ಕುತೂಹಲ ಮೂಡಿಸಿದ ನವೀನ್- ನಿತೀಶ್ ಭೇಟಿ; ವಿಪಕ್ಷಗಳ ಒಕ್ಕೂಟದ ಬಗ್ಗೆ ಪಟ್ನಾಯಕ್ ಹೇಳಿದ್ದು ಹೀಗೆ...

2024 ರ ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಒಕ್ಕೂಟ ರಚಿಸುವ ಪ್ರಯತ್ನದ ಭಾಗವಾಗಿ ಇಂದು ಬಿಹಾರ ಸಿಎಂ ನಿತೀಶ್ ಕುಮಾರ್ ಒಡಿಶಾ ಸಿಎಂ, ಬಿಜು ಜನತಾದಳದ ನಾಯಕ ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡಿದರು. 
ನಿತೀಶ್ ಕುಮಾರ್-ನವೀನ್ ಪಟ್ನಾಯಕ್ ಭೇಟಿ
ನಿತೀಶ್ ಕುಮಾರ್-ನವೀನ್ ಪಟ್ನಾಯಕ್ ಭೇಟಿ

ಭುವನೇಶ್ವರ್: 2024 ರ ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಒಕ್ಕೂಟ ರಚಿಸುವ ಪ್ರಯತ್ನದ ಭಾಗವಾಗಿ ಇಂದು ಬಿಹಾರ ಸಿಎಂ ನಿತೀಶ್ ಕುಮಾರ್ ಒಡಿಶಾ ಸಿಎಂ, ಬಿಜು ಜನತಾದಳದ ನಾಯಕ ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡಿದರು. 

ಇತ್ತೀಚೆಗೆ ನಿತೀಶ್ ಕುಮಾರ್ ಹಾಗೂ ಅವರ ಸರ್ಕಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದರು. ಮಮತಾ ಬ್ಯಾನರ್ಜಿ ಕೆಲವು ದಿನಗಳ ಹಿಂದೆ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.

ನಿತೀಶ್ ಕುಮಾರ್ ನವೀನ್ ಪಟ್ನಾಯಕ್ ಅವರ ಬಳಿ ವೈಯಕ್ತಿಕ ಸಂಬಂಧಕ್ಕೆ ಒತ್ತು ನೀಡಿದ್ದು, ರಾಜಕೀಯ ಚರ್ಚೆಗಳ ಬಗ್ಗೆ ಹೆಚ್ಚಿನ ಚಿಂತೆ ಅನಗತ್ಯ ಎಂದು ಹೇಳಿದ್ದಾರೆ ಅಷ್ಟೇ ಅಲ್ಲದೇ ಪಟ್ನಾಯಕ್ ಸಹ ಈ ಭೇಟಿಯ ವೇಳೆ ಮೈತ್ರಿ ವಿಚಾರವಾಗಿ ಯಾವುದೇ ಚರ್ಚೆಯೂ ನಡೆದಿಲ್ಲ ಎಂದು ಹೇಳಿದ್ದಾರೆ. 

ನಮ್ಮದು ಎಲ್ಲರಿಗೂ ತಿಳಿದಿರುವಂತೆ ಅತ್ಯುತ್ತಮ ಗೆಳೆತನವಾಗಿದೆ, ಹಲವು ವರ್ಷಗಳ ಹಿಂದೆ ನಾವಿಬ್ಬರೂ ಸಹೋದ್ಯೋದಿಗಳಾಗಿದ್ದೆವು (ವಾಜಪೇಯಿ ಸರ್ಕಾರ) ಇವತ್ತಿನ ಭೇಟಿಯಲ್ಲಿ ಮೈತ್ರಿಯ ವಿಚಾರವಾಗಿ ಯಾವುದೇ ಮಾತುಕತೆ ನಡೆದಿಲ್ಲ ಎಂದು ಒಡಿಶಾ ಸಿಎಂ ಹೇಳಿದ್ದಾರೆ. ನವೀನ್ ಪಟ್ನಾಯಕ್ ಬಿಜೆಪಿ ಹಾಗೂ ಕಾಂಗ್ರೆಸ್ ನ ಯಾವುದೇ ಮೈತ್ರಿಕೂಟಕ್ಕೆ ಸೇರದೇ ತಟಸ್ಥವಾಗಿದ್ದಾರೆ.  ಈಗ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿರುವುದು ಕೂತೂಹಲ ಮೂಡಿಸಿದೆ. ಮೇ.18 ರಂದು ವಿಪಕ್ಷಗಳ ನಾಯಕರ ಸಭೆಯನ್ನು ಆಯೋಜಿಸಲು ನಿತೀಶ್ ಕುಮಾರ್ ಯತ್ನಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com