ಕೋವಿಡ್ XBB 1.16 ರೂಪಾಂತರ: ದೇಶಾದ್ಯಂತ 610 ಪ್ರಕರಣ ದಾಖಲು
ದೇಶಾದ್ಯಂತ ಕೋವಿಡ್‌ನ XBB.1.16 ರೂಪಾಂತರದ ಒಟ್ಟು 610 ಪ್ರಕರಣಗಳು ಪತ್ತೆಯಾಗಿದ್ದು, ಇತ್ತೀಚಿಗೆ ಕೋವಿಡ್-19 ಪ್ರಕರಣಗಳು ಹೆಚ್ಚಾಗಲು ಇದೇ ಕಾರಣವಾಗಿರಬಹುದು ಎಂದು ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ INSACOG ಡೇಟಾ ಹೇಳಿದೆ.
Published: 27th March 2023 09:43 PM | Last Updated: 28th March 2023 06:48 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ದೇಶಾದ್ಯಂತ ಕೋವಿಡ್‌ನ XBB.1.16 ರೂಪಾಂತರದ ಒಟ್ಟು 610 ಪ್ರಕರಣಗಳು ಪತ್ತೆಯಾಗಿದ್ದು, ಇತ್ತೀಚಿಗೆ ಕೋವಿಡ್-19 ಪ್ರಕರಣಗಳು ಹೆಚ್ಚಾಗಲು ಇದೇ ಕಾರಣವಾಗಿರಬಹುದು ಎಂದು ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ INSACOG ಡೇಟಾ ಹೇಳಿದೆ.
11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ರೂಪಾಂತರದ ಮಾದರಿಗಳು ಕಂಡುಬಂದಿವೆ. ಮಹಾರಾಷ್ಟ್ರ ಮತ್ತು ಗುಜರಾತಿನಲ್ಲಿ ತಲಾ 164, ತೆಲಂಗಾಣದಲ್ಲಿ 93, ಕರ್ನಾಟಕದಲ್ಲಿ 86 ರೂಪಾಂತರ ಪ್ರಕರಣಗಳು ಪತ್ತೆಯಾಗಿದ್ದು, ಕೋವಿಡ್ 19 ಪ್ರಕರಣ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು INSACOG ಡೇಟಾ ತಿಳಿಸಿದೆ. ಜನವರಿ ಈ ರೂಪಾಂತರ ಮೊದಲ ಬಾರಿಗೆ ಪತ್ತೆಯಾದಾಗ, ಎರಡು ಮಾದರಿಗಳು ಪಾಸಿಟಿವ್ ಆಗಿ ದೃಢಪಟ್ಟಿದ್ದವು.
ಇದನ್ನೂ ಓದಿ: ಕೋವಿಡ್-19: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1,803 ಕೇಸ್ ಪತ್ತೆ, ಸಕ್ರಿಯ ಪ್ರಕರಣಗಳ ಸಂಖ್ಯೆ 10,300ಕ್ಕೆ ಏರಿಕೆ
ಭಾರತದಲ್ಲಿ ಇತ್ತೀಚೆಗೆ ಕೋವಿಡ್-19 ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ನೀಡಿದ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ 1,805 ಹೊಸ ಕೊರೋನವೈರಸ್ ಪ್ರಕರಣ ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 134 ದಿನಗಳ ನಂತರ 10,000ಕ್ಕೆ ಏರಿಕೆಯಾಗಿದೆ.