಧಾನಗಳಿಂದ ಗಂಭೀರ ಗಾಯ ಉಂಟುಮಾಡುವುದು) ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆತ ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದರು.