
ರಾಹುಲ್ ಗಾಂಧಿ
ನವದೆಹಲಿ: ರಾಹುಲ್ ಗಾಂಧಿ ಅನರ್ಹತೆಯ ವಿಷಯವನ್ನು ಜರ್ಮನಿ ಗಮನಿಸಿದ್ದು, ಈ ಬೆಳವಣಿಗೆ ಕಾಂಗ್ರೆಸ್- ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ಬಿಜೆಪಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಭಾರತದ ಆಂತರಿಕ ವಿಷಯಗಳಿಗೆ ಪ್ರವೇಶಿಸುವುದಕ್ಕೆ ಕಾಂಗ್ರೆಸ್ ವಿದೇಶದ ಶಕ್ತಿಗಳಿಗೆ ಆಹ್ವಾನ ನೀಡುತ್ತಿದೆ ಎಂಬ ಗಂಭೀರ ಆರೋಪ ಮಾಡಿದೆ.
ಇತ್ತ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಅದಾನಿ ವಿಷಯದಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಪ್ರತ್ಯಾರೋಪ ಮಾಡಿದೆ
ರಾಹುಲ್ ಗಾಂಧಿಗೆ ಕಿರುಕುಳ ನೀಡುವ ಮೂಲಕ ಭಾರತದಲ್ಲಿ ಪ್ರಜಾಪ್ರಭುತ್ವದ ವಿಷಯದಲ್ಲಿ ಹೇಗೆ ರಾಜಿಮಾಡಿಕೊಳ್ಳಲಾಗುತ್ತಿದೆ ಎಂಬುದನ್ನು ಗಮನಿಸಿದ ಜರ್ಮನಿಯ ವಿದೇಶಾಂಗ ಸಚಿವಾಲಯ ಹಾಗೂ ಡಾಯ್ಚ ವೆಲ್ಲೆಯ ಮುಖ್ಯ ಅಂತಾರಾಷ್ಟ್ರೀಯ ಸಂಪಾದಕ ರಿಚರ್ಡ್ ವಾಕರ್ ಗೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದರು.
ಇದನ್ನೂ ಓದಿ: 'ಮೋದಿ' ಉಪನಾಮ ವಿವಾದ: ರಾಹುಲ್ ಗಾಂಧಿ ವಿರುದ್ಧ ಬ್ರಿಟನ್ ಕೋರ್ಟ್ ನಲ್ಲಿ ದೂರು ದಾಖಲಿಸುವೆ ಎಂದ ಲಲಿತ್ ಮೋದಿ
ರಾಹುಲ್ ಗಾಂಧಿ ಅವರ ಅನರ್ಹತೆಗೆ ಪ್ರತಿಕ್ರಿಯೆ ನೀಡಿದ್ದ ಜರ್ಮನಿಯ ವಿದೇಶಾಂಗ ವಕ್ತಾರರ ವಿಡಿಯೋವನ್ನು ಹಿರಿಯ ಪತ್ರಕರ್ತ ರಿಚರ್ಡ್ ಪೋಸ್ಟ್ ಮಾಡಿದ್ದರು.
ಜರ್ಮನಿಯ ವಿದೇಶಾಂಗ ಸಚಿವಾಲಯದ ವಕ್ತಾರರು ಈ ಬಗ್ಗೆ ಮಾತನಾಡಿದ್ದು, "ಭಾರತದ ವಿರೋಧ ಪಕ್ಷದ ರಾಜಕಾರಣಿ ರಾಹುಲ್ ಗಾಂಧಿ ವಿರುದ್ಧದ ಪ್ರಕರಣದ ತೀರ್ಪನ್ನು ನಾವು ಗಮನಿಸಿದ್ದೇವೆ ಮತ್ತು ಅವರ ಸಂಸದೀಯ ಸದಸ್ಯತ್ವವನ್ನು ಅಮಾನತುಗೊಳಿಸಿದ್ದೇವೆ. ನಮಗೆ ತಿಳಿದಿರುವಂತೆ, ಗಾಂಧಿಯವರು ಮೇಲ್ಮನವಿ ಸಲ್ಲಿಸುವ ಹಂತದಲ್ಲಿದ್ದಾರೆ. ಈ ತೀರ್ಪು ನಿಲ್ಲುತ್ತದೆಯೇ ಮತ್ತು ಅವರ ಅಮಾನತು ಯಾವುದೇ ಆಧಾರವನ್ನು ಹೊಂದಿದೆಯೇ ಎಂಬುದು ನಂತರ ಸ್ಪಷ್ಟವಾಗುತ್ತದೆ, ”ಎಂದು ಹೇಳಿದ್ದಾರೆ.
