ದಿ ಕೇರಳ ಸ್ಟೋರಿ ಚಿತ್ರಕ್ಕೆ ತಡೆ ನೀಡಲು 'ಸುಪ್ರೀಂ' ನಕಾರ, ಹೈಕೋರ್ಟ್ ಮೋರೆ ಹೋಗುವಂತೆ ಸಲಹೆ!

ಲವ್ ಜಿಹಾದ್ ವಿಚಾರವಾಗಿ ವ್ಯಾಪಕ ವಿವಾದಕ್ಕೆ ಗ್ರಾಸವಾಗಿರುವ ದಿ ಕೇರಳ ಸ್ಟೋರಿ ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದೆ.
ದಿ ಕೇರಳ ಸ್ಟೋರಿ
ದಿ ಕೇರಳ ಸ್ಟೋರಿ

ನವದೆಹಲಿ: ಲವ್ ಜಿಹಾದ್ ವಿಚಾರವಾಗಿ ವ್ಯಾಪಕ ವಿವಾದಕ್ಕೆ ಗ್ರಾಸವಾಗಿರುವ ದಿ ಕೇರಳ ಸ್ಟೋರಿ ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದೆ.

"ದಿ ಕೇರಳ ಸ್ಟೋರಿ" ಚಿತ್ರದ ವಿರುದ್ಧದ ಮನವಿಗಳನ್ನು ಪರಿಗಣಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಅರ್ಜಿದಾರರಿಗೆ ಹೈಕೋರ್ಟ್‌ ನಲ್ಲಿ ಮನವಿ ಸಲ್ಲಿಸುವಂತೆ ಸೂಚಿಸಿದೆ. ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ದಿ ಕೇರಳ ಸ್ಟೋರಿ ಚಿತ್ರ ಇದೇ ಮೇ 5ರಂದು ತೆರೆ ಕಾಣುತ್ತಿದ್ದು, ಲವ್ ಜಿಹಾದ್ ಸೇರಿದಂತೆ ಚಿತ್ರದ ವಿವಾದಿತ ಅಂಶಗಳ ವಿಚಾರವಾಗಿ ಇದು ವ್ಯಾಪಕ ವಿವಾದಕ್ಕೆ ಗ್ರಾಸವಾಗಿದೆ.

ಇದೇ ಚಿತ್ರದ ವಿಚಾರವಾಗಿ ಹಲವರು ಇದೀಗ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಸಲ್ಲಿಸಿದ್ದು. 'ಚಿತ್ರದ ಶೀರ್ಷಿಕೆಗೆ ಇದು ಕಾಲ್ಪನಿಕ ಕೃತಿ ಎಂಬ ಹಕ್ಕು ನಿರಾಕರಣೆ ಸೇರಿಸಬೇಕು ಎಂಬ ಮನವಿ ಸೇರಿದಂತೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠದ ಮುಂದೆ ತುರ್ತು ಪಟ್ಟಿಗಾಗಿ ಉಲ್ಲೇಖಿಸಲಾಗಿದೆ. ಆದರೆ ಇಂದು ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದ್ದು, ಮೊದಲು ಹೈಕೋರ್ಟ್ ನಲ್ಲಿ ದಾವೆ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿದೆ. 

'ಆರ್ಟಿಕಲ್ 32 ರ ಅಡಿಯಲ್ಲಿ ಕೋರಲಾದ ಪರಿಹಾರಗಳನ್ನು ಆರ್ಟಿಕಲ್ 226 ರ ಅಡಿಯಲ್ಲಿ ಹೈಕೋರ್ಟ್‌ನಲ್ಲಿ ಸೂಕ್ತ ಪ್ರಕ್ರಿಯೆಗಳಲ್ಲಿ ಉತ್ತಮವಾಗಿ ಮುಂದುವರಿಸಬಹುದು.. ಆ ಆಧಾರದ ಮೇಲೆ ಅರ್ಜಿಯನ್ನು ಪರಿಗಣಿಸಲು ನಾವು ಒಲವು ಹೊಂದಿಲ್ಲ" ಎಂದು ಪೀಠವು ಹೇಳಿದೆ. ಅಲ್ಲದೆ ಸೂಕ್ತ ಹೈಕೋರ್ಟ್‌ಗೆ ಹೋಗಲು ಅರ್ಜಿದಾರರಿಗೆ ಮುಕ್ತವಾಗಿ ಬಿಡುತ್ತೇವೆ ಎಂದೂ ಹೇಳಿದೆ.

ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ವಕೀಲರು, ಚಲನಚಿತ್ರದ ವಿರುದ್ಧ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಮತ್ತು ಮೇ 5 ರಂದು ಚಲನಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡಲು ನಿಗದಿಪಡಿಸಿದ ದಿನದಂದು ವಿಚಾರಣೆಗೆ ಪಟ್ಟಿ ಮಾಡಲಾಗಿದೆ. ಹೀಗಾಗಿ ಅದಕ್ಕೂ ಮೊದಲು ಈ ಬಗ್ಗೆ ವಿಚಾರಣೆ ನಡೆಯಬೇಕು ಎಂದು ವಾದಿಸಿದರು. 

ಇದನ್ನು ಗಮನಿಸಿದ ಪೀಠ, ‘‘ಹೈಕೋರ್ಟ್‌ನಲ್ಲಿ ಅನುಭವಿ ನ್ಯಾಯಾಧೀಶರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಸ್ಥಳೀಯ ಪರಿಸ್ಥಿತಿಗಳ ಅರಿವಿದೆ. ನಾವು ಏಕೆ ಸೂಪರ್ (ಆರ್ಟಿಕಲ್) 226 ನ್ಯಾಯಾಲಯವಾಗಬೇಕು?" ಎಂದು ಪ್ರಶ್ನಿಸಿದೆ. ಅಲ್ಲದೆ ಅರ್ಜಿದಾರರನ್ನು ಹೈಕೋರ್ಟ್‌ಗೆ ಸಂಪರ್ಕಿಸಲು ಕೇಳಿದೆ ಮತ್ತು ಅವರ ಮನವಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವ ಅವರ ಮನವಿಯನ್ನು ಪರಿಗಣಿಸಬಹುದು ಎಂದು ಹೇಳಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com