ದೆಹಲಿ: ಬ್ಯಾರಿಕೇಡ್‌ಗಳನ್ನು ದಾಟಿ ಕುಸ್ತಿಪಟುಗಳ ಪ್ರತಿಭಟನಾ ಸ್ಥಳಕ್ಕೆ ತಲುಪಿದ ರೈತರ ಗುಂಪು; ವಿಡಿಯೋ

ದೇಶದ ರಾಜಧಾನಿ ದೆಹಲಿಯ ಜಂತರ್ ಮಂತರ್ ಬಳಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದು ರೈತರ ತಂಡವೊಂದು ಬ್ಯಾರಿಕೇಡ್ ಗಳನ್ನು ಪಕ್ಕಕ್ಕೆ ತಳ್ಳಿ ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದಾರೆ.
ರೈತರು
ರೈತರು
Updated on

ನವದೆಹಲಿ: ದೇಶದ ರಾಜಧಾನಿ ದೆಹಲಿಯ ಜಂತರ್ ಮಂತರ್ ಬಳಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದು ರೈತರ ತಂಡವೊಂದು ಬ್ಯಾರಿಕೇಡ್ ಗಳನ್ನು ಪಕ್ಕಕ್ಕೆ ತಳ್ಳಿ ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದಾರೆ. 

ಈ ಬಗ್ಗೆ ದೆಹಲಿ ಪೊಲೀಸರು, ರೈತರ ಗುಂಪೊಂದು ಜಂತರ್ ಮಂತರ್‌ಗೆ ಬಂದಿತ್ತು. ಈ ವೇಳೆ ರಸ್ತೆಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ಪಕ್ಕಕ್ಕೆ ತಳ್ಳಿ ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದಾರೆ. ಬ್ಯಾರಿಕೇಡ್ ಗಳನ್ನು ಹತ್ತಿಳಿಯುವಾಗ ಕೆಲವರು ಬಿದ್ದು ಗಾಯಗೊಂಡಿದ್ದಾರೆ ಎಂದರು. 

ಜಂತರ್ ಮಂತರ್‌ನಲ್ಲಿ ಪರಿಸ್ಥಿತಿಯನ್ನು ಸುಗಮಗೊಳಿಸಲಾಗುತ್ತಿದೆ. ಭದ್ರತೆಯನ್ನು ಖಚಿತಪಡಿಸಿಕೊಳ್ಳಲು DFMD ಮೂಲಕ ಪ್ರವೇಶವನ್ನು ನಿಯಂತ್ರಿಸಲಾಗುತ್ತಿದೆ. ದಯವಿಟ್ಟು ಶಾಂತಿಯುತವಾಗಿರಿ ಮತ್ತು ಕಾನೂನನ್ನು ಅನುಸರಿಸಿ ಎಂದು ಪ್ರತಿಭಟನಾನಿರತರಿಗೆ ಸೂಚಿಸಲಾಗಿದೆ ಎಂದರು. 

ಕುಸ್ತಿಪಟುಗಳನ್ನು ಬೆಂಬಲಿಸಿ, ಖಟ್ಕರ್ ಟೋಲ್ ಪ್ಲಾಜಾ ಸಮಿತಿ, ಖೇಡಾ ಖಾಪ್ ಮತ್ತು ಹರಿಯಾಣದ ಜಿಂದ್‌ನ ರೈತ ಸಂಘಟನೆಗಳಿಗೆ ಸಂಬಂಧಿಸಿದ ರೈತರು ಸೋಮವಾರ ದೆಹಲಿಗೆ ತೆರಳಿದ್ದರು. ರೈತರು ಮತ್ತು ಖಾಪ್ ಸದಸ್ಯರು ಡಬ್ಲ್ಯುಎಫ್ಐ ಮುಖ್ಯಸ್ಥ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿದರು. ಅಲ್ಲದೆ ಕುಸ್ತಿಪಟುಗಳ ಪ್ರತಿಭಟನೆಯನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ ಅವರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಖೇಡಾ ಖಾಪ್ ಮುಖ್ಯಸ್ಥ ಸತ್ಬೀರ್ ಪಹಲ್ವಾನ್ ಮಾತನಾಡಿ, ಕುಸ್ತಿಪಟುಗಳು ದೇಶದ ಹೆಮ್ಮೆ, ಅವರು ಕ್ರೀಡೆಯ ಮೂಲಕ ದೇಶವನ್ನು ವಿಶ್ವದಲ್ಲೇ ಖ್ಯಾತಿಗೊಳಿಸಿದ್ದಾರೆ. ಅದೇ ಕುಸ್ತಿಪಟುಗಳು ಇಂದು ಧರಣಿ ಕುಳಿತಿದ್ದಾರೆ. ಪ್ರತಿಭಟನಾನಿರತ ಆಟಗಾರರ ಮಾತನ್ನು ಕೇಳುವ ಬದಲು ಸರ್ಕಾರ ಬ್ರಿಜ್ ಭೂಷಣ್ ಅವರನ್ನು ರಕ್ಷಿಸುತ್ತಿದೆ ಮತ್ತು ಅವರನ್ನು ಇಲ್ಲಿಯವರೆಗೆ ಸ್ಥಾನದಿಂದ ತೆಗೆದುಹಾಕಿಲ್ಲ ಎಂದು ಅವರು ಆರೋಪಿಸಿದರು. ಆಟಗಾರರಿಗೆ ನ್ಯಾಯ ಸಿಗದವರೆಗೆ ರೈತರು ಮತ್ತು ಖಾಪೆನ್ ಅವರ ಜೊತೆ ನಿಲ್ಲುತ್ತಾರೆ ಎಂದರು. 

ವಾಸ್ತವವಾಗಿ, ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕೆಲವು ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಅಪ್ರಾಪ್ತೆ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳ ದೂರುಗಳ ಆಧಾರದ ಮೇಲೆ ದೆಹಲಿ ಪೊಲೀಸರು ಏಪ್ರಿಲ್ 28ರಂದು ಸಿಂಗ್ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದರು. ಈ ವಿಷಯದ ಕುರಿತು, ಕುಸ್ತಿಪಟುಗಳ ಗುಂಪು (ಬಜರಂಗ್ ಪುನಿಯಾ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್) ಸೇರಿದಂತೆ ಅನೇಕ ಖ್ಯಾತ ಕುಸ್ತಿಪಟುಗಳು 2023ರ ಏಪ್ರಿಲ್ 23ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com