"ನ್ಯಾಯಾಂಗ ಸ್ವಾತಂತ್ರ್ಯದ ಮಾನದಂಡಗಳು ಮತ್ತು ಮೂಲಭೂತ ಪ್ರಜಾಪ್ರಭುತ್ವದ ತತ್ವಗಳು" ರಾಹುಲ್ ಗಾಂಧಿ ವಿರುದ್ಧದ ಪ್ರಕ್ರಿಯೆಗಳಿಗೆ ಸಮಾನವಾಗಿ ಅನ್ವಯಿಸುತ್ತವೆ ಎಂದು ಜರ್ಮನಿ ನಿರೀಕ್ಷಿಸುತ್ತದೆ ಎಂದು ವಕ್ತಾರರು ಹೇಳಿದ್ದಾರೆ.
ಇದನ್ನೂ ಓದಿ: ಅದಾನಿ ವಿಚಾರದಲ್ಲಿ ತನಿಖೆ ಯಾಕಿಲ್ಲ, ಇಷ್ಟು ಭಯ ಯಾಕೆ: ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್ ಗಾಂಧಿ ಪ್ರಶ್ನೆ
ಈ ಬೆಳವಣಿಗೆ ಬೆನ್ನಲ್ಲೇ ಬಿಜೆಪಿಯ ಕೆಲವು ನಾಯಕರು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದಾರೆ. ದಿಗ್ವಿಜಯ್ ಸಿಂಗ್ ಅವರ ಟ್ವೀಟ್ ಸ್ಕ್ರೀನ್ ಶಾಟ್ ನ್ನು ಟ್ವೀಟ್ ಮಾಡಿರುವ ಕಾನೂನು ಸಚಿವ ಕಿರಣ್ ರಿಜಿಜು, ಭಾರತದ ಆಂತರಿಕ ವಿಷಯಗಳಿಗೆ ವಿದೇಶಿ ಶಕ್ತಿಗಳ ಹಸ್ತಕ್ಷೇಪವನ್ನು ಆಹ್ವಾನಿಸಿರುವ ರಾಹುಲ್ ಗಾಂಧಿ ಅವರಿಗೆ ಧನ್ಯವಾದಗಳು ಎಂದು ವ್ಯಂಗ್ಯವಾಡಿದ್ದಾರೆ.
ವಿದೇಶಿಗರ ಹಸ್ತಕ್ಷೇಪದಿಂದ ಭಾರತದ ನ್ಯಾಯಾಂಗದ ಮೇಲೆ ಪರಿಣಾಮ ಬೀರುವುದಕ್ಕೆ ಸಾಧ್ಯವಿಲ್ಲ. ಭಾರತ ವಿದೇಶಿ ಪ್ರಭಾವವನ್ನು ಸಹಿಸುವುದಿಲ್ಲ ಏಕೆಂದರೆ ನಮ್ಮ ಪ್ರಧಾನಿ ಮೋದಿ ಎಂದು ರಿಜಿಜು ಹೇಳಿದ್ದಾರೆ.
Mr. Rijiju, why divert from the main issue? The issue is that the Prime Minister cannot answer Rahul Gandhi’s questions about Adani.
— Pawan Khera
Instead of misleading people, please answer the questions? https://t.co/dBK7ppMCFi