ದೆಹಲಿಯಲ್ಲಿ ಶಾಂಘೈ ಗ್ರೂಪ್‌ನ ಭದ್ರತಾ ಸಲಹೆಗಾರರ ಮಹತ್ವದ ಭೇಟಿ: ಪಾಕ್ ಭಾಗಿ ಸಾಧ್ಯತೆ

ದೆಹಲಿಯಲ್ಲಿ ಇಂದು ನಡೆಯಲಿರುವ ಶಾಂಘೈ ಗ್ರೂಪ್‌ನ ಭದ್ರತಾ ಸಲಹೆಗಾರ (SCO) ಮಹತ್ವದ ಭೇಟಿಯಲ್ಲಿ ಪಾಕಿಸ್ತಾನದ ಭದ್ರತಾ ಸಲಹೆಗಾರರು ಪಾಲ್ಗೊಳ್ಳುವ ಸಾಧ್ಯತೆ ಇದ್ದು ಮಹತ್ವದ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.
ರಾಷ್ಟ್ಪೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್
ರಾಷ್ಟ್ಪೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್
Updated on

ನವದೆಹಲಿ: ದೆಹಲಿಯಲ್ಲಿ ಇಂದು ನಡೆಯಲಿರುವ ಶಾಂಘೈ ಗ್ರೂಪ್‌ನ ಭದ್ರತಾ ಸಲಹೆಗಾರ (SCO) ಮಹತ್ವದ ಭೇಟಿಯಲ್ಲಿ ಪಾಕಿಸ್ತಾನದ ಭದ್ರತಾ ಸಲಹೆಗಾರರು ಪಾಲ್ಗೊಳ್ಳುವ ಸಾಧ್ಯತೆ ಇದ್ದು ಮಹತ್ವದ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.

ಭಾರತ ಆತಿಥ್ಯ ವಹಿಸಿರುವ ನವದೆಹಲಿಯಲ್ಲಿ ನಡೆಯಲಿರುವ ಎಸ್​ಸಿಒ ಸಭೆಯಲ್ಲಿ ಪಾಲ್ಗೊಳ್ಳುವಂತೆ ಈ ಹಿಂದೆ ಪಾಕಿಸ್ತಾನ ಸೇರಿದಂತೆ ಎಸ್​ಸಿಒ ರಾಷ್ಟ್ರಗಳಿಗೆ ಭಾರತ ಆಹ್ವಾನ ಕಳುಹಿಸಿತ್ತು. ಅದರಂತೆ ಬಹುತೇಕ ಸದಸ್ಯ ರಾಷ್ಟ್ರಗಳು ಇಂದಿನ SCO ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರು (NSA) ಮತ್ತು ಉನ್ನತ ಅಧಿಕಾರಿಗಳ ಸಭೆಯನ್ನು ಆಯೋಜಿಸಲಾಗಿದ್ದು, ಈ ಮಹತ್ವದ ಸಭೆಯಲ್ಲಿ ಪಾಕಿಸ್ತಾನದ ಭದ್ರತಾ ಅಧಿಕಾರಿಗಳೂ ಕೂಡ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಇಂದು ನಡೆಯಲಿರುವ ಎಸ್‌ಸಿಒ ಎನ್‌ಎಸ್‌ಎ (ರಾಷ್ಟ್ರೀಯ ಭದ್ರತಾ ಸಲಹೆಗಾರರ) ಮಟ್ಟದ ಸಭೆಯ ಆರಂಭಕ್ಕೂ ಮೊದಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಆರಂಭಿಕ ಭಾಷಣ ಮಾಡಲಿದ್ದಾರೆ. ಮೂಲಗಳ ಪ್ರಕಾರ ಭಾರತ ಆಯೋಜಿಸುತ್ತಿರುವ ಎಸ್‌ಸಿಒದ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯಲ್ಲಿ ಭಾಗವಹಿಸಲು ಪಾಕಿಸ್ತಾನ ನಿರ್ಧರಿಸಿದೆ. ಭಾಗವಹಿಸುವ ವಿಧಾನವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ ಪ್ರತಿನಿಧಿಗಳೂ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಪ್ರಮುಖ SCO ಸಭೆಯು ದೆಹಲಿಯಲ್ಲಿ ಆತಿಥ್ಯವಹಿಸಲಿರುವ ಏಪ್ರಿಲ್ 27-29 ರ ರಕ್ಷಣಾ ಮಂತ್ರಿಗಳ ಸಭೆಯಾಗಿರಲಿದೆ.  ಈ ಎಸ್‌ಸಿಒ ಸಭೆಯು ಮೇ 4 ಮತ್ತು 5 ರಂದು ಗೋವಾದಲ್ಲಿ ನಡೆಯಲಿರುವ ವಿದೇಶಾಂಗ ಮಂತ್ರಿಗಳ ಸಭೆ ಮತ್ತು ಜುಲೈನಲ್ಲಿ ಎಸ್‌ಸಿಒ ಶೃಂಗಸಭೆ - ಇದರಲ್ಲಿ ಎಸ್‌ಸಿಒ ಸದಸ್ಯರ ರಾಜ್ಯಗಳ ಮುಖ್ಯಸ್ಥರು ಭಾಗವಹಿಸುವ ಸಾಧ್ಯತೆಯಿದೆ. 

