'ದಯವಿಟ್ಟು ಅಪ್ಪ ಹಿಂತಿರುಗಿ': ರಾಜೌರಿ ಸ್ಫೋಟದಲ್ಲಿ ಹುತಾತ್ಮರಾಗಿದ್ದ ಯೋಧನ ಮಗಳ ಆಕ್ರಂದನ!

ನೀವು ಯಾಕೆ ಎದ್ದೇಳುತ್ತಿಲ್ಲ? ನನಗೆ ಏನೂ ಬೇಡ ಅಪ್ಪ. ದಯವಿಟ್ಟು ಹಿಂತಿರುಗಿ ಎಂದು ಹುತಾತ್ಮ ಯೋಧ ಪ್ಯಾರಾಟ್ರೂಪರ್ ನೀಲಮ್ ಸಿಂಗ್ ಅವರ 10 ವರ್ಷದ ಪುತ್ರಿ ಪಾವನಾ ಚಿಬ್ ಕಣ್ಣೀರಾಗುತ್ತಿರುವ ದೃಶ್ಯ ಎಂತಹವರ ಹೃದಯವನ್ನು ಹಿಂಡುವಂತಿದೆ.
ಕಣ್ಣೀರು ಹಾಕುತ್ತಿರುವ ಪಾವನ ಚಿಬ್
ಕಣ್ಣೀರು ಹಾಕುತ್ತಿರುವ ಪಾವನ ಚಿಬ್

ದಲ್ಪತ್: ನೀವು ಯಾಕೆ ಎದ್ದೇಳುತ್ತಿಲ್ಲ? ನನಗೆ ಏನೂ ಬೇಡ ಅಪ್ಪ. ದಯವಿಟ್ಟು ಹಿಂತಿರುಗಿ ಎಂದು ಹುತಾತ್ಮ ಯೋಧ ಪ್ಯಾರಾಟ್ರೂಪರ್ ನೀಲಮ್ ಸಿಂಗ್ ಅವರ 10 ವರ್ಷದ ಪುತ್ರಿ ಪಾವನಾ ಚಿಬ್ ಕಣ್ಣೀರಾಗುತ್ತಿರುವ ದೃಶ್ಯ ಎಂತಹವರ ಹೃದಯವನ್ನು ಹಿಂಡುವಂತಿದೆ.

ಪಕ್ಕದಲ್ಲಿಯೇ ನಿಂತ ಪಾವನ ತಾಯಿ ವಂದನಾ ತನ್ನ ಗಂಡನ ನಿರ್ಜೀವ ಮುಖವನ್ನು ನಿರಂತರವಾಗಿ ನೋಡುತ್ತಿದ್ದಳು. ತನ್ನ ಗಂಡ ಇಹಲೋಕ ತ್ಯಜಿಸಿದ್ದಾನೆಂದು ಆಕೆಗೆ ನಂಬಲಾಗಲಿಲ್ಲ. ಪ್ಯಾರಾಟ್ರೂಪರ್‌ನ ಏಳು ವರ್ಷದ ಮಗ ಅಂಕಿತ್ ಕೂಡ ಶೋಕಿತನಾಗಿದ್ದನು. ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಭಯೋತ್ಪಾದಕರು ನಡೆಸಿದ ಸ್ಫೋಟದಲ್ಲಿ ಹುತಾತ್ಮರಾದ ಐವರು ಯೋಧರಲ್ಲಿ ನೀಲಂ ಸಿಂಗ್ ಸಹ ಒಬ್ಬರಾಗಿದ್ದಾರೆ. ಈ ಪ್ರದೇಶದಲ್ಲಿ ಭಯೋತ್ಪಾದಕರನ್ನು ಸದೆಬಡಿಯಲು ಸೇನಾ ಕಾರ್ಯಾಚರಣೆ ಮುಂದುವರಿದಿದೆ.

ನೀಲಮ್ ಸಿಂಗ್ ಅವರ ಪಾರ್ಥಿವ ಶರೀರ ಗ್ರಾಮಕ್ಕೆ ತೆರಳುತ್ತಿದ್ದಂತೆ ಜನರ ಕಣ್ಣಲ್ಲಿ ನೀರು ತುಂಬಿತ್ತು. ಆದರೆ, ಸೈನಿಕನ ತ್ಯಾಗದಿಂದ ಹೊರಹೊಮ್ಮಿದ ಹೆಮ್ಮೆಯ ಭಾವ ಅವರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸಿತು. ನೂರಾರು ಜನರು 'ಧರ್ತಿ ಕೆ ವೀರ್ ಸಪೂತ್' ವೀಕ್ಷಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿತು. ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ಜಮ್ಮುವಿನ ವಾಯುಪಡೆ ನಿಲ್ದಾಣದಿಂದ ಬೆಂಗಾವಲು ಪಡೆಯಲ್ಲಿ ತರಲಾಯಿತು. ಅಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಸೇನೆಯ ಉತ್ತರ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ, ಸೇನೆಯ ಇತರ ಉನ್ನತ ಅಧಿಕಾರಿಗಳು, ಪೊಲೀಸ್ ಮತ್ತು ಆಡಳಿತ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದರು.

