ಕೇಜ್ರಿವಾಲ್ ನಿವಾಸಕ್ಕೆ 45 ಕೋಟಿ ಅಲ್ಲ, 171 ಕೋಟಿ ಖರ್ಚು ಮಾಡಲಾಗಿದೆ: ಕಾಂಗ್ರೆಸ್

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ರಾಜಕೀಯ ಜಗಳ ಮುಂದುವರಿದಿದೆ.
ಕೇಜ್ರಿವಾಲ್ ರ ಶೇಷ ಮಹಲ್
ಕೇಜ್ರಿವಾಲ್ ರ ಶೇಷ ಮಹಲ್

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ರಾಜಕೀಯ ಜಗಳ ಮುಂದುವರಿದಿದೆ.

ಕೇಜ್ರಿವಾಲ್ ಎದುರಾಳಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಶೇಷ ಮಹಲ್ ಸೌಂದರ್ಯೀಕರಣಕ್ಕೆ 45 ಕೋಟಿ ಖರ್ಚು ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಆದರೆ ಇದೀಗ ಕೇಜ್ರಿವಾಲ್ ಬಂಗಲೆಗೆ 45 ಕೋಟಿ ಅಲ್ಲ 171 ಕೋಟಿ ಖರ್ಚು ಮಾಡಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಖರ್ಚು ಮಾಡಿರುವ ಮೊತ್ತ 171 ಕೋಟಿ ರೂಪಾಯಿಯೇ ಹೊರತು 45 ಕೋಟಿ ರೂಪಾಯಿ ಅಲ್ಲ ಎಂದು ಕಾಂಗ್ರೆಸ್ ಇಂದು ಆರೋಪಿಸಿದೆ. ಮುಖ್ಯಮಂತ್ರಿಗಳ ವಸತಿ ಸಮುಚ್ಚಯದ ಹಲವು ನಿರ್ಮಾಣಗಳ ವಿಸ್ತರಣೆಗಾಗಿ ಮನೆಗಳನ್ನು ಕೆಡವಿ ಅಥವಾ ತೆರವು ಮಾಡಬೇಕಾದ ಅಧಿಕಾರಿಗಳಿಗೆ ತಮ್ಮ ಸರ್ಕಾರ ಹೆಚ್ಚುವರಿ ಫ್ಲ್ಯಾಟ್‌ಗಳನ್ನು ಖರೀದಿಸಬೇಕಾಗಿತ್ತು ಎಂದು ಕಾಂಗ್ರೆಸ್ ಹೇಳಿದೆ.

ಕೇಜ್ರಿವಾಲ್ ಅವರು ಕೃತಕವಾಗಿ ಸರಳ ಜೀವನ ನಡೆಸುತ್ತಿರುವುದಾಗಿ ಹೇಳಿಕೊಳ್ಳುತ್ತಾರೆ. ಆದರೆ ನಿವಾಸಕ್ಕೆ ಕೋಟಿಗಟ್ಟಲೆ ಖರ್ಚು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ವಕ್ತಾರ ಅಜಯ್ ಮಾಕೆನ್, ಇದಕ್ಕೆ ವಿರುದ್ಧವಾಗಿ, ಅವರ ಪಕ್ಷದ ನಾಯಕಿ ಮತ್ತು ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ದೆಹಲಿಯಲ್ಲಿ ಸರಳತೆಗೆ ಉದಾಹರಣೆಯಾಗಿದ್ದಾರೆ ಎಂದು ಹೇಳಿದರು.

ಶೀಲಾ ದೀಕ್ಷಿತ್ ಅವರ ಇಡೀ ಕ್ಯಾಬಿನೆಟ್ ಅವರ 15 ವರ್ಷಗಳ ಆಡಳಿತದಲ್ಲಿ ಅವರ ಮನೆಗಳಿಗೆ ಖರ್ಚು ಮಾಡಿದ ಮೊತ್ತವು ಅರವಿಂದ್ ಕೇಜ್ರಿವಾಲ್ ಅವರ ಅರಮನೆಯ ನವೀಕರಣಕ್ಕೆ ಖರ್ಚು ಮಾಡಿದ ಮೊತ್ತಕ್ಕೆ ಸಮವಾಗಿಲ್ಲ ಎಂದು ಮಾಕೆನ್ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com