ಏನಿದು ಎಸ್ ಸಿಒ ಗ್ರೂಪ್?
ಶಾಂಘೈ ಸಹಕಾರ ಸಂಸ್ಥೆ (SCO) 2001 ರಲ್ಲಿ ಸ್ಥಾಪಿತವಾದ ಅಂತರ ಸರ್ಕಾರಿ ಸಂಸ್ಥೆಯಾಗಿದೆ ಮತ್ತು ಇದು ಎಂಟು ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ, ಅವುಗಳೆಂದರೆ, ಭಾರತ, ಚೀನಾ, ಕಝಾಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ, ರಷ್ಯಾ, ತಜಕಿಸ್ತಾನ ಮತ್ತು ಉಜ್ಬೇಕಿಸ್ತಾನ. ಭಾರತವು ಜೂನ್ 9, 2017 ರಂದು SCO ಯ ಪೂರ್ಣ ಸದಸ್ಯತ್ವವನ್ನು ಪಡೆದುಕೊಂಡಿದೆ. ಅಫ್ಘಾನಿಸ್ತಾನ, ಬೆಲಾರಸ್, ಇರಾನ್ ಮತ್ತು ಮಂಗೋಲಿಯಾ ಎಂಬ ನಾಲ್ಕು ವೀಕ್ಷಕ ರಾಷ್ಟ್ರಗಳಿವೆ ಮತ್ತು ಆರು ಸಂವಾದ ಪಾಲುದಾರರು ಅಂದರೆ ಅರ್ಮೇನಿಯಾ, ಅಜೆರ್ಬೈಜಾನ್, ಕಾಂಬೋಡಿಯಾ, ನೇಪಾಳ, ಶ್ರೀಲಂಕಾ ಮತ್ತು ಟರ್ಕಿಗಳು ಈ ಪಟ್ಟಿಯಲ್ಲಿವೆ.

ಶಾಂಘೈ ಸಹಕಾರ ಸಂಸ್ಥೆ (SCO) ತನ್ನ ಸದಸ್ಯ ರಾಷ್ಟ್ರಗಳ ನಡುವೆ ಆರ್ಥಿಕ, ರಾಜಕೀಯ ಮತ್ತು ಮಿಲಿಟರಿ ಸಹಕಾರವನ್ನು ಉತ್ತೇಜಿಸುವ ಉದ್ದೇಶದಿಂದ ಎರಡು ದಶಕಗಳ ಹಿಂದೆ ಸ್ಥಾಪಿಸಲಾದ ಪ್ರಮುಖ ಪ್ರಾದೇಶಿಕ ಶಕ್ತಿಯಾಗಿದೆ. SCO ಯ ಎಂಟು-ಸದಸ್ಯ ರಾಷ್ಟ್ರಗಳು ಪ್ರಪಂಚದ ಒಟ್ಟು ಜನಸಂಖ್ಯೆಯ ಸುಮಾರು 42 ಪ್ರತಿಶತ ಮತ್ತು ಜಾಗತಿಕ GDP ಯ 25 ಪ್ರತಿಶತವನ್ನು ಪ್ರತಿನಿಧಿಸುತ್ತವೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com