ಹವಾಮಾನ ಬದಲಾವಣೆ ವಿರುದ್ಧ ಯುವ ಜನತೆಯ ಹೋರಾಟಕ್ಕೆ ಪ್ರೋತ್ಸಾಹ: ಕೇಂದ್ರದಿಂದ 'ಮೇರಿ ಲೈಫ್' ಆ್ಯಪ್ ಬಿಡುಗಡೆ

ಯುವಜನತೆಯ ಸಶಕ್ತಿಕರಣ ಹಾಗೂ  ಹವಾಮಾನ ಬದಲಾವಣೆಗೆ ಕಡಿವಾಣ ಹಾಕುವ ಕಾರ್ಯದಲ್ಲಿ ಅವರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೋಮವಾರ 'ಮೇರಿ ಲೈಫ್' ಆ್ಯಪ್ ಅನಾವರಣಗೊಳಿಸಿದೆ.
ಮೇರಿ ಲೈಪ್ ಆ್ಯಪ್
ಮೇರಿ ಲೈಪ್ ಆ್ಯಪ್

ನವದೆಹಲಿ: ಯುವಜನತೆಯ ಸಶಕ್ತಿಕರಣ ಹಾಗೂ  ಹವಾಮಾನ ಬದಲಾವಣೆಗೆ ಕಡಿವಾಣ ಹಾಕುವ ಕಾರ್ಯದಲ್ಲಿ ಅವರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೋಮವಾರ 'ಮೇರಿ ಲೈಫ್' ಆ್ಯಪ್ ಅನಾವರಣಗೊಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಮಿಷನ್ ಲೈಪ್ ಆ್ಯಪ್ ನಿಂದ ಪ್ರೇರಣೆಗೊಂಡು ಇದನ್ನು ಅಭಿವೃದ್ಧಿಪಡಿಸಲಾಗಿದೆ. ಮೇರಿ ಲೈಫ್ ನಲ್ಲಿನ ಲೈಫ್ ಎಂಬ ಪದ ಪರಿಸರಕ್ಕಾಗಿ ಜೀವನ ಶೈಲಿ ಎಂಬ ಅರ್ಥ ಕೊಡುತ್ತದೆ. ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಷ್ಟ್ರವ್ಯಾಪಿ ಆಂದೋಲನ ಕೈಗೊಳ್ಳುವುದಕ್ಕೆ ಈ ಆ್ಯಪ್ ನೆರವಾಗಲಿದೆ. ನಾಗರಿಕರ ಶಕ್ತಿ ಪ್ರದರ್ಶನಕ್ಕೂ ವೇದಿಕೆ ಕಲ್ಪಿಸಲಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಹೇಳಿದ್ದಾರೆ. 

ಪರಿಸರ ರಕ್ಷಣೆ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಸುಸ್ಥಿರ ಚಟುವಟಿಕೆಗಳ ಕುರಿತು ಇದರ ಮೂಲಕ ಜಾಗೃತಿ ಮೂಡಿಸಬಹುದಾಗಿದೆ. ಆ್ಯಪ್ ಕುರಿತು ಜನರಲ್ಲಿ ಅರಿವು ಮೂಡಿಸಲು ಒಂದು ತಿಂಗಳ ತಿಂಗಳ ಅಭಿಯಾನ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com