ಭಾರತ-ಪಾಕ್ ಗಡಿಯಲ್ಲಿ 3 ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್: 10 ಕೆಜಿ ಹೆರಾಯಿನ್, ಪಿಸ್ತೂಲ್, ಗುಂಡು ವಶ!

ಪಂಜಾಬ್‌ನ ಭಾರತ-ಪಾಕಿಸ್ತಾನ ಗಡಿಯ ಬಳಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಮೂರು ಡ್ರೋನ್ ಗಳನ್ನು ಹೊಡೆದುರುಳಿಸಿದೆ. ಡ್ರೋನ್ ಗಳನ್ನು ಹೆರಾಯಿನ್ ಕಳ್ಳಸಾಗಣೆಗೆ ಬಳಸಲಾಗುತ್ತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚಂಡೀಗಢ: ಪಂಜಾಬ್‌ನ ಭಾರತ-ಪಾಕಿಸ್ತಾನ ಗಡಿಯ ಬಳಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಮೂರು ಡ್ರೋನ್ ಗಳನ್ನು ಹೊಡೆದುರುಳಿಸಿದೆ. ಡ್ರೋನ್ ಗಳನ್ನು ಹೆರಾಯಿನ್ ಕಳ್ಳಸಾಗಣೆಗೆ ಬಳಸಲಾಗುತ್ತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡ್ರೋನ್ ಮೂಲಕ ಕಳ್ಳಸಾಗಣೆ ಮಾಡುತ್ತಿದ್ದ ಸುಮಾರು 10 ಕೆಜಿ ಹೆರಾಯಿನ್, ಪಿಸ್ತೂಲ್, ಮ್ಯಾಗಜೀನ್ ಮತ್ತು ಎಂಟು ಸುತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಒಂದು ಪ್ರಕರಣದಲ್ಲಿ, ಫಾಜಿಲ್ಕಾ ಜಿಲ್ಲೆಯ ಗಡಿಯಲ್ಲಿ ಹೆರಾಯಿನ್ ಪ್ಯಾಕೆಟ್ ಅನ್ನು ಎಸೆದ ದುಷ್ಕರ್ಮಿಗಳ ಮೇಲೆ ಬಿಎಸ್ಎಫ್ ಯೋಧರು ಗುಂಡಿನ ದಾಳಿ ನಡೆಸಿದ್ದು ಇಬ್ಬರನ್ನು ಬಂಧಿಸಿದೆ ಎಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ.

ಅಮೃತಸರದ ರಜತಾಲ್ ಗ್ರಾಮದಲ್ಲಿ ಸೋಮವಾರ ರಾತ್ರಿ 8:30ರ ಸುಮಾರಿಗೆ ಪಾಕಿಸ್ತಾನದ ಡ್ರೋನ್‌ನ ಚಲನವಲನ ಪತ್ತೆಯಾಗಿದ್ದು, ಬಿಎಸ್‌ಎಫ್ ಸಿಬ್ಬಂದಿ ಅದರ ಮೇಲೆ ಗುಂಡು ಹಾರಿಸಿದ್ದರು. ಮಂಗಳವಾರ ಈ ಪ್ರದೇಶದಲ್ಲಿ ಶೋಧ ನಡೆಸಿದಾಗ ಕಪ್ಪು ಬಣ್ಣದ ಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗಿದ್ದು ಡ್ರೋನ್‌ಗೆ ಲಗತ್ತಿಸಲಾದ ಬ್ಯಾಗ್‌ನಲ್ಲಿ 2.6 ಕೆಜಿ ತೂಕದ ಹೆರಾಯಿನ್ ಪ್ಯಾಕೆಟ್ ಪತ್ತೆಯಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಅಮೃತಸರದ ಬಚಿವಿಂಡ್ ಗ್ರಾಮದಲ್ಲಿ ಸೋಮವಾರ ರಾತ್ರಿ ಪಾಕಿಸ್ತಾನದ ಕಡೆಯಿಂದ ಗ್ರಾಮಕ್ಕೆ ಪ್ರವೇಶಿಸುತ್ತಿದ್ದ ಮತ್ತೊಂದು ಡ್ರೋನ್ ಅನ್ನು ಬಿಎಸ್‌ಎಫ್ ಹೊಡೆದುರುಳಿಸಿತು. ಮೂರು ಪ್ಯಾಕೆಟ್‌ಗಳ ಒಳಗೆ ಬಚ್ಚಿಟ್ಟಿದ್ದ ಮೂರು ಕೆಜಿ ಹೆರಾಯಿನ್, ಶೋಧದ ವೇಳೆ ಪಾಲಿಯೆಸ್ಟರ್ ಬ್ಯಾಗ್‌ನಿಂದ ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಇಬ್ಬರನ್ನೂ ಸಹ ಬಂಧಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಅಮೃತಸರದ ಹರ್ಡೊ ರಟ್ಟನ್ ಗ್ರಾಮದಲ್ಲಿ, ಮತ್ತೊಂದು ಪಾಕಿಸ್ತಾನಿ ಡ್ರೋನ್‌ ಮೇಲೆ ಬಿಎಸ್‌ಎಫ್ ಗುಂಡಿನ ದಾಳಿ ನಡೆಸಿತು. ನಂತರ ಪ್ರದೇಶದಲ್ಲಿ ಶೋಧ ನಡೆಸಿದಾಗ 2 ಕೆಜಿ ತೂಕದ ಎರಡು ಹೆರಾಯಿನ್ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡರು. ಇನ್ನು ಫಜಿಲ್ಕಾ ಜಿಲ್ಲೆಯಲ್ಲಿ, ಮಂಗಳವಾರ ಮುಂಜಾನೆ ನಾಥ ಸಿಂಗ್ ವಾಲಾ ಗ್ರಾಮದ ಬಳಿ ಗಡಿ ಬೇಲಿಯ ಮೇಲೆ ಏನನ್ನೋ ಎಸೆಯುವ ಶಬ್ದ ಕೇಳಿದಾಗ ಬಿಎಸ್ಎಫ್ ಸಿಬ್ಬಂದಿ ಕೆಲವು ದುಷ್ಕರ್ಮಿಗಳ ಮೇಲೆ ಗುಂಡು ಹಾರಿಸಿದರು. ಈ ವೇಳೆ ದುಷ್ಕರ್ಮಿಗಳು ಅಲ್ಲಿಂದ ಓಡಿಹೋಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ. ಶೋಧ ವೇಳೆ 2 ಕೆಜಿ ತೂಕದ ಎರಡು ಹೆರಾಯಿನ್ ಪ್ಯಾಕೆಟ್ ಮತ್ತು ಚೀನಾ ನಿರ್ಮಿತ ಪಿಸ್ತೂಲ್ ಜೊತೆಗೆ ಮ್ಯಾಗಜೀನ್ ಮತ್ತು ಎಂಟು ಸುತ್ತುಗಳು ಪ್ರದೇಶದಲ್ಲಿ ಶೋಧನೆಯಲ್ಲಿ ಪತ್ತೆಯಾಗಿವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com