ಜೆಡಿಯು ನಾಯಕ ಆರ್ ಸಿಪಿ ಸಿಂಗ್ ಬಿಜೆಪಿ ಸೇರ್ಪಡೆ, ನಿತೀಶ್ ಪಿಎಂ ಆಗಿಯೇ ಇರುತ್ತಾರೆ ಎಂದಿದ್ದು ಯಾಕೆ ಅಂದರೆ...

ಜೆಡಿಯು ನಾಯಕ ಆರ್ ಸಿಪಿ ಸಿಂಗ್ ಪಕ್ಷ ತೊರೆದು ಇಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.
ಬಿಜೆಪಿ ಸೇರಿದ ಆರ್ ಸಿಪಿ ಸಿಂಗ್
ಬಿಜೆಪಿ ಸೇರಿದ ಆರ್ ಸಿಪಿ ಸಿಂಗ್

ನವದೆಹಲಿ: ಜೆಡಿಯು ನಾಯಕ ಆರ್ ಸಿಪಿ ಸಿಂಗ್ ಪಕ್ಷ ತೊರೆದು ಇಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.

ಬಿಜೆಪಿ ಸೇರ್ಪಡೆಯಾದ ಬಳಿಕ ಮಾತನಾಡಿದ ಆರ್ ಸಿಪಿ ಸಿಂಗ್, ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಖುರ್ಚಿಗಾಗಿ ಅಪರಾಧ ಹಾಗೂ ಭ್ರಷ್ಟಾಚಾರದೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಒಂದು ಕಾಲದಲ್ಲಿ ನಿತೀಶ್ ಕುಮಾರ್ ಗೆ ಆಪ್ತರಾಗಿದ್ದ ಆರ್ ಸಿಪಿ ಸಿಂಗ್, ಈಗ ಬಿಜೆಪಿ ಸೆರಿದ್ದು, ಮುಂದೊಂದು ದಿನ ನಿತೀಶ್ ಗೆ ಬಿಹಾರದಲ್ಲಿ ಏನೂ ಉಳಿಯುವುದಿಲ್ಲ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರನ್ನು ಹೊಗಳಿರುವ ಆರ್ ಸಿ ಪಿ ಸಿಂಗ್, ಪ್ರಧಾನಿ ಮೋದಿ ಬಡವರಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
 
ಬಿಹಾರ ಸಿಎಂ ನಿತೀಶ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಸಿಂಗ್, ನಿತೀಶ್ ಅವರನ್ನು ಪಿಎಂ (ಪಲ್ಟಿ ಮಾರ್, ಯು-ಟರ್ನ್ ಮಾಡುವ ವ್ಯಕ್ತಿ) ಎಂದು ವ್ಯಂಗ್ಯವಾಡಿದ್ದು, ಅವರು ಪಿಎಂ ಆಗಿಯೇ ಇರುತ್ತಾರೆ ಎಂದು ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com