ವಂದನಾ ಕೊನೆಯ ಬಾರಿಗೆ ಪತಿಗೆ ನಮಸ್ಕರಿಸುತ್ತಿದ್ದಂತೆ, ಇಡೀ ಗ್ರಾಮವು 'ನೀಲಂ ಸಿಂಗ್ ಅಮರ್ ರಹೇ' ಘೋಷಣೆಯೊಂದಿಗೆ ಪ್ರತಿಧ್ವನಿಸಿತು. ಪೂರ್ಣ ಸೇನಾ ಗೌರವಗಳೊಂದಿಗೆ ಸಿಂಗ್ ಅಂತ್ಯಕ್ರಿಯೆ ನೆರವೇರಿತು. ಸಹೋದರ ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ಜವಾನ್ ಅಂಗದ್ ಸಿಂಗ್ ಅವರು 'ಜೈ ಶಹೀದ್, ಜೈ ಸೇನೆ, ಜೈ ಹಿಂದ್' ಘೋಷಣೆಗಳ ನಡುವೆ ಚಿತೆಗೆ ಅಗ್ನಿಸ್ಪರ್ಷ ಮಾಡಿದರು. 

ನೀಲಂ ಸಿಂಗ್ 2003ರಲ್ಲಿ ಸೇನೆಗೆ ಸೇರಿದ್ದರು. ಸಿಂಗ್ ಅವರ ಮಾವ ಕ್ಯಾಪ್ಟನ್ (ನಿವೃತ್ತ) ರಘುವೀರ್ ಸಿಂಗ್ ಭಾವು ಅವರು, ನೀಲಂ ಸಿಂಗ್ ಧೈರ್ಯಶಾಲಿ ಮತ್ತು ಯಾವುದಕ್ಕೂ ಹೆದರುತ್ತಿರಲಿಲ್ಲ ಎಂದು ಹೇಳಿದರು. ಅವರು J&K ನ ವಿವಿಧ ಭಾಗಗಳಲ್ಲಿ ಹತ್ತಾರು ಯಶಸ್ವಿ ಕಾರ್ಯಾಚರಣೆಗಳ ಭಾಗವಾಗಿದ್ದರು. ಅವರು ಪ್ಯಾರಾ ಘಟಕ ಮತ್ತು ಸೈನ್ಯದ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದರು.

ಪ್ರತಿ ಆರು ತಿಂಗಳಿಗೊಮ್ಮೆ ಒಂದಲ್ಲ ಒಂದು ದಾಳಿ ನಡೆಯುತ್ತದೆ. ಎಷ್ಟು ಮನೆಗಳು ನಾಶವಾಗುತ್ತವೆ? ಸೈನ್ಯವು ಪ್ರತಿದಾಳಿ ಮಾಡುತ್ತದೆ. ನಂತರ ಶಾಂತಿ ನೆಲೆಸುತ್ತದೆ. ಆದರೆ ನಂತರ ಮತ್ತೊಂದು ದಾಳಿ ನಡೆಯುತ್ತದೆ. ಇನ್ನೊಂದು ಕುಟುಂಬವು ತನ್ನ ಮಗನನ್ನು ಕಳೆದುಕೊಳ್ಳುತ್ತದೆ. ನೀಲಂ ಸಿಂಗ್ ಎಲ್ಲರಿಗೂ ಸಹಾಯ ಮಾಡುವ ವ್ಯಕ್ತಿ ಎಂದು ಗ್ರಾಮಸ್ಥರು ಬಣ್ಣಿಸಿದರು. ಗ್ರಾಮಸ್ಥ ರಾಮೇಶ್ವರಂ ಸಿಂಗ್ ಮಾತನಾಡಿ, 'ನೀಲಂ ಸಿಂಗ್ ನನಗೆ ಪ್ರೋತ್ಸಾಹ ನೀಡಿದ ಕಾರಣದಿಂದ ನಾನು ಸಶಸ್ತ್ರ ಪಡೆಗೆ ಸೇರಿಕೊಂಡೆ, ಅವರಿಗೆ ನಾನು ಋಣಿಯಾಗಿದ್ದೇನೆ. ನೀಲಮ್ ಸಿಂಗ್ ತನಗೆ ಬೇಕಾದಾಗಲೆಲ್ಲ ಔಷಧ ಮತ್ತಿತರ ವಸ್ತುಗಳನ್ನು ತಂದು ಕೊಡುತ್ತಿದ್ದರು ಎಂದು ಮತ್ತೊಬ್ಬ ಗ್ರಾಮದ ಸರಿತಾ ದೇವಿ ನೆನಪಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com