ಆಪರೇಷನ್ ಕಾವೇರಿ: 3,400 ಭಾರತೀಯರ ರಕ್ಷಣೆ, ಸುಡಾನ್‌ನಲ್ಲಿ ಸಿಲುಕಿರುವ ಇತರರು ಬುಧವಾರದೊಳಗೆ ಸ್ವದೇಶಕ್ಕೆ ವಾಪಸ್

ಯುದ್ಧ ಪೀಡಿತ ಸುಡಾನ್‌ನಲ್ಲಿ ಸಿಲುಕಿಕೊಂಡಿದ್ದ ಕನಿಷ್ಠ 3,400 ಭಾರತೀಯರನ್ನು 'ಆಪರೇಷನ್ ಕಾವೇರಿ'ಯಡಿ ಭಾರತೀಯ ಅಧಿಕಾರಿಗಳು ರಕ್ಷಿಸಿದ್ದಾರೆ.
ಸೂಡಾನ್ ನಿಂದ ರಕ್ಷಿಸಲಾದ ಭಾರತೀಯರು
ಸೂಡಾನ್ ನಿಂದ ರಕ್ಷಿಸಲಾದ ಭಾರತೀಯರು
Updated on

ನವದೆಹಲಿ: ಯುದ್ಧ ಪೀಡಿತ ಸುಡಾನ್‌ನಲ್ಲಿ ಸಿಲುಕಿಕೊಂಡಿದ್ದ ಕನಿಷ್ಠ 3,400 ಭಾರತೀಯರನ್ನು 'ಆಪರೇಷನ್ ಕಾವೇರಿ'ಯಡಿ ಭಾರತೀಯ ಅಧಿಕಾರಿಗಳು ರಕ್ಷಿಸಿದ್ದಾರೆ.

ಈ ಕುರಿತು ಮಾತನಾಡಿರುವ  ವಿದೇಶಾಂಗ ಕಾರ್ಯದರ್ಶಿ ಕ್ವಾತ್ರಾ,  ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಕೇಂದ್ರ ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸುಡಾನ್‌ನಲ್ಲಿ ಉನ್ನತ ಮಟ್ಟದ ಸಭೆ ಆಯೋಜಿಸುವುದರೊಂದಿಗೆ ಇದು ಪ್ರಾರಂಭವಾಯಿತು ಮತ್ತು ನಂತರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರನ್ನು ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆಗೆ ಜೆದ್ಹಾಕ್ಕೆ ಕಳುಹಿಸಿದರು. ಸೌದಿ ಸರ್ಕಾರವು ಸಾಕಷ್ಟು ನೆರವು ನೀಡಿದ ಪರಿಣಾಮವಾಗಿ ನಮ್ಮ ನಾಗರಿಕರಿಗೆ ತಾತ್ಕಾಲಿಕ ಮೂಲಭೂತ  ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ. 

ಬಹುತೇಕ ಎಲ್ಲಾ ಭಾರತೀಯರು ಸುರಕ್ಷಿತ ವಲಯದಲ್ಲಿದ್ದು, ಸುಡಾನ್ ತೊರೆದಿರುವುದರಿಂದ ಕೊನೆಯ ತಂಡದಲ್ಲಿರುವ ಭಾರತೀಯರು ಬುಧವಾರದ ವೇಳೆಗೆ ಭಾರತವನ್ನು ತಲುಪುವ ನಿರೀಕ್ಷೆಯಿದೆ. ಅವರು ವಿವಿಧ ವಿಮಾನಗಳ ಮೂಲಕ ಭಾರತವನ್ನು ತಲುಪಲಿದ್ದಾರೆ.  ಖಾಸಗಿ ದೇಶೀಯ ವಿಮಾನಯಾನ ಸಂಸ್ಥೆಯಾದ ಸ್ಪೈಸ್‌ಜೆಟ್ ಕೂಡ ಸೋಮವಾರ ಜಿದ್ಹಾದಲ್ಲಿ ಸಿಲುಕಿದ ಭಾರತೀಯರನ್ನು ಕೊಚ್ಚಿಗೆ ಮರಳಿ ಕರೆತರುವ ಮೂಲಕ ರಕ್ಷಣಾ ಪ್ರಯತ್ನಗಳಲ್ಲಿ ಸೇರಿಕೊಂಡಿದೆ.

ದೆಹಲಿ, ಮುಂಬೈ ಮತ್ತು ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿನ ಭಾರತೀಯರನ್ನು ಕರೆತರಲು ಭಾರತೀಯ ವಾಯುಪಡೆಯು ತನ್ನದೇ ಆದ C130J ವಿಮಾನದ  ಜೊತೆಗೆ ಭಾರತವು ಈ ಹಿಂದೆ ಸೌದಿ ಏರ್‌ಲೈನ್ಸ್‌ನ ಸೇವೆಗಳನ್ನು ತೆಗೆದುಕೊಂಡಿತ್ತು.

3,500 ಭಾರತೀಯರಲ್ಲದೆ, ಭಾರತೀಯ ಮೂಲದ 1, 000 ಜನರು ಸೂಡಾನ್ ನಲ್ಲಿದ್ದಾರೆ.  ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಅವರು ಅಲ್ಲಿಯೇ  ನೆಲೆಸಿದ್ದಾರೆ ಮತ್ತು ಸುಡಾನ್ ಪಾಸ್‌ಪೋರ್ಟ್‌ ಹೊಂದಿರುವುದರಿಂದ ಅವರು ಹೊರಹೋಗಲು ಯಾವುದೇ ಆಸಕ್ತಿಯನ್ನು ತೋರಿಸಿಲ್ಲ. ಭಾರತವು ಈ ಹಿಂದೆ ಖಾರ್ಟೂಮ್‌ನಿಂದ ಫ್ರೆಂಚ್ ರಾಯಭಾರ ಕಚೇರಿಯ ಸಿಬ್ಬಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com