ಅದಾನಿ ಜೊತೆ ರಾಬರ್ಟ್ ವಾದ್ರಾ? ರಾಹುಲ್ ಗಾಂಧಿ, ಕಾಂಗ್ರೆಸ್ ವಿರುದ್ಧ ಸ್ಮೃತಿ ಇರಾನಿ ವಾಗ್ದಾಳಿ

ಉದ್ಯಮಿ ಗೌತಮ್ ಅದಾನಿ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುತ್ತಿರುವ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವವದೆಹಲಿ: ಉದ್ಯಮಿ ಗೌತಮ್ ಅದಾನಿ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುತ್ತಿರುವ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ನಡೆಸಿದ್ದು, ಗೌತಮ್ ಅದಾನಿ ಜೊತೆಗಿನ ರಾಬರ್ಟ್ ವಾದ್ರಾ ಅವರ ಹಳೆಯ ಫೋಟೋವನ್ನು ಬಹಿರಂಗಪಡಿಸಿರುವ ಸ್ಮೃತಿ ಇರಾನಿ ಇದು ಏನೆಂದು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.

ಅದಾನಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿಭಟನೆ ಮುಂದುವರಿದಿರುವಂತೆಯೇ ಕೇಂದ್ರ ಸಚಿವೆ ಸ್ಮೃತಿ ಇರಾನಿ ಇಂದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರನ್ನು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿಯೊಂದಿಗೆ 2009ರಲ್ಲಿ ತೆಗೆಸಿಕೊಂಡಿರುವ ಫೋಟೋವನ್ನು ಉಲ್ಲೇಖಿಸಿದ ಸ್ಮೃತಿ ಇರಾನಿ, ವಾದ್ರಾ ಅವರು ಅದಾನಿಯೊಂದಿಗೆ ಹಸ್ತಲಾಘವ ಮಾಡುತ್ತಿರುವುದು ಏಕೆ? ರಾಹುಲ್ ಗಾಂಧಿಗೆ ಅದಾನಿಯೊಂದಿಗೆ ಇಷ್ಟು ಅಸಮಾಧಾನವಿದ್ದರೆ ರಾಬರ್ಟ್ ವಾದ್ರಾ ಯಾಕೆ ಅದಾನಿ ಜೊತೆ ಇದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ ದ್ವೇಷ ಅವರ ಬ್ರಿಟನ್ ಪ್ರವಾಸದಲ್ಲಿ ಗೋಚರಿಸಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ರಾಹುಲ್ ಗಾಂಧಿ ಅವರು ಇಡೀ ಒಬಿಸಿ ಸಮುದಾಯದ ಮೇಲೆ ದಾಳಿ ಮಾಡುವುದು ಅವರ ಹಕ್ಕು ಎಂದು ಭಾವಿಸಿದ್ದರು. ಪ್ರಧಾನಿ ಮೋದಿ ಶಕ್ತಿ ಮತ್ತು ಅವರ ಇಮೇಜ್ ಅನ್ನು ಹಾಳುಮಾಡಲು ರಾಹುಲ್ ಗಾಂಧಿ 2019ರಿಂದ ಆರಂಭಿಸಿದ್ದಾರೆ. ಇದು ಗಾಂಧಿ ಕುಟುಂಬದ ಮೊದಲ ದಾಳಿಯಲ್ಲ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

ರಾಜಕೀಯ ಹತಾಶೆಯಲ್ಲಿ ರಾಹುಲ್ ಗಾಂಧಿ ಅವರ ಬ್ರಿಟನ್ ಪ್ರವಾಸದ ಸಮಯದಲ್ಲಿ ನರೇಂದ್ರ ಮೋದಿಯವರ ಮೇಲಿನ ದ್ವೇಷವು ಹೊರಬಂದಿತ್ತು ಎಂದು ಸ್ಮೃತಿ ಇರಾನಿ ಹೇಳಿದರು, 'ಆದಾಗ್ಯೂ, ನರೇಂದ್ರ ಮೋದಿಯ ಮೇಲೆ ದಾಳಿ ಮಾಡುವಾಗ ಅವರು ಇಡೀ ಒಬಿಸಿ ಸಮುದಾಯದ ಮೇಲೆ ದಾಳಿ ಮಾಡಿರುವುದು ತಿಳಿಯಲಿಲ್ಲವೇ ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com